ಕರ್ನಾಟಕ

karnataka

ETV Bharat / bharat

ಸೀರೆ ಉಟ್ಟು ಬಂದ ಮಹಿಳೆಯರಿಗೆ ಪ್ರವೇಶವಿಲ್ಲ ಎಂದಿದ್ದ ರೆಸ್ಟೋರೆಂಟ್ ಸ್ಪಷ್ಟನೆ ನೀಡಿದ್ದು ಹೀಗೆ..

ಮಹಿಳೆಗೆ ರೆಸ್ಟೋರೆಂಟ್ ಸಿಬ್ಬಂದಿ ಸೀರೆ ಧರಿಸಿ ಬಂದ ಮಹಿಳೆಯರಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಹೇಳುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ರೆಸ್ಟೋರೆಂಟ್ ಸ್ಪಷ್ಟನೆ ನೀಡಿದೆ.

By

Published : Sep 23, 2021, 8:11 PM IST

Updated : Sep 23, 2021, 8:17 PM IST

Delh restaurant
Delh restaurant

ನವದೆಹಲಿ: ಸೀರೆ ಉಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪ ಎದುರಿಸುತ್ತಿರುವ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್ ಇದೀಗ ಸಾಂಪ್ರದಾಯಿಕ ಅಥವಾ ಆಧುನಿಕ ಉಡುಪು ತೊಟ್ಟು ಬರುವ ಎಲ್ಲರನ್ನೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದೆ.

ನಿನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅನಿತಾ ಚೌಧರಿ ಎಂಬ ಮಹಿಳೆ ಅಪ್​ಲೋಡ್​ ಮಾಡಿದ್ದ ವಿಡಿಯೋದಲ್ಲಿ ಸೀರೆ ಧರಿಸಿ ಬಂದ ಮಹಿಳೆಯರಿಗೆ ಇಲ್ಲಿ ಪ್ರವೇಶವಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳುತ್ತಿರುವುದು ಕಂಡು ಬಂದಿತ್ತು. ಈ ವಿಡಿಯೋ ಕಂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಕ್ವಿಲಾ ರೆಸ್ಟೋರೆಂಟ್ ಸ್ಪಷ್ಟನೆ ನೀಡಿದೆ. ನಮ್ಮದು ಭಾರತೀಯ ಸಮುದಾಯವನ್ನು ಗೌರವಿಸುವುದರಲ್ಲಿ ನಂಬಿಕೆಯಿಟ್ಟಿರುವ ಒಂದು ಸ್ವದೇಶಿ ಬ್ರಾಂಡ್. ಇದು ಸಾಂಪ್ರದಾಯಿಕ ಉಡುಪಿನಿಂದ ಆಧುನಿಕದವರೆಗಿನ ಯಾವುದೇ ಡ್ರೆಸ್ ಕೋಡ್‌ಗಳಲ್ಲಿ ಬರುವ ಅತಿಥಿಗಳನ್ನು ಯಾವಾಗಲೂ ಸ್ವಾಗತಿಸುತ್ತದೆ" ಎಂದು ಬರೆದುಕೊಂಡಿದೆ.

"ನಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ಆ ಮಹಿಳೆ ಹೆಸರಿನಲ್ಲಿ ಯಾವುದೇ ಮೀಸಲಾತಿ ಇರದ ಕಾರಣ ಅವರನ್ನು ಗೇಟ್‌ನಲ್ಲಿ ಕಾಯುವಂತೆ ವಿನಂತಿಸಲಾಗಿತ್ತು. ಆದರೆ ಆ ಮಹಿಳೆ ರೆಸ್ಟೋರೆಂಟ್‌ಗೆ ಪ್ರವೇಶಿಸಿ ನಮ್ಮ ಸಿಬ್ಬಂದಿಯನ್ನು ನಿಂದಿಸಲು, ಅವರನ್ನು ತಳ್ಳಿಲು ಆರಂಭಿಸಿದರು. ಅಲ್ಲದೇ ನಮ್ಮ ಮ್ಯಾನೇಜರ್​ ಕೆನ್ನೆಗೆ ಹೊಡೆದಿದ್ದಾರೆ" ಎಂದು ಆರೋಪ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳೆ ಈ ಆರೋಪಗಳು ಆಧಾರರಹಿತವಾಗಿದ್ದು, ತಾನೇ ಸೃಷ್ಟಿಸಿರುವ ವಿಡಿಯೋವನ್ನು ರೆಸ್ಟೋರೆಂಟ್ ಬಿಡುಗಡೆ ಮಾಡಿದೆ. ನಾನು ಅವರ ಯಾವ ಸಿಬ್ಬಂದಿಯನ್ನೂ ತಳ್ಳಲಿಲ್ಲ ಎಂದು ಹೇಳಿದ್ದಾರೆ.

Last Updated : Sep 23, 2021, 8:17 PM IST

ABOUT THE AUTHOR

...view details