ಹಲ್ದ್ವಾನಿ(ಉತ್ತರಾಖಂಡ್): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ನಮಾಮಿ ಗಂಗೆ' ಯೋಜನೆಗೆ ಈಗಾಗಲೇ ನೂರಾರು ಕೋಟಿಗಳನ್ನು ಖರ್ಚು ಮಾಡಲಾಗಿದೆ. ಗಂಗಾ ನದಿಯ ಶುದ್ಧೀಕರಣಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರ 'ನಮಾಮಿ ಗಂಗೆ' ಹೆಸರಲ್ಲಿ ಕೈಗೆತ್ತಿಗೊಂಡಿರುವ ಈ ಯೋಜನೆಗೆ ವೆಚ್ಚದ ಮಾಡಿರುವ ಹಣ ಮೊತ್ತ ಮಾಹಿತಿ ಹಕ್ಕು ಅರ್ಜಿಯಿಂದ ಬಯಲಿಗೆ ಬಂದಿದೆ.
ಉತ್ತರಾಖಂಡ್ನಲ್ಲಿ ನಡೆಯುತ್ತಿರುವ 'ನಮಾಮಿ ಗಂಗೆ' ಯೋಜನೆಯ ಕಾಮಗಾರಿ ಮತ್ತು ಅದರ ಅನುದಾನ ಬಗ್ಗೆ ಮಾಹಿತಿ ಕೋರಿ ಹಲ್ದ್ವಾನಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ಹೇಮಂತ್ ಗೋನಿಯಾ ಆರ್ಐಟಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ರಾಜ್ಯ ಯೋಜನಾ ಮ್ಯಾನೇಜ್ಮೆಂಟ್ ಗ್ರೂಪ್ ಮಾಹಿತಿ ನೀಡಿದೆ.
ಇದನ್ನೂ ಓದಿ:ಮತ್ತೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಯೋಗಿ ಆದಿತ್ಯನಾಥ್ ವಿಶ್ವಾಸ
ಉತ್ತರಾಖಂಡ್ನಲ್ಲಿ 2016ರಲ್ಲಿ 'ನಮಾಮಿ ಗಂಗೆ' ಯೋಜನೆ ಆರಂಭವಾಗಿದೆ. ರಾಜ್ಯ ಯೋಜನಾ ಮ್ಯಾನೇಜ್ಮೆಂಟ್ ಗ್ರೂಪ್ಗೆ ಇದುವರೆಗೆ 528.42 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 2011ರ ನವೆಂಬರ್ವರೆಗೆ 482.59 ಖರ್ಚು ಮಾಡಲಾಗಿದೆ. ಇನ್ನೂ 35.83 ಕೋಟಿ ರೂ. ಬಾಕಿ ಉಳಿದಿದೆ ಎಂದು ಮಾಹಿತಿ ನೀಡಲಾಗಿದೆ.
'ನಮಾಮಿ ಗಂಗೆ' ಯೋಜನೆಗೆ ಖರ್ಚು ಮಾಡಿದ ಅನುದಾನ ಬಗ್ಗೆ ಆರ್ಐಟಿ ಅರ್ಜಿದಾರ ಹೇಮಂತ್ ಗೋನಿಯಾ ವಿವರಿಸಿದರು. ಈ 'ನಮಾಮಿ ಗಂಗೆ' ಯೋಜನೆಯಡಿ ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಹರಿದ್ವಾರ, ಪೌರಿಗೆ ಸೇರಿ ಹಲವು ಕಡೆ ಕಾಮಗಾರಿಗಳನ್ನು ಅನುಮೋದಿಸಲಾಗಿದ್ದು, ನದಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಗಿದೆ. ಅಲ್ಲದೇ, ಗಂಗಾನದಿ ಶುದ್ಧೀಕರಣದ ಜತೆಗೆ ಒಳಚರಂಡಿ ಸಂಸ್ಕರಣಾ ಘಟಕ, ಗಂಗಾ ಘಾಟ್ ಸ್ನಾನ, ಮೋಕ್ಷ ಘಾಟ್ ಸೇರಿದಂತೆ ಹಲವು ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಅರ್ಜಿಗೆ ಉತ್ತರಿಸಲಾಗಿದೆ.
ಈ ಬಗ್ಗೆ 'ಈಟಿವಿ ಭಾರತ' ಜತೆಗೆ ಮಾತನಾಡಿರುವ ಅರ್ಜಿದಾರ ಹೇಮಂತ್ ಗೋನಿಯಾ, ನಮಾಮಿ ಗಂಗೆ ಯೋಜನೆಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ ಎಂದು ಆರ್ಐಟಿ ಅರ್ಜಿಯಿಂದ ಬೆಳಕಿಗೆ ಬಂದಿದೆ. ಆದರೆ, ಗಂಗಾ ನದಿಯ ಮಾಲಿನ್ಯದಲ್ಲಿ ಗಣನೀಯವಾದ ಸುಧಾರಣೆ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಇಂದು ಪ್ರಧಾನಿ ಮೋದಿ ಮಾತುಕತೆ
ಹಲವೆಡೆ ಒಳಚರಂಡಿ ಸಂಸ್ಕರಣಾ ಘಟಕದ ನೀರು ನೇರವಾಗಿ ಉಪ ನದಿಗಳನ್ನು ತಲುಪುತ್ತದೆ. 'ನಮಾಮಿ ಗಂಗೆ' ಹೆಸರಿನಲ್ಲಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದೂ ಅವರು ಒತ್ತಾಯಿಸಿದ್ದಾರೆ.