ಫತೇಪುರ, ಉತ್ತರಪ್ರದೇಶ :ಫತೇಪುರ ಜಿಲ್ಲೆಯ ಶವಾಗಾರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೃತ ದೇಹವನ್ನು ಕೊಡಲು ಇಬ್ಬರು ವ್ಯಕ್ತಿಗಳು ಎಂಟು ನೂರು ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಘಟನೆ ಕುರಿತು ಸಿಎಂಒ ಅವರಿಗೆ ಮಾಹಿತಿ ನೀಡಲಾಗಿದೆ. ವಿಡಿಯೋ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ, ತನಿಖೆ ನಂತರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂಒ ಅಶೋಕ್ ಕುಮಾರ್ ಹೇಳಿದ್ದಾರೆ. (ಆದರೆ 'ಈಟಿವಿ ಭಾರತ' ಈ ವೈರಲ್ ವಿಡಿಯೋವನ್ನು ಖಚಿತಪಡಿಸುತ್ತಿಲ್ಲ. ಇದು ವೈರಲ್ ವಿಡಿಯೋ ಆಗಿದ್ದು, ಖಚಿತತೆ ಸಿಕ್ಕಿಲ್ಲ)
ವೈರಲ್ ವಿಡಿಯೋದಲ್ಲೇನಿದೆ? : ಫತೇಪುರ್ ಜಿಲ್ಲಾ ಆಸ್ಪತ್ರೆಯ ಶವಾಗಾರದ ವೈರಲ್ ವಿಡಿಯೋದಲ್ಲಿ ಶವಾಗಾರದಲ್ಲಿದ್ದ ಇಬ್ಬರು ಮೃತದೇಹವನ್ನು ಹಸ್ತಾಂತರಿಸಲು ಎಂಟು ನೂರು ರೂಪಾಯಿಗಳನ್ನು ಕೇಳಿದ್ದಾರೆ. ಈ ವಿಚಾರವಾಗಿ ಮೃತರ ಕುಟುಂಬದವರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಆರೋಗ್ಯ ಇಲಾಖೆಯಲ್ಲಿ ಸಂಚಲನ ಮೂಡಿದ್ದು, ಕೂಡಲೇ ವಿಡಿಯೋ ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಿಎಂಒ ಸೂಚಿಸಿದ್ದಾರೆ. ಹಣ ಕೇಳಿರುವವರ ಹೆಸರು ಆದಿಲ್ ಮತ್ತು ಹಣ ಪಡೆದವರ ಹೆಸರು ಮುನ್ನಾ ಎಂದು ಹೇಳಲಾಗಿದೆ.