ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳಲು ಕೇವಲ ವಾರಗಳ ಕಾಲ ಬಾಕಿ ಉಳಿದಿದೆ. ಈ ವೇಳೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ 26 ವಿಧೇಯಕ ಪರಿಚಯ ಮಾಡುವ ಸಾಧ್ಯತೆ ಇದೆ.
ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕ ಮಂಡನೆಯಾಗಲಿದ್ದು ಲೋಕಸಭೆ ವೆಬ್ಸೈಟ್ ಪ್ರಕಾರ, ನವೆಂಬರ್ 29ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಕ್ರಿಪ್ಟೋ ಸೇರಿ ಇತರೆ 25 ಮಸೂದೆಗಳು ಪರಿಚಯವಾಗಲಿವೆ.
ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ, ಕೇಂದ್ರ ಸಂಸದೀಯ ಸಮಿತಿ ಹಾಗೂ ಆರ್ಬಿಐ ಗವರ್ನರ್ ನೇತೃತ್ವದಲ್ಲಿ ಅನೇಕ ಸುತ್ತಿನ ಸಭೆಗಳು ನಡೆದಿದ್ದು, ಈ ವೇಳೆ ಕ್ರಿಪ್ಟೋ ನಿಯಂತ್ರಣ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ವಿಧೇಯಕ ಪರಿಚಯ ಮಾಡಲು ಮುಂದಾಗಿದೆ.
ಇದನ್ನೂ ಓದಿ:ಕೆಲ ದಿನಗಳಲ್ಲೇ ಪೆಟ್ರೋಲ್, ಡೀಸೆಲ್ ಮತ್ತಷ್ಟು ಅಗ್ಗ: ಕೇಂದ್ರದ ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ!