ಕರ್ನಾಟಕ

karnataka

1971ರ ಯುದ್ಧದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನ: ಕಾಂಗ್ರೆಸ್​ ವಾಗ್ದಾಳಿ

By

Published : Dec 16, 2021, 11:18 PM IST

ಬಾಂಗ್ಲಾ ವಿಮೋಚನಾ ಯುದ್ಧದ 50ನೇ ವಾರ್ಷಿಕೋತ್ಸವದ ವೇಳೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

Congress Slams Centre govt
ಕೇಂದ್ರದ ವಿರುದ್ಧ ಕಾಂಗ್ರೆಸ್​ ನಾಯಕರು ವಾಗ್ದಾಳಿ

ನವದೆಹಲಿ: ಬಾಂಗ್ಲಾದೇಶದ ವಿಮೋಚನಾ ದಿನ ಆಚರಣೆ ಸಮಯದಲ್ಲಿ ಕಾಂಗ್ರೆಸ್​ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 1971ರ ಇಂಡೋ-ಪಾಕ್​ ಯುದ್ಧದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಮುಖ ಪಾತ್ರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯಸಭೆ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಮಾತನಾಡಿ, ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂಭ್ರಮಾಚರಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಾಧನೆಯನ್ನ ಇತಿಹಾಸದಿಂದ ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಸಂಭ್ರಮಾಚರಣೆಯಲ್ಲಿ ಅಂದಿನ ಸರ್ಕಾರದ ಬಗ್ಗೆ ಒಂದೇ ಒಂದು ಉಲ್ಲೇಖವೂ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂದಿರಾಗಾಂಧಿ ಅವರನ್ನು ‘ದುರ್ಗಾ’ ಎಂದು ಕರೆದು ಹೊಗಳಿದ್ದ ಅಂದಿನ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರ ವಾಜಪೇಯಿಯವರು ಮಾತಗಳನ್ನು ನೆನಪಿಸಿಕೊಂಡ ಖರ್ಗೆ, ಸಂಸತ್ತಿನಲ್ಲಿ ಇಂತಹ ಸಂದರ್ಭದ ಮಾತನಾಡಲು ನಮಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಬಳಿಕ ಕಾಂಗ್ರೆಸ್ ಸಂಸದ ಗೌರವ್​ ಗೊಗೊಯ್ ಮಾತನಾಡಿ, ನಮ್ಮ ಪ್ರಧಾನಿ ದುರದೃಷ್ಟವಶಾತ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರನ್ನೂ ತೆಗೆದುಕೊಳ್ಳಲು ಸಾಧ್ಯವಾಗದಷ್ಟು ಅಭದ್ರತೆ ಮತ್ತು ದುರ್ಬಲರಾಗಿದ್ದಾರೆ. ಇದು ಇತಿಹಾಸವನ್ನು ಬಿಳಿಯಾಗಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಆದರೆ, ನಾವು ಇದನ್ನು ಮಾಡಲು ಬಿಡುವುದಿಲ್ಲ ಎಂದರು.

ಕೋವಿಡ್​ನಿಂದ ಮೊದಲು ವ್ಯಾಪಾರಗಳು ಮತ್ತು ಭಾರತೀಯ ಆರ್ಥಿಕತೆ ಮೇಲೆ ಸಂಭವಿಸಿದ ಸವೆತವನ್ನು ಗಮನಿಸಿ. ಕೊರೊನಾಗಿಂತ ಮೊದಲೇ ನಮ್ಮ ಆರ್ಥಿಕತೆಯು ಅರ್ಧದಷ್ಟು ಕುಸಿದಿತ್ತು ಎಂಬುದನ್ನು ಸರ್ಕಾರಕ್ಕೆ ನೆನಪಿಸುವುದು ಮುಖ್ಯವಾಗಿದೆ. ಇದಕ್ಕೆ ಕೋವಿಡ್ ಕಾರಣವಲ್ಲ, ಇದು ಸರ್ಕಾರದ ಆರ್ಥಿಕ ದುರುಪಯೋಗ, ಅವರ ತಪ್ಪು ಆದ್ಯತೆಗಳಿಂದ ಹೀಗಾಗಿದೆ. ಎಂಎಸ್‌ಎಂಇಗಳು ಆರ್ಥಿಕತೆಯ ಬೆನ್ನೆಲುಬುಗಳಾಗಿವೆ. ಅವುಗಳನ್ನು ಪೋಷಿಸಲಾಗಿಲ್ಲ, ಅವುಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ಬದಲಿಗೆ 2-3 ದೊಡ್ಡ ಉದ್ಯಮಗಳು ಈ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನಾ ಕೇಂದ್ರ ಸಚಿವ ನಾರಾಯಣ ರಾಣೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಿಖಿತ ಉತ್ತರವನ್ನು ನೀಡಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸುಮಾರು 5,744 ಎಂಎಸ್‌ಎಂಇಗಳನ್ನು ಒಳಗೊಂಡ ಆನ್‌ಲೈನ್ ಸಮೀಕ್ಷೆಯನ್ನು ನಡೆಸಲಾಗಿತ್ತು. ಅವುಗಳಲ್ಲಿ ಶೇ. 91 ರಷ್ಟು ಕಾರ್ಯನಿರ್ವಹಿಸುತ್ತಿವೆ. ಕೋವಿಡ್​​ ಹಿನ್ನೆಲೆಯಲ್ಲಿ ಶೇ. 9ರಷ್ಟು ಬಂದ್​ ಆಗಿವೆ ಎಂದು ಬಾಕಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಭುವನ ಸುಂದರಿ ಹರ್ನಾಜ್ ಸಂಧುಗೆ ಕ್ವಾರಂಟೈನ್

ABOUT THE AUTHOR

...view details