ನವದೆಹಲಿ: ಶರ್ಜೀಲ್ ಇಮಾಮ್ ಮೇಲೆ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಮತ್ತು ಡ್ಯೂಟಿ ರಿಜಿಸ್ಟರ್‌ಗಳನ್ನು ಹಾಜರುಪಡಿಸುವಂತೆ ದೆಹಲಿ ನ್ಯಾಯಾಲಯ ಗುರುವಾರ ಸೂಚಿಸಿದೆ. ಶೋಧದ ವೇಳೆ ಜೈಲು ಅಧಿಕಾರಿಗಳು ಮತ್ತು ಅಪರಾಧಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆತನನ್ನು ಭಯೋತ್ಪಾದಕ ಎಂದು ಕರೆಯಲಾಗಿದೆ ಎಂದು ಆರೋಪಿಸಿದ್ದ.
ಜೈಲು ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಅಧಿಕಾರಿಗಳು ಶಾರ್ಜೀಲ್ ಇಮಾಮ್ ಸಲ್ಲಿಸಿದ ಅರ್ಜಿಯ ಬಗ್ಗೆ ವರದಿಯನ್ನು ಸಲ್ಲಿಸಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಮುಂದಿನ ವಿಚಾರಣೆಯ ದಿನಾಂಕದಂದು ಸಹಾಯಕ್ (ಸೇವಾದಾರ್) ನ ಸಿಸಿಟಿವಿ ದೃಶ್ಯಗಳು ಮತ್ತು ಡ್ಯೂಟಿ ರಿಜಿಸ್ಟರ್ ಅನ್ನು ಸಲ್ಲಿಸಲು ಸೂಚಿಸಿದ್ದಾರೆ. ಜುಲೈ 20 ರಂದು ನ್ಯಾಯಾಲಯದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ಲೇ ಮಾಡಲಾಗುವುದು.
ಶರ್ಜೀಲ್ ಇಮಾಮ್ ಸಲ್ಲಿಸಿದ ಅರ್ಜಿಯ ಕುರಿತು ಜೈಲು ಅಧಿಕಾರಿಗಳು ಗುರುವಾರ ವರದಿ ಸಲ್ಲಿಸಿದ್ದಾರೆ. ಅವರ ಮೇಲೆ ಹಲ್ಲೆ, ಪುಸ್ತಕಗಳನ್ನು ಎಸೆದಿರುವುದು ಮತ್ತು ಆತನನ್ನು ಭಯೋತ್ಪಾದಕ ಎಂದು ಕರೆದ ಆರೋಪಗಳನ್ನು ಆ ವರದಿಯಲ್ಲಿ ನಿರಾಕರಿಸಲಾಗಿದೆ. ಉಪ ಜೈಲು ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ ಜೂನ್ 30, 2022 ರಂದು ಅವರ ವಾರ್ಡ್‌ನಲ್ಲಿ ಶೋಧ ನಡೆಸಲಾಯಿತು ಎಂದು ಅದು ಹೇಳಿದೆ.