ಕರ್ನಾಟಕ

karnataka

ETV Bharat / bharat

ಆಸ್ತಿ ಹಂಚಿಕೆ ವಿಚಾರ: ಮಗನಿಂದಲೇ ಹೆತ್ತವರ ಕೊಲೆ ಶಂಕೆ - ದಂಪತಿ ಕೊಲೆ

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ದಂಪತಿಯ ಭೀಕರ ಕೊಲೆ ನಡೆದಿದೆ.

ದಂಪತಿ ಕೊಲೆ
ದಂಪತಿ ಕೊಲೆ

By ETV Bharat Karnataka Team

Published : Jan 9, 2024, 5:46 PM IST

ಇಟಾವಾ (ಉತ್ತರ ಪ್ರದೇಶ) : ಇಲ್ಲಿನ ಇಕ್ದಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಉದನ್ನಾಪುರ ನಾಗ್ಲಾ ಪೂತ್ ಗ್ರಾಮದಲ್ಲಿ ದಂಪತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ಗ್ರಾಮದ ನಿವಾಸಿ ಆಶಾರಾಮ್ (58) ಮತ್ತು ಅವರ 55 ವರ್ಷದ ಪತ್ನಿ ಎಂದು ಗುರುತಿಸಲಾಗಿದೆ. ಆಸ್ತಿ ಹಂಚಿಕೆ ವಿಚಾರಕ್ಕೆ ಮಗನಿಂದಲೇ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸೋಮವಾರ ರಾತ್ರಿ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಮನೆ ಮುಂದೆ ರಕ್ತಸಿಕ್ತವಾಗಿ ಬಿದ್ದಿದ್ದ ದಂಪತಿಗಳ ಮೃತದೇಹಗಳನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಧಿವಿಜ್ಞಾನ ಮತ್ತು ಶ್ವಾನದಳ ತಂಡಗಳನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖಾ ತಂಡ ಸ್ಥಳದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಎಸ್ಪಿ ಅಭಯನಾಥ್ ತ್ರಿಪಾಠಿ ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೊಂಡಿದ್ದಾರೆ.

ಮೃತ ಆಶಾರಾಮ್ ಅವರು ಎರಡನೇ ಮದುವೆ ಆಗಿದ್ದು, ದೆಹಲಿಯಲ್ಲಿ ವಾಸವಿದ್ದರು. ಕೆಲ ದಿನಗಳ ಹಿಂದೆ ಆಸ್ತಿ ಹಂಚಿಕೆ ವಿಚಾರವಾಗಿ ತಮ್ಮ ಮಗನೊಂದಿಗೆ ಜಗಳ ಮಾಡಿಕೊಂಡಿದ್ದರು. ನಿನ್ನೆ (ಸೋಮವಾರ) ಆಸ್ತಿ ಮಾರಾಟ ಮಾಡಲು ದೆಹಲಿಯಿಂದ ತನ್ನ ಪತ್ನಿಯೊಂದಿಗೆ ಆಶಾರಾಮ್ ಹಳ್ಳಿಗೆ ಬಂದಿದ್ದರು. ಈ ವೇಳೆ, ತಡರಾತ್ರಿ ಮಗನೇ ಪೋಷಕರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕ ವಲಯದಿಂದ ಅನುಮಾನ ಮೂಡಿದೆ.

ಮಗುವಿನ ಹಲ್ಲೆ, ಪತ್ನಿಯ ಕೊಲೆ ಮಾಡಿ ಆರೋಪಿ ಆತ್ಮಹತ್ಯೆ :ಇದೇ ತಿಂಗಳ ಜನವರಿ 2 ರಂದು ಘಾಜಿಯಾಬಾದ್​ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ ಜೊತೆಗೆ ಎರಡು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ ಮನೆ ಬೀಗ ಹಾಕಿಕೊಂಡಿರುವ ಪರಾರಿಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆತ ಕೂಡ ಘಾಜಿಯಾಬಾದ್‌ನ ಮೆಟ್ರೋ ನಿಲ್ದಾಣದಲ್ಲಿ ಕೊಲೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದನು.

ಮೃತ ಆರೋಪಿ ಗೌರವ್ ಶರ್ಮಾ (30) ತನ್ನ ಪತ್ನಿ ಲಕ್ಷ್ಮಿಗೆ ಹರಿತವಾದ ಆಯುಧದಿಂದ ಇರಿದಿದ್ದನು. ನಂತರ ಇಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದನು. ಜೊತೆಗೆ ತಮ್ಮ ಮಗುವಿಗೂ ಇಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದನು. ಬಳಿಕ ಆತ ಸ್ಥಳದಿಂದ ಪರಾರಿಯಾಗಿ ಗಾಜಿಯಾಬಾದ್‌ನ ಕೌಶಂಬಿ ಮೆಟ್ರೋ ನಿಲ್ದಾಣದಲ್ಲಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದನು ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ :ಹಾಸನ: ರೀಲ್ಸ್​ ಮೂಲಕ ಪರಿಚಯವಾದ ಗೆಳತಿಯನ್ನು ಮಕ್ಕಳ ಸಹಿತ ಕೊಂದಾಕಿದ; ಮೊಬೈಲ್​ನಿಂದ ಸಿಕ್ಕಿಬಿದ್ದ

ABOUT THE AUTHOR

...view details