ನವದೆಹಲಿ: ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಮೂವರು ದುಷ್ಕರ್ಮಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸ್ಕ್ರೂಡ್ರೈವರ್‌ನಿಂದ ಕೊಲೆ ಮಾಡಿದ್ದಾರೆ. ಇದಾದ ಬಳಿಕ ತನ್ನ ಇಬ್ಬರು ಮಕ್ಕಳನ್ನು ಕೊಂದು ಮನೆಯನ್ನು ಲೂಟಿ ಮಾಡಿದ್ದರು. 2015ರಲ್ಲಿ ಖಯಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಬಾಲಕ ಸೇರಿದಂತೆ ನಾಲ್ವರ ವಿರುದ್ಧ ಮಹಿಳೆಯ ಪತಿ ಪ್ರಕರಣ ದಾಖಲಿಸಿದ್ದರು. ಮರಣದಂಡನೆಗೆ ಗುರಿಯಾದವರ ಹೆಸರುಗಳು ಶಾಹಿದ್, ಅಕ್ರಮ್ ಮತ್ತು ರಫತ್ ಅಲಿ ಅಲಿಯಾಸ್ ಮಂಜೂರ್ ಅಲಿ.
ತೀಸ್ ಹಜಾರಿ ನ್ಯಾಯಾಲಯದ ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಆಂಚಲ್ ಅವರು ಶಾಹಿದ್, ಅಕ್ರಮ್ ಮತ್ತು ರಫತ್ ಅಲಿ ಅಲಿಯಾಸ್ ಮಂಜೂರ್ ಅಲಿ ಸೇರಿ ಮೂವರು ಅಪರಾಧಿಗಳಿಗೆ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಮರಣದಂಡನೆ ವಿಧಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಗಿದೆ. ನ್ಯಾಯಾಲಯವು ಪ್ರತಿ ಅಪರಾಧಿಗೆ 35,000 ರೂಪಾಯಿ ದಂಡ ಸಹ ವಿಧಿಸಿದೆ. ಮೂವರೂ ತಪ್ಪಿತಸ್ಥರೆಂದು ಆಗಸ್ಟ್ 22ರಂದು ನ್ಯಾಯಾಲಯ ಘೋಷಿಸಿತ್ತು.
ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮೂವರು ಆರೋಪಿಗಳು ಮಾಡಿರುವ ತ್ರಿವಳಿ ಕೊಲೆ, ಅತ್ಯಾಚಾರ ಮತ್ತು ದರೋಡೆಯ ಘೋರ ಅಪರಾಧವಾಗಿದೆ. ಇದರ ನಂತರ, ಮೂವರು ಆರೋಪಿಗಳು ಮತ್ತು ಬಾಲಾಪರಾಧಿ ಸೇರಿದಂತೆ ನಾಲ್ವರೂ ಒಬ್ಬರ ನಂತರ ಒಬ್ಬರಂತೆ ದೆಹಲಿಯನ್ನು ತೊರೆದಿದ್ದರು. 2015ರ ಸೆಪ್ಟೆಂಬರ್ 23ರಂದು ಅಲಿಗಢದಲ್ಲಿ ಲೂಟಿ ಮಾಡಿದ ಹಣವನ್ನು ಹಂಚಿದ್ದ ವೇಳೆ ಇವರು ಪತ್ತೆಯಾಗಿದ್ದರು.
ಸ್ಕ್ರೂಡ್ರೈವರ್, ಟೀ ಶರ್ಟ್ ಮತ್ತು ಆಯುಧದ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದವು. ಶಾಹಿದ್, ರಫತ್ ಅಲಿ ಮತ್ತು ಅಕ್ರಮ್ ಈ ಅಪರಾಧಕ್ಕೆ ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕರೆ ದಾಖಲೆಗಳು ಸಹ ಸಮಂಜಸವಾದ ಆಧಾರವಾಗಿವೆ. ಘಟನೆಯ ದಿನವಾದ 19 ಸೆಪ್ಟೆಂಬರ್ 2015 ರಿಂದ 23 ಸೆಪ್ಟೆಂಬರ್ 2015 ರ ವರೆಗೆ ಲೂಟಿ ಮಾಡಿದ ಹಣವನ್ನು ಅವರ ನಡುವೆ ಹಂಚುವವರೆಗೆ ಮಾತುಕತೆಗಳು ಮುಂದುವರೆದವು ಎಂಬ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಿತು.
ಶಾಹಿದ್ ಮತ್ತು ಅಕ್ರಂ ಬಳಸಿದ ಸಿಮ್ ನಡುವೆ ನಿರಂತರ ಕರೆಗಳು ಇದ್ದವು, ಅದು ಮೂರು ಕೊಲೆಗಳ ಸಮಯಕ್ಕೆ ಹೊಂದಿಕೆಯಾಯಿತು. ಅಪರಾಧ ನಡೆದ ದಿನಾಂಕ ಮತ್ತು ನಾಲ್ವರು ಅಲಿಗಢದಲ್ಲಿದ್ದಾಗ ಹಲವಾರು ಕರೆಗಳು ನಡೆದಿವೆ. ಮೂರು ಕೊಲೆಗಳು, ಅತ್ಯಾಚಾರ ಮತ್ತು ದರೋಡೆಗಳ ಅಪರಾಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸೂಚಿಸುತ್ತದೆ. ಅಪರಾಧದ ರಹಸ್ಯವನ್ನು ಬಿಡಿಸುವಲ್ಲಿ ಇದು ಪ್ರಮುಖ ಕೊಂಡಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಮಹಿಳೆ, ಆಕೆಯ ಪತಿ ಮತ್ತು ಮಕ್ಕಳು ದೆಹಲಿಯ ರಘುಬೀರ್ ನಗರದಲ್ಲಿ ವಾಸಿಸುತ್ತಿದ್ದರು. ಮಹಿಳೆ ಹಾಗೂ ಮಕ್ಕಳಿಬ್ಬರು ಮನೆಯ ಎರಡನೇ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಅದೇ ವಿಳಾಸದಲ್ಲಿ ತನ್ನ ಕುಟುಂಬ ಬಾಡಿಗೆಗೆ ವಾಸಿಸುತ್ತಿದೆ ಎಂದು ಪತಿ ಪೊಲೀಸರಿಗೆ ತಿಳಿಸಿದ್ದರು. ಅವರು ಮೂಲತಃ ಯುಪಿಯ ಕಾಸ್ಗಂಜ್ ಜಿಲ್ಲೆಯವರು. ಹಳೆ ಜೀನ್ಸ್ ಪ್ಯಾಂಟ್ಗಳನ್ನು ಮಾರುತ್ತಿದ್ದ ಅವರು ಇದಕ್ಕಾಗಿ ಪ್ರತಿ ಶನಿವಾರ ಜೈಪುರಕ್ಕೆ ಹೋಗುತ್ತಿದ್ದರು. ಅದೇ ರೀತಿ 19 ಸೆಪ್ಟೆಂಬರ್ 2015 ರಂದು ರಾತ್ರಿ 09.30 ರ ಸುಮಾರಿಗೆ ಕಾರನ್ನು ಬಿಟ್ಟು ಜೈಪುರಕ್ಕೆ ಹೋಗಿದ್ದರು. ಇದಾದ ಬಳಿಕ ಈ ಭಯಾನಕ ಘಟನೆ ನಡೆದಿತ್ತು.
ಓದಿ:ಆಸ್ಪತ್ರೆಯಲ್ಲಿ ಪರಿಚಯ, ಲವ್.. ಇನ್ಸ್ಟಾದಲ್ಲಿ ನಿತ್ಯವೂ ನಗ್ನ ವಿಡಿಯೋ ಕಾಲ್ ಬೆದರಿಕೆ.. ಗಂಗಾವತಿಯಲ್ಲಿ ಕೃತ್ಯ