ಕರ್ನಾಟಕ

karnataka

ETV Bharat / bharat

ಈ ದಿನದ ರಾಶಿ ಭವಿಷ್ಯ... ಮಂಗಳವೋ, ಅಮಂಗಳವೋ? - ಪಂಚಾಂಗ

ಸೋಮವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ...

Daily Horoscope
Daily Horoscope

By

Published : Aug 2, 2021, 6:07 AM IST

ಮೇಷ :ನೀವು ಇಂದು ಏನು ಮಾಡುತ್ತೀರೋ ಅದರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಬಯಸುತ್ತೀರಿ. ಹದಿವಯಸ್ಕರಿಗೆ ವಿಂಡೋ ಶಾಪಿಂಗ್ ಅಥವಾ ಚಲನಚಿತ್ರ ವೀಕ್ಷಣೆ ಮುಂತಾದ ಸಾಕಷ್ಟು ಮನರಂಜನೆ ಕಾಯುತ್ತಿದೆ. ಮಕ್ಕಳು ಟ್ರೀಟ್ ನೀಡುವಂತೆ ಒತ್ತಾಯ ಹೇರಬಹುದು. ಸಾಮಾನ್ಯವಾಗಿ ಕೌಟುಂಬಿಕ ವ್ಯವಹಾರಗಳು ಇಂದು ಪ್ರಭಾವಿಸುತ್ತವೆ.

ವೃಷಭ : ನೀವು ಇಂದು ಅತಿಯಾದ ಸ್ವಯಂ ಕೇಂದ್ರಿತವಾಗಿ ಬದಲಾಗುತ್ತೀರಿ. ಇದು ನಿಮ್ಮನ್ನು ಅತ್ಯಂತ ಅಸುರಕ್ಷಿತವಾಗಿಸಬಹುದು. ನಿಮಗೆ ಇತರರನ್ನು ನಿಯಂತ್ರಿಸುವ ಮತ್ತು ಪ್ರಭಾವ ಬೀರುವ ಪ್ರವೃತ್ತಿ ಇದೆ. ಆದ್ದರಿಂದ ಪ್ರಮುಖ ಬಾಂಧವ್ಯಗಳನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಸುತ್ತಮುತ್ತಲಿನ ಎಲ್ಲರ ಅಗತ್ಯಗಳು ಮತ್ತು ಭಾವನೆಗಳಿಗೆ ಸ್ಪಂದಿಸುವುದು ಉತ್ತಮ.

ಮಿಥುನ: ನಿಮ್ಮ ಸಾಮಾಜಿಕ ವೃತ್ತದಲ್ಲಿ ನಿಮ್ಮನ್ನು ನಾಯಕರಾಗಿ ಪ್ರತಿಷ್ಠೆ ಬೆಳೆಸಿಕೊಳ್ಳುತ್ತೀರಿ. ನಿಮ್ಮ ಹೃದಯದಲ್ಲಿ ಏನೋ ಒಂದಕ್ಕಾಗಿ ತುಡಿಯುತ್ತಿದ್ದೀರಿ ಮತ್ತು ನಿಮ್ಮ ಶಕ್ತಿಗಳನ್ನು ಅದನ್ನು ಸಾಧಿಸಲು ಕೇಂದ್ರೀಕರಿಸುವ ಅಗತ್ಯವಿದೆ. ನಿಮ್ಮ ಸೃಜನಶೀಲ ಮನಸ್ಸು ನಿಮ್ಮನ್ನು ಕೆಲ ಕಾಲದಿಂದ ಕಾಡುತ್ತಿರುವ ಪ್ರಶ್ನೆಗಳಿಗೆ ಪರಿಹಾರಗಳೊಂದಿಗೆ ಇಂದು ಬರುತ್ತದೆ.

