ಕರ್ನಾಟಕ

karnataka

ETV Bharat / bharat

100 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ದಂಧೆ ಪತ್ತೆ ಹಚ್ಚಿದ ಉತ್ತರಾಖಂಡ ಪೊಲೀಸರು..ವಿದೇಶಿ ಕೈವಾಡದ ಶಂಕೆ

ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಉತ್ತರಾಖಂಡ ಸೈಬರ್ ಕ್ರೈಂ ಪೊಲೀಸರ ಜಂಟಿ ತಂಡ ಭೋಪಾಲ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪತ್ತೆಹಚ್ಚಿದೆ.

Cyber fraud
ವಿದೇಶಿ ಕೈವಾಡ ಶಂಕೆ

By

Published : Feb 26, 2022, 7:54 PM IST

ಡೆಹ್ರಾಡೂನ್: ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಉತ್ತರಾಖಂಡ ಸೈಬರ್ ಕ್ರೈಂ ಪೊಲೀಸರ ಜಂಟಿ ತಂಡ ಭೋಪಾಲ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಪತ್ತೆಹಚ್ಚಿದೆ.

ಆರೋಪಿಗಳಾದ ರಚಿತ್ ಶರ್ಮಾ ಮತ್ತು ಸುರೇಶ್ ಯಾದವ್​ರನ್ನು ಬಂಧಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕೈವಾಡವಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿರುವ ರೋಹಿತ್​ ಎಂಬಾತ ಡೆಹ್ರಾಡೂನ್‌ನ ವ್ಯಕ್ತಿಯೊಬ್ಬರಿಗೆ 15 ಲಕ್ಷ ರೂಪಾಯಿ ವಂಚನೆ ಮಾಡಿದ ಬಳಿಕ ಈ ಅತಿದೊಡ್ಡ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ರೋಹಿತ್​ ನೀಡಿದ ಮಾಹಿತಿ ಮೇರೆಗೆ ಪ್ರಕರಣದ ತನಿಖೆ ನಡೆಸಿದ ವಿಶೇಷ ತಂಡಕ್ಕೆ ಕೋಟ್ಯಂತರ ರೂಪಾಯಿ ಹಣ ಚಿನ್ನ, ಮಸಾಲೆ ಮತ್ತು ಮದ್ಯದ ವ್ಯಾಪಾರದಡಿ ಮಾರಿಷಸ್​ಗೆ ವರ್ಗವಾಗಿದ್ದು ತಿಳಿದು ಬಂದಿದೆ.

ಇದೀಗ ಪ್ರಕರಣದಲ್ಲಿ ರಚಿತ್​ ಮತ್ತು ಸುರೇಶ್​ನ್ನು ಬಂಧಿಸಲಾಗಿದೆ. ಆರೋಪಿಗಳಿಂದ 3 ಮೊಬೈಲ್‌ಗಳು, 203 ಡೆಬಿಟ್ ಕಾರ್ಡ್‌ಗಳು, 15 ಎಟಿಎಂ ಕಾರ್ಡ್‌ಗಳು, 4 ಲ್ಯಾಪ್‌ಟಾಪ್‌, ಒಂದು ಐಷಾರಾಮಿ ವಾಹನ ಮತ್ತು ನಕಲಿ ಬ್ಯಾಂಕ್ ಖಾತೆ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಇದುವರೆಗೆ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ವಹಿವಾಟಿನ ದಾಖಲೆ ಲಭ್ಯವಾಗಿದೆ. ಪ್ರಕರಣ ಕುರಿತು ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಬಂಧಿತ ರಚಿತ್ ಶರ್ಮಾ ತನ್ನನ್ನು ಒಬ್ಬ ಚಲನಚಿತ್ರ ನಿರ್ಮಾಪಕ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ, ವಿದೇಶಿ ಚಲನಚಿತ್ರಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಸಿನಿಮಾ ತಯಾರಕರನ್ನು ಕೇಳಿಕೊಂಡಿದ್ದಾನೆ. ಬಳಿಕ ವೆಂಜನ್ಸ್ ಆಫ್ ಜೋಂಬಿಸ್ ಮತ್ತು ಸೈಲೆಂಟ್ ನೈಟ್, ಬ್ಲಡಿ ನೈಟ್‌ ಸೇರಿದಂತೆ ಹಲವಾರು ಸಿನಿಮಾಗಳ ಪ್ರಸಾರದ ಹಕ್ಕಿಗಾಗಿ ಹಣ ಹೂಡಿಕೆ ಮಾಡಿದ್ದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ರಷ್ಯಾ - ಉಕ್ರೇನ್​ ಸಂಘರ್ಷ: ಉಕ್ರೇನ್​​ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ

ABOUT THE AUTHOR

...view details