ಕೊಚ್ಚಿ (ಕೇರಳ): ಎಲ್ಲ ರೀತಿಯ ಕೋಮುವಾದ ಮತ್ತು ಹಿಂಸಾಚಾರ ಒಂದೇ. ಅವು ಎಲ್ಲಿಂದ ಬಂದರೂ ಒಂದೇ ಆಗಿರುತ್ತವೆ. ಅದರ ವಿರುದ್ಧ ಹೋರಾಡಬೇಕು. ಶೂನ್ಯ ಸಹಿಷ್ಣುತೆ ಇರಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಿಎಫ್‌ಐ ಕಚೇರಿಗಳು ಮತ್ತು ಅದರ ನಾಯಕರ ಮೇಲೆ ಎನ್‌ಐಎ ದಾಳಿ ಕುರಿತಾದ ಪ್ರಶ್ನೆಗೆ ರಾಹುಲ್ ಈ ಉತ್ತರ ನೀಡುವ ಮೂಲಕ ಪರೋಕ್ಷವಾಗಿ ಎನ್‌ಐಎ ದಾಳಿಯನ್ನು ಬೆಂಬಲಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಭಾಗವಾಗಿ ಕೇರಳದ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿದಿಟ್ಟುಕೊಂಡಿರುವ ಯಂತ್ರದೊಂದಿಗೆ ನಾವು ಹೋರಾಡುತ್ತಿದ್ದೇವೆ. ಅದು ಅನಿಯಮಿತ ಹಣದ ಮೂಲಕ ಜನರನ್ನು ಖರೀದಿಸುವ ಹಾಗೂ ಒತ್ತಡ ಹೇರಿ ಬೆದರಿಸುವ ಕೆಲಸ ಮಾಡುತ್ತಿದೆ. ಅದರ ಫಲಿತಾಂಶವನ್ನು ನೀವು ಗೋವಾದಲ್ಲಿ ನೋಡಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ದೇಶಾದ್ಯಂತ ಎನ್‌ಐಎ ದಾಳಿ: 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಬಂಧನ