ಕರ್ನಾಟಕ

karnataka

ETV Bharat / bharat

ಗೌಪ್ಯವಾಗಿ 2ನೇ ಮದುವೆ ಸಿದ್ಧವಾಗಿದ್ದ ಯುವಕ, ವಿಷಯ ತಿಳಿದು ಚಪ್ಪಲಿ, ಶೂ ಹಾರ ಹಾಕಿ ಮೆರವಣಿಗೆ ಮಾಡಿದ ಜನರು! - ಉತ್ತರಪ್ರದೇಶದಲ್ಲಿ ಯುವಕನ ಥಳಿತ

ಉತ್ತರಪ್ರದೇಶದಲ್ಲಿ ಯುವಕನೊಬ್ಬ ಮೊದಲ ಮದುವೆಯಾಗಿದ್ದರೂ, ವರದಕ್ಷಿಣೆಗಾಗಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದ. ಇದು ಮೊದಲ ಪತ್ನಿ ಗೊತ್ತಾಗಿ ಇಡೀ ಪ್ರಕರಣ ಬಯಲಾಗಿದೆ.

ಗೌಪ್ಯವಾಗಿ 2ನೇ ಮದುವೆ ಸಿದ್ಧವಾಗಿದ್ದ ಯುವಕ
ಗೌಪ್ಯವಾಗಿ 2ನೇ ಮದುವೆ ಸಿದ್ಧವಾಗಿದ್ದ ಯುವಕ

By ETV Bharat Karnataka Team

Published : Sep 13, 2023, 4:05 PM IST

ಬುಲಂದ್‌ಶಹರ್ (ಉತ್ತರಪ್ರದೇಶ) :ತನಗೆ ಈ ಮೊದಲೇ ಮದುವೆಯಾಗಿದ್ದರೂ ಇನ್ನೊಬ್ಬಾಕೆಯ ಜೊತೆಗೆ ವಿವಾಹಕ್ಕೆ ಮುಂದಾಗಿದ್ದ ಯುವಕನನ್ನು ಜನರು ಹಿಡಿದು, ಕೊರಳಲ್ಲಿ ಚಪ್ಪಲಿ, ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿಸಿದ ಘಟನೆ ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿ ಮಂಗಳವಾರ ನಡೆದಿದೆ.

ತಾನು ಈ ಹಿಂದೆ ಪ್ರೀತಿಸುತ್ತಿದ್ದ ಯುವತಿಯ ಜೊತೆಗೆ ಆರೋಪಿ ವಿವಾಹವಾಗಿದ್ದ. ಆದರೆ, ಅದು ಯಾರ ಗಮನಕ್ಕೂ ಬಾರದಂತೆ ರಹಸ್ಯವಾಗಿಟ್ಟಿದ್ದ. ಇತ್ತ ತನ್ನೂರಿನಲ್ಲಿ ಇನ್ನೊಂದು ಯುವತಿಯ ಜೊತೆಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ಮದುವೆಗೆ ಸಿದ್ಧತೆಗಳು ನಡೆಸಲಾಗಿತ್ತು. ಈ ವಿಷಯ ತಿಳಿದ ಮೊದಲ ಗೆಳತಿ ತಗಾದೆ ತೆಗೆದಿದ್ದಾಳೆ. ಮದುವೆ ನಿಲ್ಲಿಸುವಂತೆ ಎಚ್ಚರಿಸಿದ್ದಾಳೆ. ಆದರೂ, ಆರೋಪಿ ವಿವಾಹಕ್ಕೆ ಮುಂದಾದಾಗ ಆಕೆಯೇ ಬಂದು ಗ್ರಹಚಾರ ಬಿಡಿಸಿದ್ದಾಳೆ.

ವರದಕ್ಷಿಣೆಗಾಗಿ 2ನೇ ಮದುವೆ:ಬುಲಂದ್​ಶಹರ್​ ನಿವಾಸಿಯಾದ ಆರೋಪಿ ಯುವಕ ಪಕ್ಕದ ಪಹಸು ಗ್ರಾಮದ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ವರದಕ್ಷಿಣೆಯಾಗಿ ವರನಿಗೆ 1 ಲಕ್ಷ 40 ಸಾವಿರ ರೂಪಾಯಿ ನೀಡಲಾಗಿತ್ತು. ಮದುವೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾಗ ಇದು ಮೊದಲ ಗೆಳತಿಗೆ ಗೊತ್ತಾಗಿದೆ. ಆಕೆಯೇ ಯುವಕನ ಮನೆಗೆ ಆಗಮಿಸಿ ತಕರಾರು ತೆಗೆದಿದ್ದಾಳೆ. ನಾನು ಈತನ ಮೊದಲ ಪತ್ನಿ ಎಂದು ಹೇಳಿದ್ದಾಳೆ. ಇದಕ್ಕೆ ಪುರಾವೆಯಾಗಿ ತನ್ನ ಮೊಬೈಲ್​ನಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ತೋರಿಸಿದ್ದಾಳೆ.

