ಕರ್ನಾಟಕ

karnataka

By

Published : Oct 27, 2022, 10:04 AM IST

ETV Bharat / bharat

ಬೈಕ್​ ತಡೆದಿದ್ದಕ್ಕೆ ಪೊಲೀಸ್​ ಕಾನ್ಸ್​ಟೇಬಲ್​​​​​​ಗೆ ಥಳಿಸಿದ ಯುವಕರು.. ವಿಡಿಯೋ

ಗಸ್ತಿನ ಸಮಯದಲ್ಲಿ ಗಲಾಟೆ ಮಾಡುತ್ತಾ ಬೈಕ್‌ಗಳಲ್ಲಿ ಹೋಗುತ್ತಿದ್ದ 4 ಹುಡುಗರು ಪೊಲೀಸ್​ ಕಾನ್ಸ್​​ಟೇಬಲ್​​​​ ​ ತಡೆದು ನಿಲ್ಲಿಸಿದ್ದಾರೆ. ಆ ವೇಳೆ ಕೋಪಗೊಂಡ ಯುವಕರು ಪೊಲೀಸ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜಗಳವಾಡಿದ್ದು ಮಾತ್ರವಲ್ಲದೇ ಪೊಲೀಸ್​ ಮೇಲೆ ದೌರ್ಜನ್ಯವೆಸಗಿದ್ದಾರೆ.

dabang beat up policeman in lucknow
ಪೊಲೀಸ್​ ಕಾನ್​ಸ್ಟೆಬಲ್​ಗೆ ಥಳಿಸಿದ ಯುವಕರು

ಲಖನೌ(ಉತ್ತರ ಪ್ರದೇಶ): ರಾಜಧಾನಿಯಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್​ ಕಾನ್ಸ್​​ಟೇಬಲ್​ಗೆ ಬೈಕ್​ ತಡೆದು ನಿಲ್ಲಿಸಿದ್ದಕ್ಕಾಗಿ ನಾಲ್ಕು ಯುವಕರು ಓಡಿಸಿಕೊಂಡು ಹೋಗಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪೊಲೀಸ್ ಕಾನ್ಸ್​​ಟೇಬಲ್​​​​ ಶ್ರೀಕಾಂತ್​ ಅವರು ಪರ ಸರೋಸಾ - ಭರೋಸಾ ತಿರುವಿನಲ್ಲಿ ಗಸ್ತು ತಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಗಸ್ತಿನ ಸಮಯದಲ್ಲಿ ಗಲಾಟೆ ಮಾಡುತ್ತಾ ಬೈಕ್‌ಗಳಲ್ಲಿ ಹೋಗುತ್ತಿದ್ದ 4 ಯುವಕರು ಪೊಲೀಸ್​ ಕಾನ್ಸ್​​ಟೇಬಲ್​​ ತಡೆದು ನಿಲ್ಲಿಸಿದ್ದಾರೆ. ಆ ವೇಳೆ ಕೋಪಗೊಂಡ ಯುವಕರು ಪೊಲೀಸ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜಗಳವಾಡಿದ್ದು ಮಾತ್ರವಲ್ಲದೇ ಪೊಲೀಸ್​ ಮೇಲೆ ದೌರ್ಜನ್ಯವೆಸಗಿದ್ದಾರೆ.

ಪೊಲೀಸ್​ ಕಾನ್​ಸ್ಟೆಬಲ್​ಗೆ ಥಳಿಸಿದ ಯುವಕರು

ಯುವಕರು ಪೊಲೀಸ್​ಗೆ ಹೊಡೆಯುತ್ತಿರುವ ವೇಳೆ ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಯುವಕ ರಕ್ಷಣೆಗೆಂದು ಓಡಿ ಬಂದಿದ್ದಾನೆ. ಈ ವೇಳೆ ಯುವಕರು ಪರಾರಿಯಾಗಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪರಾರಿಯಾಗಿರುವ ಯುವಕರ ಪತ್ತೆಗೆ ಪೊಲೀಸರು​ ಕಾರ್ಯಪ್ರವೃತ್ತಗೊಂಡಿದ್ದಾರೆ.

ಮೋಹನ್ ಚೌಕಿಯಲ್ಲಿ ಪೋಸ್ಟಿಂಗ್​ನಲ್ಲಿರುವ ಪೊಲೀಸ್​ ಕಾನ್ಸ್​ಟೇಬಲ್​​ ಶ್ರೀಕಾಂತ್ ಅವರನ್ನು ಬೈಕ್​ನಲ್ಲಿ ಬಂದ ಯುವಕರು ಥಳಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪ್ಯಾರಾ ಇನ್ಸ್‌ಪೆಕ್ಟರ್ ದಾಧಿಬಾಲ್ ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ:ಸ್ನೇಹಿತನ ಮನೆಯಿಂದ ಚಿನ್ನಾಭರಣ ಕಳವು ಆರೋಪ: ಪೊಲೀಸ್ ಕಾನ್ಸ್​ಟೇಬಲ್​​ ಬಂಧನ

ABOUT THE AUTHOR

...view details