ಕರ್ನಾಲ್( ಹರಿಯಾಣ): ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಹರಿಯಾಣದ ಕರ್ನಾಲ್ ಜಿಲ್ಲೆಯ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ಪೋಷಕರು ದೂರಿದ್ದಾರೆ. ಆರೋಪಿ ವಿರುದ್ಧ ಕರ್ನಾಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಲಕಿ ಪೋಷಕರು ನೀಡಿದ ಮಾಹಿತಿ ಪ್ರಕಾರ, ಹರಿಯಾಣದ ಕರ್ನಾಲ್ ಜಿಲ್ಲೆಯಿಂದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿದ್ದ ಮದರಸಾಕ್ಕೆ ಸಂತ್ರಸ್ತೆ ಓದಲು ಬರುತ್ತಿದ್ದಳು. ಜೂನ್ 20ರಂದು ಬಾಲಕಿ ಶಾಮ್ಲಿಯಲ್ಲಿನ ಮದರಸಾ ಸೇರಿದ್ದಳು. ಬಳಿಕ ದಿನನಿತ್ಯ ಎಂದಿನಂತೆ ತೆರಳುತ್ತಿದ್ದಳು. ಹತ್ತು ದಿನದ ಬಳಿಕ ಬಾಲಕಿಯೊಂದಿಗೆ ಮೌಲ್ವಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದನು. ಒಂದು ದಿನ ಮದರಸಾದ ಕೊಠಡಿಗೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಲ್ಲಿ ತಿಳಿಸಿದ್ದಾಳೆ.
ಪೋಷಕರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಶಾಮ್ಲಿಗೆ ಬಂದ ಸಮಿತಿ ಸದಸ್ಯರು ಸಂತ್ರಸ್ತ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಕರ್ನಾಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.