ಜೊತೆಗೆ 2ನೇ ಮದುವೆ ವಿಚಾರವಾಗಿ ಇಬ್ಬರೂ ಕಿತ್ತಾಡಿಕೊಂಡ ರೆಕಾರ್ಡ್​ ಕೂಡ ಇವೆ. ಅದರಲ್ಲಿ ಯುವತಿ ಮದುವೆಯಾಗದಂತೆ ಎಚ್ಚರಿಸಿದ್ದಾಳೆ. ಇನ್ನೊಬ್ಬ ಯುವತಿಯ ಜತೆಗಿನ ಸಂಬಂಧ ಕಡಿದುಕೊಳ್ಳುವಂತೆ ಇಬ್ಬರೂ ವಾಗ್ವಾದ ಮಾಡಿದ್ದು ಅದರಲ್ಲಿದೆ. ತಕ್ಷಣವೇ ವಿಷಯ ಹರಡಿ, ಇನ್ನೊಬ್ಬ ಯುವತಿಯ ಮನೆಯವರಿಗೂ ತಿಳಿದಿದೆ. ಯುವಕನ ಮನೆಗೆ ಬಂದ ಜನರು ಪಂಚಾಯ್ತಿ ನಡೆಸಿದ್ದಾರೆ. ಆದರೆ, ಪಂಚಾಯಿತಿಯಲ್ಲಿ ಯುವಕ ತನಗೆ ಮದುವೆಯಾಗಿದ್ದನ್ನು ನಿರಾಕರಿಸಿ ವಾದಿಸಿದ್ದ. ಅಲಿಘಡದ ಮೊದಲ ಯುವತಿ ಧ್ವನಿಮುದ್ರಿಕೆಯನ್ನು ಲೌಡ್ ಸ್ಪೀಕರ್ ಮೂಲಕ ಸಭೆಗೆ ಕೇಳಿಸಿದ್ದಾಳೆ. ಆಗ ಯುವಕನ ಮುಖವಾಡ ಕಳಚಿ ಬಿದ್ದಿದೆ.

ಆಕ್ರೋಶಗೊಂಡ ಜನರು:ಯುವಕನಿಗೆ ಮೊದಲೇ ಮದುವೆಯಾಗಿದ್ದು ತಿಳಿದ ಜನರು ಆಕ್ರೋಶ ವ್ಯಕ್ತಪಡಿಸಿದರು. ಯುವಕನನ್ನು ಹೊರಗೆ ಎಳೆದು ತಂದು ಆತನ ಕೊರಳಿಗೆ ಶೂ ಮತ್ತು ಚಪ್ಪಲಿಯ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದಾರೆ. ಇದರೊಂದಿಗೆ ವರದಕ್ಷಿಣೆಯಾಗಿ ನೀಡಿದ್ದ 1.40 ಲಕ್ಷ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಅವಮಾನಿತನಾದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಜನರು ಆತನನ್ನು ತಡೆದಿದ್ದಾರೆ.

ಯುವಕನಿಂದಲೇ ದೂರು ದಾಖಲು:ಜನರಿಂದ ಅವಮಾನಿತನಾದ ಯುವಕ ಪೊಲೀಸ್​ ಠಾಣೆಗೆ ತಾನೇ ದೂರು ನೀಡಿದ್ದಾನೆ. ಯುವಕನ ಕುಟುಂಬದವರ ದೂರಿನ ಮೇರೆಗೆ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಎರಡೂವರೆ ಗಂಟೆ ಕಾದರೂ ಬಾರದ ಆಂಬ್ಯುಲೆನ್ಸ್​, ಸಿಡಿಲೇಟು ಬಿದ್ದ ವ್ಯಕ್ತಿ ಬೈಕ್​ನಲ್ಲೇ ಆಸ್ಪತ್ರೆಗೆ ರವಾನೆ: ಸಾವು

ABOUT THE AUTHOR

...view details