ನವದೆಹಲಿ: ದೆಹಲಿಯಲ್ಲಿ ಈವರೆಗೆ ಉಚಿತ ವಿದ್ಯುತ್ ಬಿಲ್ ಸಬ್ಸಿಡಿ ಪಡೆಯಲು ಬಹುಪಾಲು ಜನ ಅರ್ಹರಾಗಿದ್ದರು. ಆದರೆ, ಈ ನಿಯಮದಲ್ಲಿ ಈಗ ಬದಲಾವಣೆ ತರಲು ಆಪ್ ಸರ್ಕಾರ ಮುಂದಾಗಿದೆ. ಸಬ್ಸಿಡಿ ನಿಯಮಗಳನ್ನು ಬದಲಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿದೆ.
ಈ ಯೋಜನೆಗೆ ಒಪ್ಪಿಗೆ ನೀಡಿದರೆ ಮಾತ್ರ ಸಹಾಯಧನ ದೊರೆಯಲಿದೆಯಂತೆ. ಒಪ್ಪಿಗೆ ನೀಡದಿದ್ದರೆ ಬಳಕೆಗೆ ಅನುಗುಣವಾಗಿ ವಿದ್ಯುತ್ ಬಿಲ್ ಸಂಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ, ನೀಡಲಾದ ಅರ್ಜಿಯನ್ನು ತುಂಬದೇ ಬಿಟ್ಟರೂ ಯೋಜನೆಯ ಲಾಭವನ್ನು ಪಡೆಯಲು ಬಯಸುವುದಿಲ್ಲ ಎಂದು ಸರ್ಕಾರ ಪರಿಗಣಿಸುತ್ತದಂತೆ.
ದೆಹಲಿ ಸರ್ಕಾರವು ಗ್ರಾಹಕರಿಗೆ ಈಗ 200 ಯುನಿಟ್‌ಗಳವರೆಗೆ ಸಂಪೂರ್ಣ ಸಬ್ಸಿಡಿ ನೀಡುತ್ತಿದೆ. ಹಾಗೆ 200 ರಿಂದ 400 ಯೂನಿಟ್ ಬಳಕೆ ಮಾಡುವ ಜನರು ಬಿಲ್‌ನ ಶೇ.50ರಷ್ಟು ಹಣ ತುಂಬಬೇಕಿತ್ತು. ಆದರೆ, ಈಗ ನಿಯಮ ಬದಲಾವಣೆ ಆಗಲಿದೆ. ಗ್ರಾಹಕರು ಈ ಫಾರ್ಮ್ ಅನ್ನು ತಮ್ಮ ಹತ್ತಿರದ ವಿದ್ಯುತ್ ಬಿಲ್ ಕೇಂದ್ರಕ್ಕೆ ಸಲ್ಲಿಸಬಹುದು. ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್ ಮತ್ತು ಆನ್‌ಲೈನ್ ಅಪ್ಲಿಕೇಶನ್ ಸೌಲಭ್ಯವನ್ನೂ ಸಹ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿವೆ.