ಕರ್ನಾಟಕ

karnataka

By

Published : Sep 23, 2022, 5:10 PM IST

ETV Bharat / bharat

ಆರು ವರ್ಷಗಳ ಹಿಂದೆ ಮಗ ಸಾವು: ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪುತ್ರಿಯರು

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಹೆಣ್ಣುಮಕ್ಕಳೇ ತಂದೆಯ ಎಲ್ಲ ಅಂತಿಮ ಕರ್ತವ್ಯಗಳನ್ನು ಮಗನಂತೆ ನಿರ್ವಹಿಸುತ್ತಿದ್ದಾರೆ.

daughters-perform-last-rites-of-father-in-mathura
ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪುತ್ರಿಯರು

ಮಥುರಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋವರ್ಧನ್ ತಾಲೂಕಿನ ಸಂಖ್ ಪಟ್ಟಣದಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದ ಕಾರ್ಯವನ್ನು ಇಬ್ಬರು ಹೆಣ್ಣುಮಕ್ಕಳೇ ಮುಂದೆ ನಿಂತು ನೆರವೇರಿಸಿದ್ದಲ್ಲದೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.

ಇಲ್ಲಿನ ನಿವಾಸಿಯಾದ 52 ವರ್ಷದ ವೈದ್ಯ ಪುಷ್ಪೇಂದ್ರ ಚತುರ್ವೇದಿ ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದರು. ಇವರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಇವರ ಏಕೈಕ ಮಗ ಆರು ವರ್ಷಗಳ ಹಿಂದೆಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪುತ್ರಿಯರಾದ ಕಿಮಿ ಚತುರ್ವೇದಿ ಮತ್ತು ಮಿನಿ ಚತುರ್ವೇದಿ ಅವರನ್ನು ಗಂಡು ಮಕ್ಕಳಂತೆ ತಂದೆ ಪುಷ್ಪೇಂದ್ರ ನೋಡಿಕೊಳ್ಳುತ್ತಿದ್ದರು.

ಸಾಮಾನ್ಯವಾಗಿ ತಂದೆಯ ಚಿತೆಗೆ ಮಗ ಅಗ್ನಿಸ್ಪರ್ಶ ಮಾಡಬೇಕಿತ್ತು. ಆದರೆ, ಈ ಮಗ ತೀರಿಕೊಂಡು ಕಾರಣ ಈಗ ಹೆಣ್ಣುಮಕ್ಕಳೇ ತಂದೆಯ ಎಲ್ಲ ಅಂತಿಮ ಕರ್ತವ್ಯಗಳನ್ನು ಮಗನಂತೆ ನಿರ್ವಹಿಸುತ್ತಿದ್ದಾರೆ. ರುದ್ರಭೂಮಿಗೆ ಬಂದು ಸಂಪ್ರದಾಯದಂತೆ ಅಂತಿಮ ಸಂಸ್ಕಾರವನ್ನು ಪುತ್ರಿಯರು ನೆರವೇರಿಸಿದ್ದಾರೆ.

ಇದನ್ನೂ ಓದಿ:ಹಾಸ್ಟೆಲ್​ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ: ಸಾವಿನ ಸತ್ಯ ತೆರೆದಿಟ್ಟ ಡೆತ್​ ನೋಟ್​

ABOUT THE AUTHOR

...view details