ಸಂಭಾಲ್ (ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ದಲಿತ ಕುಟುಂಬದ ಮಗಳ ಮದುವೆ ಮೆರವಣಿಗೆಯನ್ನು ಪೊಲೀಸ್ ಭದ್ರತೆಯಲ್ಲಿ ನಡೆಯಿತು. ಬಿಗಿ ಭದ್ರತೆಯಿಂದ ಪೊಲೀಸರು, ದಲಿತ ಸಮುದಾಯಯೊಂದರ ಮಧುಮಗಳನ್ನು ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಪೊಲೀಸರು ಡ್ರೋನ್ ಮೂಲಕ ಮೆರವಣಿಗೆಯ ಮೇಲೆ ಸಂಪೂರ್ಣ ನಿಗಾವಹಿಸಿದ್ದರು. ಆದರೆ, ಪೊಲೀಸರ ಭದ್ರತಾ ವ್ಯವಸ್ಥೆಯಿಂದ ದಲಿತ ಕುಟುಂಬವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರೌಡಿಗಳು ಬೆದರಿಕೆ ಹಾಕಿರುವ ಹಿನ್ನೆಲೆ:ಗುನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಘುಂಗಯ್ಯ ಗ್ರಾಮದಲ್ಲಿ ಪೊಲೀಸ್ ರಕ್ಷಣೆಯ ನಡುವೆ ದಲಿತ ಕುಟುಂಬದ ಮಧುಮಗಳ ಮೆರವಣಿಗೆಯನ್ನು ನಡೆಸಲಾಗಿದೆ. ಈ ಗ್ರಾಮದ ಶೀಲಾ ಎಂಬ ದಲಿತ ಮಹಿಳೆಯೊಬ್ಬರ ಮಗಳ ಮದುವೆ ಮೆರವಣಿಗೆಯನ್ನು ತಡೆದು ರೌಡಿಗಳು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ರಕ್ಷಣೆ ಕೋರಲಾಗಿತ್ತು. ಫೆಬ್ರವರಿ 7ರಂದು ಅಲಿಗಢ್ ಜಿಲ್ಲೆಯ ಗ್ರಾಮದಿಂದ ತನ್ನ ಮಗಳ ಮದುವೆ ಮೆರವಣಿಗೆ ನಡೆಯಬೇಕಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಹಳ್ಳಿಯ ಪುಂಡರು ತಮ್ಮ ಮಗಳ ಮದುವೆ ಮೆರವಣಿಗೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಬಯಸಿದ್ದರು. ಇದಾದ ಬಳಿಕ ಪೊಲೀಸ್ ಆಡಳಿತವು ಕ್ರಮಕ್ಕೆ ಮುಂದಾಗಿದೆ.
ಡ್ರೋನ್ ಕ್ಯಾಮೆರಾ ಮೂಲಕ ಗ್ರಾಮದ ಮೇಲೆ ನಿಗಾ:ಮಹಿಳೆ ನೀಡಿದ ದೂರಿನ ಮೇರೆಗೆ ಎಸ್‌ಪಿ ಚಕ್ರೇಶ್ ಮಿಶ್ರಾ ಸಂತ್ರಸ್ತ ಮಹಿಳೆಗೆ ಭರವಸೆ ನೀಡಿದ್ದರು. ಅದರಂತೆ ಅವರ ಮಗಳ ಮದುವೆ ಮೆರವಣಿಗೆ ಸರಳವಾಗಿ ಜರುಗಿದೆ. ಎಸ್ಪಿ ಅವರ ಆದೇಶದ ಮೇರೆಗೆ ಮಂಗಳವಾರ ಬೆಳಗ್ಗೆಯಿಂದಲೇ ಇಡೀ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗ್ರಾಮದ ಮೂಲೆ ಮೂಲೆಗಳಲ್ಲಿ ಪೊಲೀಸ್ ಭದ್ರತೆ ಕೈಗೊಳಲಾಗಿತ್ತು.