ಕರ್ನಾಟಕ

karnataka

ETV Bharat / bharat

ನಿರುದ್ಯೋಗ, ಹಣದುಬ್ಬರ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ನಿರುದ್ಯೋಗ, ಹಣದುಬ್ಬರ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

Congress hold a nationwide protest
ಕಾಂಗ್ರೆಸ್ ಪ್ರತಿಭಟನೆ

By

Published : Aug 5, 2022, 9:59 AM IST

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್‌ಟಿ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಜಂತರ್ ಮಂತರ್ ಹೊರತುಪಡಿಸಿ ನವದೆಹಲಿಯ ಸುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಪ್ರತಿಭಟನೆಯ ಭಾಗವಾಗಿ ಕಾಂಗ್ರೆಸ್ ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಸಂಚಾರ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ, ಧೌಲಾ ಕುವಾನ್, ರಿಡ್ಜ್ ರಸ್ತೆ, ಶಂಕರ್ ರಸ್ತೆ, ಪಂಚಕುಯಾನ್ ರಸ್ತೆ, ಚೆಲ್ಮ್ಸ್‌ಫೋರ್ಡ್ ರಸ್ತೆ, ಮಿಂಟೋ ರಸ್ತೆ, ಮಥುರಾ ರಸ್ತೆ, ಡಬ್ಲ್ಯೂ-ಪಾಯಿಂಟ್, ಲೋಧಿ ರಸ್ತೆಯ ಆಚೆಗೆ ಬಸ್‌ಗಳನ್ನು ನಿರ್ಬಂಧಿಸಲಾಗುತ್ತದೆ.

ವಿಶೇಷ ಸಂಚಾರ ವ್ಯವಸ್ಥೆಯಿಂದಾಗಿ, ಕಮಲ್ ಅತ್ತತುರ್ಕ್ ಮಾರ್ಗ, ಕೌಟಿಲ್ಯ ಮಾರ್ಗ, ತೀನ್ ಮೂರ್ತಿ ಮಾರ್ಗ, ರಾಜಾಜಿ ಮಾರ್ಗ, ಅಕ್ಬರ್ ರಸ್ತೆ, ಸಫ್ದರ್‌ಜಂಗ್ ರಸ್ತೆ ಮತ್ತು ರೈಸಿನಾ ರಸ್ತೆಗಳಲ್ಲಿ ಸಂಚಾರವಿಲ್ಲ. ಸರ್ದಾರ್ ಪಟೇಲ್ ಮಾರ್ಗ, ಶಾಂತಿ ಪಥ, ಪಂಚಶೀಲ ಮಾರ್ಗ, ತುಘಲಕ್ ರಸ್ತೆ, ಎಪಿಜೆ ಅಬ್ದುಲ್ ಕಲಾಂ ರಸ್ತೆ, ಪೃಥ್ವಿ ರಾಜ್ ರಸ್ತೆ, ಷಹಜಹಾನ್ ರಸ್ತೆ, ಜಾಕಿರ್ ಹುಸೇನ್ ಮಾರ್ಗ, ಮುಲಾನಾ ಆಜಾದ್ ರಸ್ತೆ, ರಫಿ ಮಾರ್ಗ, ಜನಪಥ್ ರಸ್ತೆ, ಅಶೋಕ ರಸ್ತೆ, ರಾಜೇಂದರ್‌ನಲ್ಲಿ ಹೆಚ್ಚಿನ ದಟ್ಟಣೆ ಇರಲಿದೆ ಎಂದು ವಿಶೇಷ ಪೊಲೀಸ್ ಆಯುಕ್ತರು (ಸಂಚಾರ) ಎಸ್.ಎಸ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ:Antilia explosives case: ಆರೋಪಿಗಳಿಗೆ ಚಾರ್ಜ್​ಶೀಟ್​ ನಕಲು ನೀಡಲು ಎನ್​ಐಎ ನಕಾರ!

ABOUT THE AUTHOR

...view details