ಕರ್ನಾಟಕ

karnataka

ETV Bharat / bharat

ತೃತೀಯಲಿಂಗಿಗಳ ಮತದಾರರ ಪಟ್ಟಿಗೆ ಸೇರ್ಪಡೆ ಪ್ರಕ್ರಿಯೆ ಸುಲಭಗೊಳಿಸಲು ಸಮಿತಿ ರಚನೆ: ರಾಜೀವ್ ಕುಮಾರ್

ಜನ್ಮ ದಿನಾಂಕ, ಪ್ರಮಾಣಪತ್ರ ವಿಷಯಗಳಲ್ಲಿ ಯಾವ ರೀತಿ ಪ್ರಕ್ರಿಯೆಗಳನ್ನು ಸುಲಭಗೊಳಿಸಬಹುದು. ಮತ್ತು ಆಸ್ತಿ ಹಕ್ಕುಗಳಿಲ್ಲದಿದ್ದರೂ ನಾವು ಹೇಗೆ ಸ್ವಯಂ ಅಫಿಡವಿಟ್‌ಗಳನ್ನು ಪುರಾವೆಯಾಗಿ ತೆಗೆದುಕೊಳ್ಳಬಹುದು ಎಂಬುದರ ಕುರಿತು ಚರ್ಚಿಸಲು ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

Election Commission of India
ಭಾರತೀಯ ಚುನಾವಣಾ ಆಯೋಗ

By

Published : Nov 10, 2022, 12:45 PM IST

ಪುಣೆ(ಮಹಾರಾಷ್ಟ್ರ): ಸಮಾಜದಲ್ಲಿ ಹಿಂದೆ ಉಳಿದಿರುವ ತೃತೀಯಲಿಂಗಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ.

ಪುಣೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಯನ್ನು ರಾಷ್ಟ್ರ ಮಟ್ಟದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ತೃತೀಯ ಲಿಂಗಿಗಳು ತಾವಾಗಿಯೇ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿಕೊಳ್ಳಲು ಹೋದ ಸಂದರ್ಭ ಎದುರಿಸಿದ ಸಮಸ್ಯೆಗಳ ಕುರಿತು ವಿವರಿಸಿದರು. ಈ ಕುರಿತು ತಾವು ಮತ್ತು ತಮ್ಮ ಸಹೋದ್ಯೋಗಿಗಳು ತೃತೀಯ ಲಿಂಗಿಗಳ ಒಂದು ಗುಂಪಿನ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

ಆ ವೇಳೆ ಅವರು ಹಂಚಿಕೊಂಡ ಅವರ ನೋವುಗಳು, ಅಭಿಪ್ರಾಯಗಳು ಬಹಳವಾಗಿ ನಮ್ಮನ್ನು ಪ್ರೇರೇಪಿಸಿದವು. ನಮಗೆ ಯಾವುದೇ ಆಸ್ತಿ ಹಕ್ಕುಗಳಿಲ್ಲ, ನಾವು ಯಾವ ವಿಳಾಸವನ್ನು ನೀಡಬೇಕು ಎಂದು ಅವರು ಕೇಳುತ್ತಾರೆ. ತಾವು ಕಳಂಕಿತರು ಎಂಬ ಭಾವನೆ ಅವರಲ್ಲಿದೆ. ಅವರ ಜನ್ಮ ದಿನಾಂಕವನ್ನೂ ನೋಂದಣಿ ಮಾಡಲಾಗಿಲ್ಲ ಎಂದು ರಾಜೀವ್​ ಕುಮಾರ್​ ಬೇಸರ ವ್ಯಕ್ತಪಡಿಸಿದರು.

ತೃತೀಯ ಲಿಂಗಿಗಳ ಜೊತೆಗಿನ ಸಭೆಯ ನಂತರ ನಾವು ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸಮತಿಯೊಂದನ್ನು ರಚಿಸಬೇಕು ಎಂಬ ತೀರ್ಮಾನ ಕೈಗೊಂಡಿದ್ದೇವೆ. ಜನ್ಮ ದಿನಾಂಕ, ಪ್ರಮಾಣಪತ್ರಗಳ ವಿಷಯಗಳಲ್ಲಿ ಯಾವ ರೀತಿ ಪ್ರಕ್ರಿಯೆಗಳನ್ನು ಸುಲಭಗೊಳಿಸಬಹುದು. ಮತ್ತು ಆಸ್ತಿ ಹಕ್ಕುಗಳಿಲ್ಲದಿದ್ದರೂ ನಾವು ಹೇಗೆ ಸ್ವಯಂ ಅಫಿಡವಿಟ್‌ಗಳನ್ನು ಪುರಾವೆಯಾಗಿ ತೆಗೆದುಕೊಳ್ಳಬಹುದು ಎಂಬುದರ ಕುರಿತು ವರದಿ ಸಿದ್ಧಪಡಿಸಲು ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಶ್ರೀಕಾಂತ್ ದೇಶಪಾಂಡೆ ಅವರು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಅವರು ಇಡೀ ಭಾರತಕ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ನಮ್ಮ ನಿಮ್ಮಂತೆ ತೃತೀಯ ಲಿಂಗಿಗಳೂ ಸಮಾಜದ ಒಂದು ಭಾಗವಾಗಿರುವ ಕಾರಣ, ನಾವು ಕೆಲವು ತೃತೀಯ ಲಿಂಗಿಗಳನ್ನು ನಮ್ಮ ರಾಷ್ಟ್ರೀಯ ಐಕಾನ್​ಗಳಾಗಿಯೂ ರೂಪಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಏಕಾಂಗಿಯಾಗಿ ಕಾನೂನು ಹೋರಾಟ ಮಾಡಿ ಪಿಎಸ್​ಐ ಹುದ್ದೆಯ ಮೀಸಲಾತಿ ಗಿಟ್ಟಿಸಿಕೊಂಡ ತೃತೀಯ ಲಿಂಗಿ

ABOUT THE AUTHOR

...view details