ಕರ್ಕಾಟಕ : ದೇವರ ಅನುಗ್ರಹದಿಂದ ನೀವು ಏನನ್ನು ಆಲೋಚಿಸುತ್ತೀರಿ ಅಥವಾ ಪ್ರಯತ್ನಿಸುತ್ತೀರಿ ಅದರಲ್ಲಿ ಯಶಸ್ವಿಯಾಗುತ್ತೀರಿ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುತ್ತಾರೆ ಮತ್ತು ಬಾಕಿ ಕೆಲಸ ಮುಗಿಸುತ್ತಾರೆ. ನೀವು ನಿಮ್ಮ ಕಲ್ಪನಾಶಕ್ತಿಯನ್ನು ಅದ್ಭುತವಾಗಿ ಪ್ರದರ್ಶಿಸುತ್ತೀರಿ. ಚಿಕ್ಕದಾಗಿ ಹೇಳಬೇಕೆಂದರೆ, ಸಂತೋಷ ಮತ್ತು ವೈವಿಧ್ಯತೆಯ ದಿನವಾಗಿದೆ.

ಸಿಂಹ : ನಿಮ್ಮ ಬಹುತೇಕ ಸಮಯ ಕೆಲಸದ ಸ್ಥಳದಲ್ಲಿ ಕಳೆಯುತ್ತದೆ. ನೀವು ಇಂದು ಎಲ್ಲ ಕೆಲಸಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತೀರಿ. ವೃತ್ತಿ ಬಾಂಧವ್ಯಗಳು ಸಹಕಾರದಿಂದ ಕೂಡಿವೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮಗೆ ಸೌಹಾರ್ದಯುತ ಬಾಂಧವ್ಯಗಳಿವೆ. ವ್ಯಾಪಾರಕ್ಕೆ ಇದು ಪವಿತ್ರ ಹಾಗೂ ಪ್ರಗತಿಪರ ದಿನವಾಗಿದೆ.

ಕನ್ಯಾ : ನಿಮ್ಮ ಹೃದಯದಾಳದಲ್ಲಿ ಹುದುಗಿದ್ದ ಭಾವನೆಗಳು ಇಂದು ಹೊರಬೀಳಲಿವೆ. ನೀವು ನಿಮ್ಮ ವಸ್ತುಗಳ ಕುರಿತು ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುತ್ತೀರಿ. ಆದಾಗ್ಯೂ, ನಿಮ್ಮ ಸುತ್ತಮುತ್ತಲಿನ ಪರಿಸರ ಅನುಕೂಲಕರವಾಗಿಲ್ಲದಿದ್ದರೆ ನೀವು ಅತ್ಯಂತ ಪ್ರಕ್ಷುಬ್ಧತೆ ಅನುಭವಿಸುತ್ತೀರಿ.

ತುಲಾ : ಇಂದು ನಿಮ್ಮಲ್ಲಿರುವ ಕಲಾವಿದನನ್ನು ಹೊರತೆಗೆಯಿರಿ! ಲಲಿತಕಲೆಗಳ ಕುರಿತು ನಿಮ್ಮಲ್ಲಿ ಪ್ರೀತಿಯ ಆವಿಷ್ಕಾರವಾದರೆ ಆಶ್ಚರ್ಯಪಡಬೇಡಿ. ತಾರೆಗಳು ನಿಮಗೆ ಪರಿಷ್ಕೃತ ಸೌಂದರ್ಯಪ್ರಜ್ಞೆಯನ್ನು ದಯಪಾಲಿಸಿವೆ. ಇದರ ಫಲಿತಾಂಶದಿಂದ ನಿಮ್ಮ ಇಂಟೀರಿಯರ್ ಡೆಕೊರೇಷನ್ ಅಭಿರುಚಿ ಖಂಡಿತವಾಗಿಯೂ ಉತ್ತೇಜನ ಪಡೆಯುತ್ತದೆ.

ವೃಶ್ಚಿಕ : ಹೊಸ ಜಂಟಿ ಸಹಯೋಗದ ಹೊಸ ಯೋಜನೆ ನಿಮ್ಮ ವೈಯಕ್ತಿಕ ಜೀವನವನ್ನು ತಲೆಕೆಳಗು ಮಾಡುತ್ತದೆ ಮತ್ತು ನಿಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾದ ಫಲಿತಾಂಶಗಳನ್ನು ನೀವು ಕಾಣುವುದಿಲ್ಲ, ಆದರೆ ತಾಳ್ಮೆಯಿಂದಿರಿ, ಸೂಕ್ತ ಕಾಲದಲ್ಲಿ ಪ್ರತಿಯೊಂದು ಕೂಡಾ ತನ್ನ ಸ್ಥಾನದಲ್ಲಿ ಬರುತ್ತದೆ.

