ಕರ್ನಾಟಕ

karnataka

ನನ್ನ ರಾಜಕೀಯ ಜೀವನ ಹಾಳುಮಾಡುವ ಪಿತೂರಿ: ಮಹಾ ವಿಧಾನಸಭೆ ಸದನದಲ್ಲಿ ಡಿಸೈನರ್ ಸತ್ಯ ಬಿಚ್ಚಿಟ್ಟ ಡಿಸಿಎಂ ಫಡ್ನವೀಸ್

By

Published : Mar 16, 2023, 7:19 PM IST

ಆರೋಪಿ ಅನಿಲ್ ಜೈಸಿಂಘಾನಿ ಮಗಳೊಬ್ಬಳು ಡಿಸೈನರ್ ಅಂಥ ಪರಿಚಯಿಸಿಕೊಂಡು ನನ್ನ ಪತ್ನಿ ಅಮೃತಾ ವಿಶ್ವಾಸ ಗಳಿಸಿದ್ದಾರೆ. ಬಳಿಕ ನನ್ನ ತಂದೆ ವಿರುದ್ಧ ಹಲವು ಪ್ರಕರಣಗಳಿದ್ದು, ಹಿಂಪಡೆದರೆ ಕೋಟಿ ರೂ ನೀಡುವದಾಗಿ ಒತ್ತಾಯಿಸಿದ್ದರು. ಡಿಸೈನರ್ ವಿರುದ್ಧ ನನ್ನ ಪತ್ನಿ ಎಫ್​ಐಆರ್ ದಾಖಲಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶೋಧದಲ್ಲಿ ತೊಡಗಿದ್ದಾರೆ.

dcm fadnavis,Opposition party leader Ajit Pawar
ಡಿಸಿಎಂ ಫಡ್ನವೀಸ್,ಪ್ರತಿಪಕ್ಷದ ಪಕ್ಷದ ನಾಯಕ ಅಜಿತ್ ಪವಾರ್

ಮುಂಬೈ:( ಮಹಾರಾಷ್ಟ್ರ) ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಕಾಡುತ್ತಿರುವ ಮಹಿಳೆ ಯಾರು ಎಂಬ ಪ್ರಶ್ನೆಯನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕಅಜಿತ್ ಪವಾರ್ ಅವರು ಎತ್ತುವ ಮೂಲಕ ಸಂಚಲನ ಮೂಡಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ದೇವೇಂದ್ರ ಫಡ್ನವೀಸ್, ಪ್ರಶ್ನೆಗೆ ಸದನದಲ್ಲಿ ಸರಳ ಮಾಹಿತಿ ನೀಡಿದರು.

ಕೆಲವರು ತಮ್ಮನ್ನು ಹೇಗಾದರೂ ಮಾಡಿ ತೊಂದರೆಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧಿಸಿದವರ ವಿರುದ್ಧ ಶೀಘ್ರ ಕ್ರಮ ಜರುಗಿಸಲಾಗುವುದು.ನಿಜವಾದ ಸೂತ್ರಧಾರನನ್ನೂ ಪತ್ತೆ ಮಾಡಲಾಗುವುದು ಎಂದು ಎಂದು ತಿಳಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ಪಕ್ಷದ ನಾಯಕ ಅಜಿತ್ ಪವಾರ್ ಅವರು ನಿಮಗೆ ಬಂದಿರುವ ಬಿಕ್ಕಟ್ಟಾದರೂ ಏನು ಎಂದು ಮರು ಪ್ರಶ್ನೆ ಎತ್ತಿದರು.

