ಪೆದ್ದಪಲ್ಲಿ(ತೆಲಂಗಾಣ): ಜಿಲ್ಲೆಯ ಗೋದಾವರಿಖನಿಯ ಗಂಗಾನಗರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಆಟೋದ ಮೇಲೆ ಲಾರಿಯೊಂದು ಉರುಳಿ ಬಿದ್ದಿದ್ದು, ದಂಪತಿ ಜೊತೆ ಮಗು ಸಹ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರ: ರಾಮಗುಂಡ ನಿವಾಸಿ ಶೇಖ್ ಶೇಕಿಲ್, ಪತ್ನಿ ರೇಷ್ಮಾ ಹಾಗೂ ಇಬ್ಬರು ಮಕ್ಕಳ ಜೊತೆ ಆಟೋದಲ್ಲಿ ಆರು ಜನರು ಮಂಚಿರ್ಯಾಲ ಜಿಲ್ಲೆಯ ಇಂದಾರಂ ಗ್ರಾಮಕ್ಕೆ ತೆರಳುತ್ತಿದ್ದರು. ಗೋದಾವರಿಖನಿ ಗಂಗಾನಗರ್ ಫ್ಲೈಓವರ್ ಯೂಟರ್ನ್ ಬಳಿ ಕಲ್ಲಿದ್ದಲು ತುಂಬಿಕೊಂಡು ಬರುತ್ತಿದ್ದ ಲಾರಿ ಮತ್ತು ಮಣ್ಣು ತೆಗೆದುಕೊಂಡು ಹೋಗುತ್ತಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಓದಿ:ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪಿನ್ಸ್... ಸಾವಿನ ಸಂಖ್ಯೆ 375ಕ್ಕೇರಿಕೆ!
ಅಪಘಾತ ಸಂಭವಿಸುತ್ತಿರುವಾಗ ಲಾರಿ ಪಕ್ಕದಲ್ಲೇ ಆಟೋ ಪ್ರಯಾಣಿಸುತ್ತಿದ್ದು, ಲಾರಿಯೊಂದು ಆಟೋದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಶೇಖ್ ಶಕೀಲ್, ರೇಷ್ಮಾ ಸೇರಿ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.