ಲಕ್ನೋ:ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಮಾಜಿ ಸಚಿವೆ ಸ್ವಾತಿ ಸಿಂಗ್ ಅಂತಿಮಾಗಿ ನ್ಯಾಯಾಲಯದ ತೀರ್ಪಿನಿಂದ ತಮ್ಮ ವೈವಾಹಿಕ ಸಂಬಂಧವನ್ನು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಕೊನೆಗೊಳಿಸಿದ್ದಾರೆ. ಹೌದು, 22 ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ತಮ್ಮ ದಾಂಪತ್ಯದ ಜೀವನದಲ್ಲಿ ಬಿರುಕು ಮೂಡಿದ್ದರಿಂದ, ದಯಾಶಂಕರ್ ಸಿಂಗ್ ಪತ್ನಿ ಮಾಜಿ ಸಚಿವೆ ಸ್ವಾತಿ ಸಿಂಗ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಸೆಪ್ಟೆಂಬರ್ 20, 2022 ರಂದೇ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ಈ ಕುರಿತು ಅಂತಿಮ ತೀರ್ಪು ನೀಡಿದೆ.
ಸಂಬಂಧ ಮುಕ್ತರಾಗಲು ಬಯಸಿದ್ದಾದರು ಏಕೆ?: ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಸ್ವಾತಿ ಸಿಂಗ್ ಪ್ರೇಮ ವಿವಾಹವಾಗಿದ್ದರೂ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಅವರ ನಡುವೆ ಯಾವುದೇ ವೈವಾಹಿಕ ಸಂಬಂಧ ಕೂಡ ಇರಲಿಲ್ಲ.
ಇದರಿಂದ 2012 ರಲ್ಲಿಯೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ದಿನಾಂಕದಂದು ನ್ಯಾಯಾಲಯಕ್ಕೆ ಸರಿಯಾದ ಸಮಯಕ್ಕೆ ತಲುಪದಿದ್ದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಪುನಃ ಸೆಪ್ಟೆಂಬರ್ 20. 2022 ರಂದು ಮಾಜಿ ಸಚಿವೆ ಸ್ವಾತಿ ಸಿಂಗ್ ಮತ್ತೆ ಅದೇ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಅದನ್ನು ಮಾನ್ಯ ಮಾಡಿರಲಿಲ್ಲ.
ಇದನ್ನೂ ಓದಿ:ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ: 7500 ಗ್ರೂಪ್ ಬಿ ಮತ್ತು ಸಿ ಹುದ್ದೆಗೆ ಅರ್ಜಿ ಆಹ್ವಾನ