ವಿಧಾನಸಭೆಯಲ್ಲಿ ಅಜಿತ್ ಪವಾರ್ ಅವರು ಕೇಳಿದ ಪ್ರಶ್ನೆಗೆ ಧನ್ಯವಾದ ಅರ್ಪಿಸಿದ ಡಿಸಿಎಂ ಹಾಗೂ ಗೃಹಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಕರಣದ ಬಗ್ಗೆ ಸದನದಲ್ಲಿ ವಿವರಣೆ ನೀಡಿದರು ‘‘2015-16ರಲ್ಲಿ ಅನಿಲ್ ಜೈಸಿಂಘಾನಿ ತಲೆಮರೆಸಿಕೊಂಡಿದ್ದು, ಆತನ ಮಗಳು ಡಿಸೈನರ್ ಎಂದು 2021 ರಲ್ಲಿ ನನ್ನ ಪತ್ನಿ ಅಮೃತಾ ಫಡ್ನವಿಸ್ ಜತೆ ಪರಿಚಯ ಮಾಡಿಕೊಂಡು ಸಂಪರ್ಕಕ್ಕೆ ಬಂದಿದ್ದಾರೆ. ನನ್ನ ಪತ್ನಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿರುವ ಕಾರಣ ನಿತ್ಯ ಹಲವಾರು ಜನರು ಭೇಟಿಯಾಗುವುದು ಸಹಜ. ಈ ಹುಡುಗಿ ಡ್ರೆಸ್ ಡಿಸೈನರ್ ಎಂದು ಕಥೆ ಹೇಳುವ ಮೂಲಕ ಅಮೃತಾ ಅವರ ವಿಶ್ವಾಸ ಗಳಿಸಿದ್ದಾರೆ. ಆರಂಭದಲ್ಲಿ ವಿವಿಧ ವಿನ್ಯಾಸದ ಉಡುಪುಗಳು ಮತ್ತು ಹೊಂದಾಣಿಕೆಯ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಸಾವಕಾಶವಾಗಿ ಪರಿಚಯ ಮಾಡಿಕೊಂಡಿದ್ದ ಹುಡುಗಿ ನನ್ನ ತಂದೆಯ ಮೇಲೆ ಹಲವು ಪ್ರಕರಣಗಳಿದ್ದು, ಅವುಗಳನ್ನು ಹಿಂಪಡೆದರೆ ಒಂದು ಕೋಟಿ ರೂಪಾಯಿ ನೀಡುವುದಾಗಿಯೂ ಆ ಡಿಸೈನರ್ ನನ್ನ ಪತ್ನಿಗೆ ಒತ್ತಾಯಿಸಿದ್ದಾರೆ. ನನ್ನ ಪತ್ನಿಯ ಎದುರು ಆ ಹುಡುಗಿ ಅವಳು ಬಹಳಷ್ಟು ದೊಡ್ಡ ವ್ಯಕ್ತಿಗಳೊಂದಿಗೆ ಪರಿಚಯ ಇರುವುದನ್ನು ಪೋನ್ ಸಹಿತ ದಾಖಲೆಗಳನ್ನು ತೋರಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ನನ್ನ ತಂದೆಯನ್ನು ಬಿಡುಗಡೆಗೊಳಿಸುವ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ, ಸರ್ಕಾರ ಬದಲಾದ ನಂತರ ಅವರ ತಂದೆ ವಿರುದ್ಧ ಇರುವ ಪ್ರಕರಣಗಳನ್ನು ಹಿಂಪಡೆದಿಲ್ಲ. ನನ್ನ ತಂದೆಗೆ ಬುಕ್ಕಿಗಳ ಪರಿಚಯವಿದ್ದು, ಅವರ ಮೇಲೆ ದಾಳಿ ಮಾಡಿ ಹಣ ಸಂಪಾದಿಸಬಹುದು ಎಂದೂ ಆ ಡಿಸೈನರ್ ಹೇಳಿದ್ದಾರೆ‘‘ ಎಂದು ಪಡ್ನವಿಸ್​ ಸದನದ ಗಮನಕ್ಕೆ ತಂದರು.

ಮುಂದುವರಿದು ಮಾತನಾಡಿದ ಅವರು, ನನ್ನ ಹೆಂಡತಿ ಅಮೃತಾ ಡಿಸೈನರ್​ ಮಗಳ ಆಫರ್​ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಆ ಡಿಸೈನರ್ ವಿರುದ್ಧ ದೂರು ದಾಖಲು ಆಗಿದೆ. ಇದರಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ದೊಡ್ಡ ವ್ಯಕ್ತಿಗಳ ಹೆಸರಿದೆ. ಆದರೆ ಈಗ ಅದನ್ನೂ ಹೇಳುವುದಿಲ್ಲ ಎಂದು ಡಿಸಿಎಂ ಸದನಕ್ಕೆ ತಿಳಿಸಿದರು.

ಫಡ್ನವಿಸ್ ನನ್ನ ಪತ್ನಿ ಆವಳ ಸಂಖ್ಯೆಯನ್ನು ನಿರ್ಬಂಧಿಸಿದ ನಂತರ ಅವಳು (ಅಮೃತಾ) ಅಪರಿಚಿತ ಸಂಖ್ಯೆಯಿಂದ ವಿಡಿಯೋಗಳು ಮತ್ತು ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. “ಒಂದು ಗಂಭೀರ ವಿಡಿಯೋ ಇತ್ತು. ಅದರಲ್ಲಿ, ಹುಡುಗಿ ಹಣವನ್ನು ಬ್ಯಾಗ್‌ನಲ್ಲಿ ಪ್ಯಾಕ್ ಮಾಡುತ್ತಿದ್ದಾಳೆ ಮತ್ತು ಆ ಬ್ಯಾಗ್ ನನ್ನ ಮನೆಯಲ್ಲಿ ಕಾಣಿಸಿಕೊಂಡಿದೆ ಎಂದು ದೇವೇಂದ್ರ ಫಡ್ನವೀಸ್ ವಿಧಾನಸಭೆಗೆ ತಿಳಿಸಿದರು.

ನಿಜವಾಗಿ ಹೇಳಬೇಕೆಂದರೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಸಲಾಗುತ್ತಿದೆ. ನನ್ನ ಕುಟುಂಬದವರನ್ನೂ ಬೇಕಂತಲೆ ಟಾರ್ಗೆಟ್ ಮಾಡಲಾಗುತ್ತಿದೆ. ಇಂಥ ಕೀಳುಮಟ್ಟದ ರಾಜಕೀಯ ಮಾಡಬಾರದು. ಈ ಘಟನೆ ಕುರಿತಾಗಿ ಇದಕ್ಕೆ ಸಂಬಂಧಿಸಿದವರೆ ವಿರುದ್ಧ ದೂರು ದಾಖಲಾಗಿದೆ. ತಲೆಮರೆಸಿಕೊಂಡಿರುವ ಆಕೆಯ ತಂದೆ ವಿರುದ್ಧವೂ ದೂರು ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ, ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಲಾಗುವುದು ಎಂದು ಫಡ್ನವೀಸ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಕಾಂಗ್ರೆಸ್​ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್.. ಸಿಎಂ ಬೊಮ್ಮಾಯಿ ವ್ಯಂಗ್ಯ

ABOUT THE AUTHOR

...view details