ಕರ್ನಾಟಕ

karnataka

ETV Bharat / bharat

ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್​​ ಕಡ್ಡಾಯ: ದೆಹಲಿ ಹೈಕೋರ್ಟ್ ಆದೇಶ

ದೇಶದಲ್ಲಿ ಅದ್ರಲ್ಲೂ ಪ್ರಮುಖವಾಗಿ ದೆಹಲಿಯಲ್ಲಿ ಇತ್ತೀಚೆಗೆ ಕೊರೊನಾ ಮಹಾಮಾರಿಯ ಅಬ್ಬರ ಜೋರಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದ ಜನರ ಬೇಜವಾಬ್ದಾರಿಯೂ ಇದಕ್ಕೆ ಕಾರಣ. ಇದನ್ನು ಮನಗಂಡಿರುವ ದೆಹಲಿ ಹೈಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

delhi high court says mask is mandatory even if a person is driving alone
ಮಾಸ್ಕ್​​ ಕಡ್ಡಾಯ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

By

Published : Apr 7, 2021, 11:57 AM IST

ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಹೈಕೋರ್ಟ್, ಕಾರುಗಳಲ್ಲಿ ಒಬ್ಬರೇ ಸಂಚರಿಸುತ್ತಿದ್ದರೂ ಮಾಸ್ಕ್ ಕಡ್ಡಾಯ ಎಂದು ಮಹತ್ವದ ಆದೇಶ ನೀಡಿದೆ.

ಮಾಸ್ಕ್​​ ಕೊರೊನಾ ಸಾಂಕ್ರಾಮಿಕ ರೋಗ ತಡೆಯಲು ರಕ್ಷಣಾತ್ಮಕ ಕವಚವಾಗಿದೆ. ಇದು ಕೊರೊನಾ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾಸ್ಕ್ ಮೇಲಿನ ತಕರಾರು ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ಇದೇ ವೇಳೆ ಕೋರ್ಟ್‌ ರದ್ದುಗೊಳಿಸಿತು. ಒಬ್ಬ ವ್ಯಕ್ತಿಯು ಕಾರಿನಲ್ಲಿ ಕುಳಿತಿದ್ದರೂ ಸಹ ಕಾರು ಸಾರ್ವಜನಿಕ ಸ್ಥಳದಲ್ಲಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ : ದೇಶದಲ್ಲಿ ಮತ್ತೆ ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ABOUT THE AUTHOR

...view details