ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಕೋವಿಡ್​ ಏರಿಕೆ: ಹೊಸದಾಗಿ 42,625 ಜನರಿಗೆ ಸೋಂಕು - ಭಾರತದಲ್ಲಿ ಕೋವಿಡ್​

ದೇಶದಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 42,625 ಜನರಿಗೆ ವೈರಸ್ ದೃಢಪಟ್ಟಿದೆ

Corona
ಕೋವಿಡ್​ ಪ್ರಕರಣ

By

Published : Aug 4, 2021, 10:17 AM IST

ನವದೆಹಲಿ:ದೇಶದಲ್ಲಿ ಹೊಸದಾಗಿ 42,625 ಜನರಿಗೆ ವೈರಸ್ ದೃಢಪಟ್ಟಿದೆ. ಇದೀಗ ಸೋಂಕಿತರ ಸಂಖ್ಯೆ 3,17,69,132 ಕ್ಕೆ ಏರಿದೆ. 4,10,353 ರಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದ 36,668 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 3,09,33,022 ಆಗಿದೆ. ಒಂದು ದಿನದಲ್ಲಿ 562 ಮಂದಿ ಮೃತಪಟ್ಟಿದ್ದು, ಈವರೆಗೆ ವೈರಸ್​ಗೆ ಬಲಿಯಾದವರ ಸಂಖ್ಯೆ 4,25,757ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 62,53,741 ಕೋವಿಡ್ ವ್ಯಾಕ್ಸಿನ್​ ನೀಡಲಾಗಿದೆ. ಈವರೆಗೆ 48 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.

ಆಗಸ್ಟ್ 3 ರಂದು 18,47,518 ಕೊರೊನಾ ಸ್ಯಾಂಪಲ್​ಗಳನ್ನು ಟೆಸ್ಟ್ ಮಾಡಲಾಗಿದೆ. ಈ ಮೂಲಕ ಈವರೆಗೆ 47,31,42,307 ಸ್ವಾಬ್ ಟೆಸ್ಟ್​ಗಳನ್ನು ಮಾಡಲಾಗಿದೆ ಎಂದು ಐಸಿಎಂಆರ್​ ತಿಳಿಸಿದೆ.

ABOUT THE AUTHOR

...view details