ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ದಶಕಗಳಿಂದ ಈಶಾನ್ಯ ಭಾಗದ ರಾಜ್ಯಗಳನ್ನು ನಿರ್ಲಕ್ಷಿಸಿದೆ: ಪಿಎಂ ಮೋದಿ

ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತಿದ್ದಂತೆ ಪಶ್ಚಿಮಾ ಬಂಗಾಳದಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ಪ್ರಧಾನಮಂತ್ರಿ ಮೋದಿ ಭರವಸೆ ನೀಡಿದ್ದಾರೆ.

ಚುನಾವಣಾ ರ್ಯಾಲಿ
ನರೇಂದ್ರ ಮೋದಿ

By

Published : Mar 20, 2021, 4:24 AM IST

ನವದೆಹಲಿ: ಕಾಂಗ್ರೆಸ್ ಪಕ್ಷ ಕೆಲವು ದಶಕಗಳಿಂದ ಈಶಾನ್ಯ ಭಾಗದ ರಾಜ್ಯಗಳನ್ನು ನಿರ್ಲಕ್ಷಿಸಿದೆ. ಆದರೆ ಎನ್​ಡಿಎ ಸರ್ಕಾರ ಸಾಮಾಜಿಕ ಸಬಲೀಕರಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

"ದಶಕಗಳಿಂದಲೂ ಕಾಂಗ್ರೆಸ್​ ಈಶಾನ್ಯ ಭಾಗವನ್ನು ಮರೆತಿದೆ. ಆದರೆ 2016ರಿಂದ ಎನ್​ಡಿಎ ಸರ್ಕಾರ ಸಂಪರ್ಕ ಮತ್ತು ಸಾಮಾಜಿಕ ಸಬಲೀಕರಣದ ಕಡೆಗೆ ಹೆಚ್ಚು ಗಮನ ಹರಿಸಿದೆ. ಇಷ್ಟೊಂದು ವಾತ್ಸಲ್ಯ ತೋರಿದ್ದಕ್ಕಾಗಿ ಧನ್ಯವಾದ ಕರೀಂಗಂಜ್" ಅಸ್ಸಾಮ್​ನ ಕರೀಂಗಂಜ್​ನಲ್ಲಿ ರ್ಯಾಲಿ ಮುಗಿದ ಮಾರನೆಯ ದಿನ ಸರಣಿ ಟ್ವೀಟ್ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತಿದ್ದಂತೆ ಪಶ್ಚಿಮಾ ಬಂಗಾಳದಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ಪ್ರಧಾನಮಂತ್ರಿ ಮೋದಿ ಭರವಸೆ ನೀಡಿದ್ದಾರೆ.

" ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ರಾಜ್ಯದ ಅಭಿವೃದ್ಧಿಯ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ, ಟಿಎಂಸಿ ಕಾರ್ಯಕರ್ತರ ಬೆದರಿಸುವಿಕೆ ಕೂಡ ನಿಲ್ಲುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪುರುಲಿಯಲ್ಲಿ ಗುರುವಾರ ನಡೆದ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿಯ ಖೇಲಾ ಹೋಬ್​ ಘೋಷಣೆಗೆ ಸವಾಲೆಸಿದಿರುವ ಮೋದಿ, ದೀದಿ ಹೇಳ್ತಾರೆ ಖೇಲಾ ಹೋಬ್(ಆಟ ಶುರುವಾಗಿದೆ) ಎಂದು, ಆದ್ರೆ, ಬಿಜೆಪಿ ಹೇಳುತ್ತೆ ವಿಕಾಶ, ಉದ್ಯೋಗ, ಶಿಕ್ಷಣ, ಸ್ನೇಹ ಆರಂಭವಾಗಿದೆ ಎಂದು ಹೇಳುವ ಮೂಲಕ ದೀದಿಗೆ ಟಾಂಗ್ ನೀಡಿದ್ದಾರೆ.

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತದಲ್ಲಿ ಚುನಾವಣೆ ಮಾರ್ಚ್​ 27ರಿಂದ ಏಪ್ರಿಲ್ 29ರವರೆಗೆ ನಡೆಯಲಿದೆ. ಮೇ 2 ರಂದು ಮತ ಏಣಿಕೆ ನಡೆಯಲಿದೆ.

ABOUT THE AUTHOR

...view details