ಅಮೃತಸರ (ಪಂಜಾಬ್) : ಜನರ ಮೃತದೇಹದ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ನೆರವೇರಿಸಲು ಸ್ಮಶಾನಗಳಿಗೆ ಭೇಟಿ ನೀಡುವುದು ಸಾಮಾನ್ಯ. ಸ್ಮಶಾನ ಅಂದರೆ ಮನಸ್ಸಿನಲ್ಲಿ ಬೇಸರದ ಭಾವನೆ ಮೂಡುತ್ತದೆ. ಹೀಗಾಗಿ, ಕೆಲವರಂತೂ ಸ್ಮಶಾನಗಳಿರುವ ಪ್ರದೇಶಗಳತ್ತ ಹಾದು ಹೋಗಲೂ ಇಷ್ಟಪಡುವುದಿಲ್ಲ. ಆದರೆ, ಇಲ್ಲೊಂದು ಘಟನೆ ಅಚ್ಚರಿ ಮೂಡಿಸುವಂಥದ್ದು.
ವಿವರ:ಪ್ರಕಾಶ್ ಕೌರ್ ಎಂಬ ವೃದ್ಧೆ ಮತ್ತು ಆಕೆಯ ಮೊಮ್ಮಗಳು ಅಮೃತಸರದ ಸ್ಮಶಾನದಲ್ಲಿ ವಾಸವಾಗಿದ್ದಾರೆ. ಇಲ್ಲಿನ ಸಣ್ಣದೊಂದು ಕೊಠಡಿಯಲ್ಲಿ ಇವರ ಬದುಕು ಸಾಗುತ್ತಿತ್ತು. ಈ ಅಜ್ಜಿ ತನ್ನ ಮೊಮ್ಮಗಳ ಮದುವೆಯನ್ನು ಇದೇ ಸ್ಮಶಾನದ ಆವರಣದಲ್ಲಿಯೇ ಮಾಡಿದ್ದಾರೆ. ಮದುವೆ ನಡೆದ ಈ ಸ್ಥಳ ಅಮೃತಸರದ ಮೊಹಕಂಪುರ ಪ್ರದೇಶ. ಸ್ಥಳೀಯರ ನೆರವಿನಿಂದ ಯುವತಿಯನ್ನು ಸ್ಥಳೀಯ ಹುಡುಗನೇ ವರಿಸಿದ್ದಾನೆ. ಈ ವೃದ್ಧೆ ಹಾಗು ಮೊಮ್ಮಗಳು ತಮ್ಮ ಪ್ರಾಮಾಣಿಕತೆ ಮತ್ತು ಮುಗ್ಧ ಸ್ವಭಾವದಿಂದಲೇ ಇಲ್ಲಿ ಚಿರಪರಿಚಿತರಂತೆ. ಸ್ಥಳೀಯರು ಸೇರಿಕೊಂಡು ಮದುವೆಗೆ ಏರ್ಪಾಡು ಮಾಡಿದ್ದರು. ಅವರೇ ಹುಡುಗನನ್ನೂ ಆರಿಸಿದ್ದರು.