ನವದೆಹಲಿ: ಸತತ ಮೂರು ವಾರಗಳವರೆಗೆ ರಾಷ್ಟ್ರ ರಾಜಧಾನಿಯನ್ನು ಲಾಕ್‌ಡೌನ್ ಮಾಡಿದ ಪರಿಣಾಮ ಏ.19ರ ಬಳಿಕ ದೆಹಲಿಯ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಶೇ 35ರಿಂದ ಶೇ.21.67ಕ್ಕೆ ಇಳಿಕೆ ಕಂಡಿದೆ.
ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,336 ಕೇಸ್ಗಳು ಪತ್ತೆಯಾಗಿವೆ. ಮೃತರ ಸಂಖ್ಯೆ ಕೂಡ 300ರ ಗಡಿಯಿಂದ ಕೆಳಗಿಳಿದಿದ್ದು, ನಿನ್ನೆ 273 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ದೆಹಲಿಯಲ್ಲಿ ಮರಣ ಪ್ರಮಾಣ ಶೇಕಡಾ 1.46 ರಷ್ಟಿದೆ. ಈವರೆಗೆ ಒಟ್ಟು 13,23,567 ಸೋಂಕಿತರು ಪತ್ತೆಯಾಗಿದ್ದು, 19,344 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.