ನವದೆಹಲಿ:ಭಾರೀ ಪ್ರಮಾಣದ ಮಾದಕವಸ್ತುವನ್ನು ಹೊಂದಿದ್ದ ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ದೆಹಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅವರ ಬಳಿಯಿದ್ದ 312.5 ಕೆಜಿ ಮೆಥಾಂಫೆಟಮೈನ್ ಮತ್ತು 10 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳು 2016 ರಿಂದ ಭಾರತದಲ್ಲಿಯೇ ವಾಸವಾಗಿದ್ದರು. ಡ್ರಗ್ಸ್ ನಿಯಂತ್ರಣ ಕಾರ್ಯಾಚರಣೆಯಡಿ ದಾಳಿ ನಡೆಸಲಾಗಿದೆ. ಈ ವೇಳೆ, ಅಫ್ಘಾನಿಸ್ತಾನ ಪ್ರಜೆಗಳು ಅವರಿಗೆ ಸೇರಿದ ಲಖನೌದ ಗೋದಾಮಿನಲ್ಲಿ 1200 ಕೋಟಿ ರೂಪಾಯಿ ಮೌಲ್ಯದ 312 ಕೆಜಿ ಮೆಥಾಂಫೆಟಮೈನ್ ಶೇಖರಿಸಿಟ್ಟಿರುವುದು ಪತ್ತೆಯಾಗಿದೆ.
ಇತಿಹಾಸದಲ್ಲಿಯೇ ಅತಿದೊಡ್ಡ ಡ್ರಗ್ಸ್ ಜಪ್ತಿ:ಇದು ದೇಶದ ಇತಿಹಾಸದಲ್ಲಿಯೇ ಮೆಥಾಂಫೆಟಮೈನ್ ಡ್ರಗ್ಸ್‌ನ ಅತಿದೊಡ್ಡ ಜಪ್ತಿಯಾಗಿದೆ. ಲಖನೌನ ಗೋದಾಮಿನಲ್ಲಿ 606 ಬ್ಯಾಗ್‌ಗಳಲ್ಲಿ ಇದನ್ನು ಶೇಖರಿಸಿಟ್ಟಿದ್ದರು. ಇದರೊಂದಿಗೆ 10 ಕೆಜಿ ಹೆರಾಯಿನ್ ಕೂಡ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದರು.
ಮೆಥಾಂಫೆಟಮೈನ್ ವಿಶ್ವದ ಅತ್ಯಂತ ದುಬಾರಿ ಡ್ರಗ್ಸ್ಗಳಲ್ಲಿ ಒಂದಾಗಿದೆ. ಅತ್ಯುತ್ತಮ ಗುಣಮಟ್ಟದ ಈ ಡ್ರಗ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ 30 ಸಾವಿರ ರೂ. ಬಿಕರಿಯಾಗಲಿದೆ. ಮೆಥಾಂಫೆಟಮೈನ್ ಶಕ್ತಿಯುತ ಮತ್ತು ಹೆಚ್ಚು ವ್ಯಸನಕಾರಿ ಉತ್ತೇಜಕವಾಗಿದೆ. ಇದು ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದನ್ನು ಏಕಾಗ್ರತೆ ಕೊರತೆಯ ಹೈಪರ್ ಆ್ಯಕ್ವಿಟವ್ ಡಿಸಾರ್ಡರ್ ಮತ್ತು ನಾರ್ಕೊಲೆಪ್ಸಿ, ನಿದ್ರೆಯ ಕೊರತೆಯ ಔಷಧಗಳಲ್ಲಿ ಇದನ್ನು ಬಳಸುತ್ತಾರೆ.
ಓದಿ:ಹಾಡಹಗಲೇ ಫೈನಾನ್ಸ್ ಕಂಪನಿ ದರೋಡೆ ಯತ್ನ.. ಗುಂಡಿನ ದಾಳಿಯಲ್ಲಿ ಓರ್ವ ಕಳ್ಳ ಹತ