ಕರ್ನಾಟಕ

karnataka

ETV Bharat / bharat

ಕ್ರಿಕೆಟ್ ವಿಶ್ವಕಪ್​ನಿಂದ ಆರ್ಥಿಕತೆಗೆ ಹರಿದು ಬರಲಿದೆ 22 ಸಾವಿರ ಕೋಟಿ ರೂಪಾಯಿ!

ವಿಶ್ವಕಪ್ ಆಯೋಜನೆಯಿಂದ ದೇಶದ ಆರ್ಥಿಕತೆಗೆ 18 ರಿಂದ 22 ಸಾವಿರ ಕೋಟಿ ರೂಪಾಯಿ ಹರಿದು ಬರುವ ಸಾಧ್ಯತೆಯಿದೆ.

'Rs.18,000-22,000 crore impact on Indian GDP by World Cup Cricket'
'Rs.18,000-22,000 crore impact on Indian GDP by World Cup Cricket'

By ETV Bharat Karnataka Team

Published : Oct 5, 2023, 7:25 PM IST

Updated : Oct 5, 2023, 8:42 PM IST

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್​ ದೇಶದ ಜಿಡಿಪಿಗೆ ಹೆಚ್ಚುವರಿಯಾಗಿ ಸುಮಾರು 18,000-22,000 ಕೋಟಿ ರೂ.ಗಳ ಕೊಡುಗೆ ನೀಡಲಿದೆ ಮತ್ತು ಪಂದ್ಯಾವಳಿಯು ದೇಶದ ಜಿಡಿಪಿಗೆ ಸುಮಾರು 7,000-8,000 ಕೋಟಿ ರೂ. ಗಳಷ್ಟು ಮೌಲ್ಯವರ್ಧನೆ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಅರ್ಥಶಾಸ್ತ್ರಜ್ಞರ ವರದಿ ತಿಳಿಸಿದೆ. ವಿಶ್ವಕಪ್​ನಿಂದ ಹಣದುಬ್ಬರದ ಮೇಲಾಗುವ ಪರಿಣಾಮ ತೀರಾ ಅತ್ಯಲ್ಪ ಎಂದು ವರದಿ ತಿಳಿಸಿದೆ.

ಜಿಡಿಪಿಯ ಮೇಲಾಗುವ ಪರಿಣಾಮದ ದೃಷ್ಟಿಯಿಂದ ನೋಡಿದರೆ ವಿಶ್ವಕಪ್​ನಿಂದ ಅಂದಾಜು 18,000-22,000 ಕೋಟಿ ರೂ.ಗಳ ಹೆಚ್ಚುವರಿ ಕೊಡುಗೆಯೊಂದಿಗೆ, ಸುಮಾರು 7,000-8,000 ಕೋಟಿ ರೂ.ಗಳಷ್ಟು ಒಟ್ಟು ಮೌಲ್ಯವರ್ಧನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ವೆಚ್ಚದ ಪ್ರಾಥಮಿಕ ಹಂತದಲ್ಲಿ ಜಿಡಿಪಿಯನ್ನು ಹೆಚ್ಚಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರಾದ ಜಾಹ್ನವಿ ಪ್ರಭಾಕರ್ ಮತ್ತು ಅದಿತಿ ಗುಪ್ತಾ ತಮ್ಮ 'Hitman and King’s cover drives to boost India’s GDP' ವರದಿಯಲ್ಲಿ ತಿಳಿಸಿದ್ದಾರೆ.

ಅವರ ಪ್ರಕಾರ, ಈ ಅವಧಿಯಲ್ಲಿ ವಿಮಾನಯಾನ ಟಿಕೆಟ್​ಗಳು, ಹೋಟೆಲ್ ವಸತಿ ಇತ್ಯಾದಿಗಳ ಬೆಲೆಗಳು ಏರಿಕೆಯಾಗಿರುವುದರಿಂದ ಸೇವೆಗಳ ಹಣದುಬ್ಬರದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಅಲ್ಲದೆ, ಸೇವಾ ವಲಯದಲ್ಲಿ ಅನೌಪಚಾರಿಕ ವಿಭಾಗವು ವಿಧಿಸುವ ಬೆಲೆಗಳು (ಇದನ್ನು ಸಿಪಿಐ ಸೂಚ್ಯಂಕದಲ್ಲಿ ಟ್ರ್ಯಾಕ್ ಮಾಡಲಾಗಿಲ್ಲ) ಗಣನೀಯವಾಗಿ ಹೆಚ್ಚಾಗುತ್ತವೆ. 45 ದಿನಗಳ ಕಾಲ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳ ನಡುವೆ 48 ಪಂದ್ಯಗಳು ನಡೆಯಲಿವೆ.

ವರದಿಯ ಪ್ರಕಾರ, ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ತಾತ್ಕಾಲಿಕ ವಹಿವಾಟಿನ ವಿವರಗಳು ಹೀಗಿವೆ: ಟಿಕೆಟ್ ಮಾರಾಟ 1,600-2,200 ಕೋಟಿ ರೂ.; ಟಿವಿ ಹಕ್ಕುಗಳು / ಪ್ರಾಯೋಜಕತ್ವ 10,500-12,000 ಕೋಟಿ ರೂ.; ತಂಡದ ಖರ್ಚು 150-250 ಕೋಟಿ ರೂ.; ವಿದೇಶಿ ಪ್ರವಾಸಿಗರಿಗೆ 450-600 ಕೋಟಿ ರೂ.; ದೇಶೀಯ ಪ್ರವಾಸಿಗರ ಖರ್ಚು 150-250 ಕೋಟಿ ರೂ.; ಗಿಗ್ ವರ್ಕರ್ಸ್/ ಈವೆಂಟ್ ಮ್ಯಾನೇಜಮೆಂಟ್​ಗೆ 750-1,000 ಕೋಟಿ ರೂ.; ಸರಕುಗಳಿಗೆ 100-200 ಕೋಟಿ ರೂ.; ಪ್ರೇಕ್ಷಕರಿಂದ ಖರ್ಚು 300-500 ಕೋಟಿ ರೂ.; ಸ್ಕ್ರೀನಿಂಗ್ ಮತ್ತು ಆಹಾರ ವಿತರಣೆಗೆ 4,000-5,000 ಕೋಟಿ ರೂ.

ಇದಲ್ಲದೆ ಟಿಕೆಟ್ ಮಾರಾಟ, ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಮತ್ತು ಆಹಾರ ವಿತರಣೆಯ ಮೇಲಿನ ಜಿಎಸ್​ಟಿ ಮತ್ತು ಇತರರ ಮೂಲಕ ಸರ್ಕಾರಕ್ಕೆ ಒಳ್ಳೆಯ ತೆರಿಗೆ ಆದಾಯ ಬರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ದೇಶದಲ್ಲಿ ವಿಶ್ವಕಪ್ ಆಯೋಜನೆಯಿಂದ ದೇಶದ ಆರ್ಥಿಕ ಕ್ಷೇತ್ರಕ್ಕೆ ಲಾಭವಾಗುವುದಂತೂ ನಿಶ್ಚಿತವಾಗಿದೆ.

ಇದನ್ನೂ ಓದಿ : ಷೇರು ಮಾರುಕಟ್ಟೆ ಇಂದು: ಸೆನ್ಸೆಕ್ಸ್​ 405 & ನಿಫ್ಟಿ 108 ಅಂಕ ಏರಿಕೆ

Last Updated : Oct 5, 2023, 8:42 PM IST

ABOUT THE AUTHOR

...view details