ಕರ್ನಾಟಕ

karnataka

'ಖರ್ಗೆ ಅವರನ್ನು ಕೇಳಿ..': ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಹುಲ್​ ಅಚ್ಚರಿ ಹೇಳಿಕೆ

By

Published : Oct 19, 2022, 3:07 PM IST

Updated : Oct 19, 2022, 5:12 PM IST

ಕಾಂಗ್ರೆಸ್ ಪಕ್ಷದಲ್ಲಿ ನನ್ನ ಪಾತ್ರದ ಕುರಿತು ಅಧ್ಯಕ್ಷರೇ ನಿರ್ಧಾರ ಮಾಡುವರು ಎಂದು ರಾಹುಲ್​​ ಗಾಂಧಿ ಹೇಳಿದರು. ಆದ್ರೆ ಚುನಾವಣೆಯ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಅವರು ಖರ್ಗೆ ಹೆಸರು ಉಲ್ಲೇಖಿಸಿದ್ದು ಹುಬ್ಬೇರಿಸಿತು.

ask-kharge-ji-rahul-gandhi-on-his-role-in-party
ಖರ್ಗೆ ಅವರನ್ನು ಕೇಳಿ: ಚುನಾವಣಾ ಫಲಿತಾಂಶ ಮುನ್ನವೇ ರಾಹುಲ್​ ಅಚ್ಚರಿ ಹೇಳಿಕೆ

ಆದೋನಿ (ಆಂಧ್ರ ಪ್ರದೇಶ): ನಾನು ಕಾಂಗ್ರೆಸ್​ ಅಧ್ಯಕ್ಷರ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸುತ್ತಾರೆ ಎಂದು ಪಕ್ಷದ ಮಾಜಿ ಅಧ್ಯಕ್ಷ, ಸಂಸದ ರಾಹುಲ್​ ಗಾಂಧಿ ತಿಳಿಸಿದರು. ಅಚ್ಚರಿಯೆಂದರೆ, ಪಕ್ಷದ ಅಧ್ಯಕ್ಷೀಯ ಸ್ಥಾನದ ಚುನಾವಣಾ ಫಲಿತಾಂಶ ಸಾರ್ವಜನಿಕವಾಗಿ ಪ್ರಕಟವಾಗುವ ಮುನ್ನವೇ ಅವರು ಈ ರೀತಿ ಹೇಳಿದ್ದು ಅಚ್ಚರಿ ಉಂಟು ಮಾಡಿತು.

ಅಕ್ಬೋಬರ್ 17ರಂದು ಕೈ ಅಧ್ಯಕ್ಷ ಸ್ಥಾನಕ್ಕೆ ಮತದಾನವಾಗಿತ್ತು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ತಿರುವನಂತಪುರಂ ಸಂಸದ ಶಶಿ ತರೂರ್​ ಕಣದಲ್ಲಿದ್ದರು. ಇಂದು ಮಧ್ಯಾಹ್ನ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಸ್ವಲ್ಪ ಹೊತ್ತಿಗೂ ಮುನ್ನ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ ಸಾಗುತ್ತಿರುವ ಆಂಧ್ರ ಪ್ರದೇಶದ ಆದೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ವೇಳೆ, ನಾನು ಕಾಂಗ್ರೆಸ್​ ಅಧ್ಯಕ್ಷರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸುತ್ತಾರೆ, ಅವರನ್ನೇ ಕೇಳಿ. ಪಕ್ಷದಲ್ಲಿ ನನ್ನ ಪಾತ್ರದ ಕುರಿತೂ ಸಹ ಅಧ್ಯಕ್ಷರೇ ನಿರ್ಧರಿಸುತ್ತಾರೆ ಎಂದು ಹೇಳಿದರು. ಫಲಿತಾಂಶ ಬಹಿರಂಗವಾಗುವ ಮೊದಲೇ ರಾಹುಲ್ ಈ ರೀತಿ​ ಖರ್ಗೆ ಹೆಸರು ಪ್ರಸ್ತಾಪಿಸಿದ್ದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: 24 ವರ್ಷಗಳ ನಂತರ ಗಾಂಧಿಯೇತರ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

Last Updated : Oct 19, 2022, 5:12 PM IST

ABOUT THE AUTHOR

...view details