ದೇವರಿಯಾ(ಉತ್ತರಪ್ರದೇಶ):ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಪ್ರತಾಪ್ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ ಎನ್ನಲಾಗಿದೆ.
ದುರ್ಘಟನೆಯಲ್ಲಿ ವರುಣ್ ಅವರ ದೇಹವು ಶೇ.90 ರಷ್ಟು ಸುಟ್ಟು ಹೋಗಿದ್ದು, ತೀವ್ರ ನಿಗಾ ಘಟಕದಲ್ಲಿ ವರುಣ್ ಪ್ರತಾಪ್ರಿಗೆ ಚಿಕಿತ್ಸೆ ಮುಂದುವರಿದಿದೆ. ಅಲ್ಲದೇ, ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ. ಇದರಿಂದ ವರುಣ್ ಬದುಕಿ ಬರಲಿ ಎಂದು ಅವರ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.
ಗ್ರೂಪ್ ಕ್ಯಾಪ್ಟನ್ ವರುಣ್ ಪ್ರತಾಪ್ ಅವರು ಉತ್ತರಪ್ರದೇಶ ಮೂಲದವರಾಗಿದ್ದು, ಅವರ ತಂದೆ ಕೃಷ್ಣಪ್ರತಾಪ್ ಸಿಂಗ್ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದಲ್ಲದೇ ವರುಣ್ ಪ್ರತಾಪ್ರ ಇಬ್ಬರು ಮಕ್ಕಳು ಕೂಡ ನೌಕಾಪಡೆಯಲ್ಲಿದ್ದಾರೆ. ವರುಣ್ ಇಡೀ ಕುಟುಂಬವೇ ಸೇನೆಯಲ್ಲಿ ದುಡಿಯುತ್ತಿದೆ.
ಇದನ್ನೂ ಓದಿ: 'ಗಂಡನ ಬಗ್ಗೆ ಹೆಮ್ಮೆ ಇದೆ'... ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸತ್ಪಾಲ್ ರಾಯ್ ಪತ್ನಿ ಕಣ್ಣೀರು
ಪ್ರಸ್ತುತ ವರುಣ್ ಪ್ರತಾಪ್ ಅವರು ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಪೈಲಟ್ ಆಗಿದ್ದ ವರುಣ್ ತಮಿಳುನಾಡಿನ ಕೂನೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಇವರೊಬ್ಬರೇ ಬದುಕುಳಿದಿದ್ದರು.