ಕರ್ನಾಟಕ

karnataka

ETV Bharat / bharat

ಅಸ್ಸೋಂ: ಸಿಆರ್‌ಪಿಎಫ್ ಕಾನ್​ಸ್ಟೇಬಲ್ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು - ಸಿಆರ್‌ಪಿಎಫ್ ಕಾನ್ಸ್‌ಟೇಬಲ್​ ಹತ್ಯೆ

ಅಸ್ಸೋಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಕಾನ್​ಸ್ಟೇಬಲ್​ವೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.

CRPF constable
ಸಿಆರ್‌ಪಿಎಫ್ ಕಾನ್ಸ್‌ಟೇಬಲ್ ಬರ್ಬರವಾಗಿ ಹತ್ಯೆಗೈದ ದುರ್ಷರ್ಮಿಗಳು

By ETV Bharat Karnataka Team

Published : Sep 7, 2023, 11:17 AM IST

ತಿನ್ಸುಕಿಯಾ(ಅಸ್ಸೋಂ) : ತಿನ್ಸುಕಿಯಾ ಜಿಲ್ಲೆಯ ಬರ್ದುಮ್ಸಾ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನಿನ್ನೆ ಸಂಜೆ ವೇಳೆಗೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಸಿಆರ್‌ಪಿಎಫ್ ಕಾನ್​ಸ್ಟೇಬಲ್​​ ಓರ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ. ಸರ್ಕಾರಿ ನೌಕರನ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಹಲ್ಲೆ ನಡೆಸಲಾಗಿದೆ.

ಮೂಲಗಳು ನೀಡಿದ ಮಾಹಿತಿ ಪ್ರಕಾರ, ಸಿಆರ್‌ಪಿಎಫ್ ಕಾನ್​ಸ್ಟೇಬಲ್​ ಸಿವಿಲ್ ಡ್ರೆಸ್‌ನಲ್ಲಿದ್ದು, ಬರ್ದುಮ್ಸಾದಲ್ಲಿರುವ ಅಸ್ಸೋಂ - ಅರುಣಾಚಲ ಪ್ರದೇಶದ ಗಡಿ ಬಳಿಯ ಮಾರುಕಟ್ಟೆಗೆ ಹೋಗುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬಳಿಕ ಪರಾರಿಯಾಗಿದ್ದಾರೆ. ಕೂಡಲೇ ಗಾಯಗೊಂಡ ಕಾನ್​ಸ್ಟೇಬಲ್​​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ :ಮೃತ ಕಾನ್​ಸ್ಟೇಬಲ್​ನನ್ನು ಉತ್ತರ ಪ್ರದೇಶ ಮೂಲದ ಸುನೀಲ್ ಕುಮಾರ್ ಪಾಂಡೆ ಎಂದು ಗುರುತಿಸಲಾಗಿದೆ. ಇಬ್ಬರು ದುಷ್ಕರ್ಮಿಗಳು ಕಾನ್​ಸ್ಟೇಬಲ್​ ಅವರನ್ನು ಕೊಂದು ಬೈಕ್​ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು, ಅರೆಸೇನಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ : ಆರೋಪಿಯ ಬಂಧನ. .

ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ : ತಮಿಳುನಾಡಿನ ಪಲ್ಲಡಂ ಸಮೀಪದ ಕಲ್ಲಗಿನಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇದೇ ತಿಂಗಳ 3 ನೇ ತಾರೀಖಿನಂದು ನಡೆದಿದೆ. ಪಲ್ಲಡಂ ಸಮೀಪದ ಕಲ್ಲಗಿನಾರು ಗ್ರಾಮದ ನಿವಾಸಿ ಸೆಂಥಿಲ್‌ಕುಮಾರ್ ಹೊಟ್ಟಿನ ವ್ಯಾಪಾರ ಮಾಡುತ್ತಿದ್ದರು. ಹಣದ ವಿಚಾರದ ಹಿನ್ನೆಲೆ ತೂತುಕುಡಿ ಜಿಲ್ಲೆಯ ವೆಂಕಟೇಶನನ್ನು ಕೆಲಸದಿಂದ ತೆಗೆದುಹಾಕಿದ್ದರು. ಭಾನುವಾರದಂದು ಸೆಂಥಿಲ್‌ಕುಮಾರ್ ಅವರ ಮನೆ ಬಳಿ ವೆಂಕಟೇಶ ಹಾಗೂ ಆತನ ಸಹಚರರು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಸೆಂಥಿಲ್‌ಕುಮಾರ್‌ ಅವರು ನಮ್ಮ ಮನೆ ಬಳಿ ಏಕೆ ಮದ್ಯ ಸೇವಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸೆಂಥಿಲ್‌ಕುಮಾರ್‌ ಹಾಗೂ ಪಾನಮತ್ತ ಮೂವರ ನಡುವೆ ಗಲಾಟೆ ನಡೆದಿದ್ದು, ದುಷ್ಕರ್ಮಿಗಳು ಕುಡುಗೋಲಿನಿಂದ ಸೆಂಥಿಲ್‌ಕುಮಾರ್‌ ಕೊಚ್ಚಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ :ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ಕೊಂದು ಮೂಟೆ ಕಟ್ಟಿದ ತಂದೆ !

ಇನ್ನು ಸೆಂಥಿಲ್‌ಕುಮಾರ್‌ನನ್ನು ಕಡಿಯುತ್ತಿದ್ದನ್ನು ತಡೆಯಲು ಯತ್ನಿಸಿದ ಮೋಹನರಾಜ್, ಪುಷ್ಪಾವತಿ, ರತ್ನಾಂಬಳ್ ಮೇಲೆಯೂ ಮಾರಣಾಂತಕ ಹಲ್ಲೆ ನಡೆಸಿದ್ದಾರೆ. ಪರಿಣಾಮ, ಒಂದೇ ಕುಟುಂಬದ ನಾಲ್ವರನ್ನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಕೊಲೆಗೆ ಹಳೆ ವೈಷಮ್ಯವೇ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ :ಮೂವರ ಬರ್ಬರ ಹತ್ಯೆ : ಪತ್ನಿ , ಆಕೆಯ ಇಬ್ಬರು ಪುತ್ರಿಯರ ಸಾವು, ಪತಿಗೆ ಗಂಭೀರ ಗಾಯ...

ABOUT THE AUTHOR

...view details