ನವದೆಹಲಿ:ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಮಿಲಿಟರಿ ಬಿಕ್ಕಟ್ಟಿನ ಮಧ್ಯೆಯೇ, ರಕ್ಷಣಾ ಗುಪ್ತಚರ ಸಂಸ್ಥೆಗಳು ಮಹತ್ವದ ಸಲಹೆಗಳನ್ನು ನೀಡಿವೆ. ಹೌದು, ಭಾರತ ಪಡೆಗಳು ಚೀನಾದ ಮೊಬೈಲ್ ಫೋನ್‌ಗಳನ್ನು ಬಳಸುತ್ತಿಲ್ಲವೇ ಎನ್ನುವುದನ್ನು ಖಚಿತಪಡಿಸಬೇಕು ಎಂದು ಸಲಹೆ ಕೊಟ್ಟಿವೆ.
"ರಕ್ಷಣಾ ಘಟಕಗಳು ಚೀನಾದ ಮೊಬೈಲ್ ಫೋನ್ ಸಾಧನಗಳನ್ನು ಬಗ್ಗೆ ಎಚ್ಚರಿಕೆವಹಿಸಬೇಕು. ರಕ್ಷಣಾ ವ್ಯಾಯಾಮ ಮಾಡುವ ವೇಳೆ, ವಿವಿಧ ರೂಪಗಳ ಮತ್ತು ಸಾಧನಗಳ ಮೂಲಕ ಸಿಬ್ಬಂದಿ ದುರ್ಬಲಗೊಳಿಸುವ ಸಾಧ್ಯತೆ ಹೆಚ್ಚಿದೆ'' ಎಂದು ರಕ್ಷಣಾ ಗುಪ್ತಚರ ಸಂಸ್ಥೆಗಳು ನೀಡಿದ ಸಲಹೆಯಲ್ಲಿ ತಿಳಿಸಲಾಗಿದೆ.
ಮಿಲಿಟರಿ ಬೇಹುಗಾರಿಕಾ ಏಜೆನ್ಸಿ ಸಲಹೆ:"ಪಡೆಗಳ ಮತ್ತು ಅವರ ಕುಟುಂಬಗಳು ಭಾರತಕ್ಕೆ ಪ್ರತಿಕೂಲವಾದ ಚೀನಾ ದೇಶದ ಫೋನ್‌ಗಳನ್ನು ಖರೀದಿಸುವುದು ಅಥವಾ ಬಳಸುವುದರ ಬಗ್ಗೆ ನಿರುತ್ಸಾಹ ತೋರಿಸಬೇಕು. ಏಜೆನ್ಸಿಗಳಿಂದ ಖರೀದಿಸಲಾದ ಚೀನಾ ಮೂಲದ ಮೊಬೈಲ್ ಫೋನ್‌ಗಳಲ್ಲಿ ದೇಶದ ರಕ್ಷಣೆ ಹಿನ್ನಲೆಯಲ್ಲಿ ಪ್ರತಿಕೂಲವಾದ ಅಂಶಗಳು ಇರುವುದು ಕಂಡುಬಂದಿದೆ ಎಂದು ಮಿಲಿಟರಿ ಬೇಹುಗಾರಿಕಾ ಏಜೆನ್ಸಿಯ ಮೂಲಗಳು ತಿಳಿಸಿವೆ.
ಚೀನಾ ಮೊಬೈಲ್ ಫೋನ್‌ಗಳು, ಅಪ್ಲಿಕೇಶನ್‌ಗಳನ್ನು ಬಳಸಬೇಡಿ:ಸಲಹೆಯೊಂದಿಗೆ ಲಗತ್ತಿಸಲಾದ ಪಟ್ಟಿಯಲ್ಲಿ ಉಲ್ಲೇಖಿಸಲಾದ "ಚೀನಾದ ಫೋನ್‌ಗಳ ವಿರುದ್ಧವಾಗಿ ಇತರ ಫೋನ್‌ಗಳನ್ನು ಬಳಸಲು ಮುಂದಾಗಬೇಕು'' ಎಂದು ರಕ್ಷಣಾ ಗುಪ್ತಚರ ಸಂಸ್ಥೆಗಳು ಹೇಳಿವೆ. ದೇಶದಲ್ಲಿ ವಾಣಿಜ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನೀ ಮೊಬೈಲ್ ಫೋನ್‌ಗಳು ನೋಡೋದಾದ್ರೆ, ವಿವೋ, ಓಪ್ಪೊ, ಎಂಐ, ಓನ್ಪ್ಲಸ್, ಹೊನರ್, ರಿಯಲ್ ಮೀ, ಜೆಡ್ಟಿಇ, ಜಿಯೋನಿ, ಎಎಸ್ಯುಎಸ್ ಇನ್ಫಿನಿಕ್ಸ್ ಜಿ.
ಮಿಲಿಟರಿ ಸಿಬ್ಬಂದಿಯ ಫೋನ್‌ಗಳಿಂದ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಅಳಿಸಿಹಾಕಿದ್ದಾರೆ. ಈ ಹಿಂದೆ, ಚೀನಾದ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳ ವಿರುದ್ಧ ಗೂಢಚಾರಿಕೆ ಸಂಸ್ಥೆಗಳು ತುಂಬಾ ಸಕ್ರಿಯ ಕಾರ್ಯನಿರ್ವಹಿಸುತ್ತಿವೆ. ರಕ್ಷಣಾ ಪಡೆಗಳು ತಮ್ಮ ಸಾಧನಗಳಲ್ಲಿ ಚೀನಾ ಮೊಬೈಲ್ ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿವೆ.