ಚೆನ್ನೈ(ತಮಿಳುನಾಡು):ಸಿನಿಮಾಗಳಲ್ಲಿ ನಡೆಯುವ ಕೆಲವೊಂದು ರೀಲ್ ಘಟನೆಗಳು ನಿಜ ಜೀವನದಲ್ಲೂ ಸಂಭವಿಸಿ ಬಿಡುತ್ತವೆ. ಸದ್ಯ ಅಂತಹದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚೆನ್ನೈನ ಹ್ಯಾರಿಂಗ್ಟನ್ ರಸ್ತೆಯ ಚೆಟ್ಟತ್ನಲ್ಲಿ ವಾಸವಾಗಿದ್ದ 80 ವರ್ಷದ ನಿವೃತ್ತ ಸಬ್ ಇನ್ಸ್ಪೆಕ್ಟರ್ನನ್ನ ದುಷ್ಕರ್ಮಿಗಳ ಗುಂಪು ಅಪರಹಣ ಮಾಡಿದ್ದು, ಪೊರೂರು ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ತದನಂತರ ಅವರ ಮಗ ಬಶೀರ್ಗೆ ಕರೆ ಮಾಡಿ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಕೊನೆಯದಾಗಿ 25 ಲಕ್ಷ ರೂಪಾಯಿಗೆ ಅಪಹರಣಗೊಂಡಿರುವ ವ್ಯಕ್ತಿಯನ್ನ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಗದಿನೊಂದಿಗೆ ಎಮಗೂರಿಗೆ ಬರುವಂತೆ ಬಶೀರ್ಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಶೀರ್ ಕಾನತ್ತೂರು ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾನೆ.
ಸಿನಿಮೀಯ ಸ್ಟೈಲ್ನಲ್ಲಿ ಅಪಹರಣಕಾರರ ಬಂಧಿಸಿದ ಪೊಲೀಸರು ಇದನ್ನೂ ಓದಿರಿ:ಉಪ ಚುನಾವಣೆ: ರಾಜ್ಯದ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ - ದೇಶದ ವಿವಿಧ ಕ್ಷೇತ್ರಗಳಿಗೂ ಕ್ಯಾಂಡಿಡೇಟ್ ಹೆಸರು ಘೋಷಣೆ
ಅಪಹರಣಕಾರರ ಬಂಧಿಸಲು ವಿಶೇಷ ತಂಡ ರಚನೆ ಮಾಡಿರುವ ಪೊಲೀಸರು, ಎಮಗೂರಿನ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದಾರೆ. ಅಪಹರಣಕಾರರು ಸ್ಥಳಕ್ಕೆ ಬರುತ್ತಿದ್ದಂತೆ ಬಶೀರ್ ಅವರಿಗೆ ನಗದು ನೀಡಿದ್ದಾರೆ. ಈ ವೇಳೆ, ಅಪಹರಣಕಾರನನ್ನ ರಿಲೀಸ್ ಮಾಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾಗಿರುವ ಪೊಲೀಸರು ಕಿಡ್ನಾಪರ್ಸ್ ಕಾರು ಸುತ್ತುವರೆದಿದ್ದಾರೆ. ಈ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾವಣೆ ಮಾಡಿಕೊಂಡು ಹೋಗಲು ಮುಂದಾಗಿದ್ದಾರೆ. ತಕ್ಷಣವೇ ಹೆಡ್ಕಾನ್ಸ್ಟೇಬಲ್ ಶರವಣ ಕುಮಾರ್ ಕಾರಿನ ಮೇಲೆ ಜಿಗಿದಿದ್ದಾರೆ. ಆತನನ್ನ ಕಾರಿನ ಮುಂಭಾಗದಲ್ಲಿಟ್ಟುಕೊಂಡು ಅಪಹರಣಕಾರರು ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನ ಬೆನ್ನಟ್ಟಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮೀಯ ಸ್ಟೈಲ್ನಲ್ಲಿ ಕಾರಿನ ಮೇಲೆ ಜಿಗಿದಿರುವ ಶರವಣ ಕುಮಾರ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಅವರ ಧೈರ್ಯಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಹರಣಕಾರರಿಂದ ಇದೀಗ 25 ಲಕ್ಷ ರೂ. ನಗದು, ಕಾರು, ಪಿಸ್ತೂಲ್ ಹಾಗೂ ಚಾಕು ವಶಕ್ಕೆ ಪಡೆದುಕೊಂಡಿದ್ದಾರೆ.