ಚಂಡೀಗಢ: ಇಲ್ಲಿನ ನಗರದ ಬಾಪುಧಾಮ್ ಕಾಲೋನಿ ಸೆಕ್ಟರ್ 26 ಸಮೀಪದ ಶಾಸ್ತ್ರಿ ನಗರ ಸುಖ್ನಾ ಚೌದಲ್ಲಿ ಇಂದು ಬಾಂಬ್ ಶೆಲ್ ಪತ್ತೆಯಾಗಿದೆ. ಈ ಬಾಂಬ್ ಸುಮಾರು 51 ಎಂಎಂ ಇದೆ. ಸುಖ್ನಾ ಚೌ ಮೇಲೆ ಗುಡ್ಡಗಾಡು ಪ್ರದೇಶದಿಂದ ಈ ಬಾಂಬ್ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ಕೆಲವು ಮಕ್ಕಳು ಸುಖ್ನಾ ಚೌ ದಿಂದ ಈಜಲು ಬಂದಾಗ ಬಾಂಬ್‌ನ ಶೆಲ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಂಬ್ ಸಿಕ್ಕ ಪ್ರದೇಶವನ್ನು ಸೀಲ್ ಮಾಡಿದ ಪೊಲೀಸರು: ಮಾಹಿತಿಯ ಪ್ರಕಾರ, ಪೊಲೀಸರು ಈ ಬಾಂಬ್ ಶೆಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಂಬ್ಅನ್ನು ಮರಳಿನ ಚೀಲದಲ್ಲಿ ಇರಿಸಿ ಮುಚ್ಚಲಾಗಿದೆ. ಜೊತೆಗೆ ಬಾಂಬ್ ಸಿಕ್ಕ ಇಡೀ ಪ್ರದೇಶವನ್ನು ಅದರಲ್ಲೂ ರಸ್ತೆಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸದ್ಯ ಈ ಬಾಂಬ್ಅನ್ನು ಸೇನೆಯ ವಿಶೇಷ ತಂಡ ಪರಿಶೀಲಿಸುತ್ತಿದೆ.
ಈ ಹಿಂದೆಯೂ ಪತ್ತೆಯಾಗಿತ್ತು ಬಾಂಬ್: ಜನವರಿ ತಿಂಗಳಲ್ಲಿ ಪಂಜಾಬ್ ಗಡಿಯಲ್ಲಿರುವ ಕನ್ಸಾಲ್ ಗ್ರಾಮದಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಏನಾದರೂ ಸ್ಫೋಟಗೊಂಡಿದ್ದರೆ ಅದು 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಾಶಪಡಿಸುತ್ತಿತ್ತು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಇಲ್ಲಿ ಭದ್ರತೆ ದೃಷ್ಟಿಯಿಂದ ಪೊಲೀಸರು ಹಾಗೂ ಸೇನೆಯಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ರಾಜೀಂದ್ರ ಪಾರ್ಕ್ ಬಳಿ ಸೇನಾ ರೋಬೋಟ್ ಬಾಂಬ್ ಅನ್ನು ಬಾಂಬ್ ಅನ್ನು ಸ್ಥಳದಿಂದ ವಶಪಡಿಕೊಂಡಿತ್ತು ಮತ್ತು ರಕ್ಷಣಾ ಜಾಕೆಟ್ಗಳನ್ನು ಧರಿಸಿದ ಸೇನಾ ತಂಡವು ಬಾಂಬ್ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿತ್ತು.