ಧನು: ಕೇಳದೆ ಹಾಗೂ ಅನಧಿಕೃತ ಸಲಹೆ ಸ್ವೀಕರಿಸಲು ಸಜ್ಜಾಗಿರಿ. ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಏಕೆಂದರೆ ಈ ಸಲಹೆಗಳು ಪರಿಗಣಿಸುವಷ್ಟು ಉತ್ತಮವಾಗಿರಬಹುದು. ಆದರೆ ಕೊನೆಯ ತೀರ್ಮಾನ ನಿಮ್ಮದೇ ಆಗಿರಬೇಕು ಮತ್ತು ಸರಿಯಾದ ತೀರ್ಮಾನವನ್ನು ಆಳವಾಗಿ ಪರೀಕ್ಷಿಸಿ.

ಮಕರ :ನೀವು ಇಂದಿನ ದಿನವನ್ನು ಅತ್ಯಂತ ಉತ್ಸಾಹದಿಂದ ಪ್ರಾರಂಭಿಸುತ್ತೀರಿ, ಇದು ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತದೆ. ನೀವು ಕೆಲಸದಲ್ಲಿ ಗೇರ್ ಗಳನ್ನು ಬದಲಾಯಿಸುತ್ತಿರುತ್ತೀರಿ ಇದರಿಂದ ನೀವು ಹೆಚ್ಚು ಪರಿಣಾಮಕಾರಿ ಹಾಗೂ ಉತ್ಪಾದಕವಾಗಿ ಕೆಲಸ ಮಾಡುತ್ತೀರಿ. ಅಂತಹ ಬದಲಾವಣೆ ನಿಮಗೆ ವಿಶ್ವಾಸ ಹೆಚ್ಚಿಸುತ್ತದೆ ಮತ್ತು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತಂದುಕೊಡುತ್ತದೆ.

ಕುಂಭ: ಸಹಕಾರ ಮತ್ತು ಬೆಂಬಲ, ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲು ನೆರವಾಗುತ್ತಾರೆ. ಅಲ್ಲದೆ, ನಿಮ್ಮ ಸೃಜನಶೀಲತೆ ಎಲ್ಲರಿಂದಲೂ ನಿಮಗೆ ಶ್ಲಾಘನೆ ತಂದುಕೊಡುತ್ತದೆ. ಈ ದಿನ ನೀವು ನಿಮ್ಮ ಬಂಧುಮಿತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ ಪರಿಪೂರ್ಣವಾಗಿ ಅಂತ್ಯವಾಗುತ್ತದೆ.

ಮೀನ: ಇಂದು ನೀವು ವಿರುದ್ಧ ಲಿಂಗಿಗಳಿಂದ ಗಮನ ಸೆಳೆಯಲ್ಪಡುತ್ತೀರಿ ಮತ್ತು ಇದು ಸದ್ಯದ ಭವಿಷ್ಯದಲ್ಲಿ ನಿಮ್ಮ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಹಗಳ ಅನುಕೂಲಕರ ಸ್ಥಿತಿಯಿಂದ ನೀವು ನಿಮ್ಮ ನಿರೀಕ್ಷೆಗಳಿಗಿಂತ ಹೆಚ್ಚು ಪಡೆಯುತ್ತೀರಿ. ನೀವು ಲೆಕ್ಕಾಚಾರ ಮತ್ತು ಎಚ್ಚರಿಕೆಯ ವ್ಯಕ್ತಿಯಾದರೂ, ನೀವು ಆಕ್ರಮಣಕಾರಿ, ಹೊರಗಡೆ ಸುತ್ತಾಡುವ ಮತ್ತು ರಿಸ್ಕ್ ಗಳನ್ನು ತೆಗೆದುಕೊಳ್ಳಲು ಬಯಸುವ ವ್ಯಕ್ತಿಯಾಗುತ್ತೀರಿ.

ABOUT THE AUTHOR

...view details