ಭುವನೇಶ್ವರ: ಪಶ್ಚಿಮ ಕರಾವಳಿಯಲ್ಲಿ ಅಬ್ಬರ ತೋರಿಸಿದ ತೌಕ್ತೆ ಚಂಡಮಾರುತ ದುರ್ಬಲಗೊಳ್ಳುತ್ತಿದ್ದರೆ, ಇತ್ತ 'ಯಾಸ್' ಹೆಸರಿನ ಹೊಸ ಸೈಕ್ಲೋನ್ ಬರುತ್ತಿದೆ. ಬಂಗಾಳ ಕೊಲ್ಲಿ ಮೂಲಕ ಯಾಸ್ ಚಂಡಮಾರುತವು ಮೇ 26 ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ತೌಕ್ತೆ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿತ್ತು. ಇದೀಗ ಮೇ 22-23ರ ವೇಳೆಯಲ್ಲಿ ಉತ್ತರ ಅಂಡಮಾನ್ ದ್ವೀಪ ಮತ್ತು ಅದರ ಪಕ್ಕದ ಪೂರ್ವ - ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಯಾಸ್ ಚಂಡಮಾರುತ ರೂಪುಗೊಳ್ಳಲಿದೆ. ನಂತರದ 72 ಗಂಟೆಗಳ ಅವಧಿಯಲ್ಲಿ ಇದು ತೀವ್ರ ಸ್ವರೂಪ ಪಡೆದು, ಮೇ 16ರ ವೇಳೆಗೆ ಒಡಿಶಾ-ಬಂಗಾಳ ಕರಾವಳಿ ಹಾದು ಹೋಗುವ ಸಾಧ್ಯತೆಯಿದೆ. ಹೀಗಾಗಿ ಭಾರಿ ಗಾಳಿ-ಮಳೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ.