ಕರ್ನಾಟಕ

karnataka

By

Published : May 8, 2021, 7:59 AM IST

ETV Bharat / bharat

ಕೊರೊನಾ ತಗುಲಿದ್ದ ಅಸಾರಾಂ ಬಾಪೂ ಜೋಧ್ಪುರ ಏಮ್ಸ್​​ಗೆ ಶಿಫ್ಟ್​

ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಪ್ರಕರಣದ ಅಪರಾಧಿ ಅಸಾರಾಂ ಬಾಪೂರನ್ನು ಮಹಾತ್ಮ ಗಾಂಧಿ ಆಸ್ಪತ್ರೆಯಿಂದ ಜೋಧ್ಪುರ ಏಮ್ಸ್​​ಗೆ ಸ್ಥಳಾಂತರಿಸಲಾಗಿದೆ.

Asaram
ಕೊರೊನಾ ತಗುಲಿದ್ದ ಅಸಾರಾಂ ಬಾಪೂ ಜೋಧ್ಪುರ ಏಮ್ಸ್​​ಗೆ ಶಿಫ್ಟ್​

ಜೋಧ್ಪುರ (ರಾಜಸ್ಥಾನ): ಕೋವಿಡ್​ ಸೋಂಕು ತಗುಲಿ ರಾಜಸ್ಥಾನದ ಜೋಧ್ಪುರದ ಮಹಾತ್ಮ ಗಾಂಧಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಾಧಿ ಅಸಾರಾಂ ಬಾಪೂರನ್ನು ಇದೀಗ ಜೋಧ್ಪುರ ಏಮ್ಸ್​​ಗೆ ಶಿಫ್ಟ್​ ಮಾಡಲಾಗಿದೆ.

ಕೊರೊನಾ ತಗುಲಿದ್ದ ಅಸಾರಾಂ ಬಾಪೂ ಜೋಧ್ಪುರ ಏಮ್ಸ್​​ಗೆ ಶಿಫ್ಟ್​

84 ವರ್ಷದ ಅಸಾರಾಂ ಅವರಿಗೆ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ ಎಂದು ಅವರ ಬೆಂಬಲಿಗರು ಆಗ್ರಹಿಸಿದ ಹಿನ್ನೆಲೆ ಅಸಾರಾಂ ಬಾಪೂರನ್ನು ಏಮ್ಸ್​​ಗೆ ಸ್ಥಳಾಂತರಿಸಲಾಗಿದೆ​ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಅತ್ಯಾಚಾರ ಕೇಸ್​ನಲ್ಲಿ ಜೈಲು ಪಾಲಾದ ಅಸಾರಾಂ ಬಾಪೂಗೆ ಕೊರೊನಾ: ಐಸಿಯುನಲ್ಲಿ ಚಿಕಿತ್ಸೆ!

ಸ್ವಯಂಘೋಷಿತ ದೇವಮಾನವ ಮತ್ತು 2013ರಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಎದೆನೋವು, ಉಸಿರಾಟದ ತೊಂದರೆ ಎದುರಿಸುತ್ತಿದ್ದ ಅವರನ್ನು ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇವರ ಕೋವಿಡ್​ ವರದಿ ಪಾಸಿಟಿವ್​ ಬಂದಿತ್ತು.

ABOUT THE AUTHOR

...view details