ಕರ್ನಾಟಕ

karnataka

ETV Bharat / bharat

ಬಾಬಾ ಗೋರಖ್‌ನಾಥನಿಗೆ ಖಿಚಡಿ ಅರ್ಪಿಸಿದ ಸಿಎಂ ಯೋಗಿ ಆದಿತ್ಯನಾಥ.. ಏನಿದು ಸಂಪ್ರದಾಯ?

ಸಿಎಂ ಯೋಗಿ ಆದಿತ್ಯನಾಥ ಅವರು ಬಾಬಾ ಗೋರಖ್‌ನಾಥ ದೇವಾಲಯದಲ್ಲಿ ಖಿಚಡಿ ಅರ್ಪಿಸಿದ್ದಾರೆ. ನಾಡಿನ ಸಮೃದ್ಧಿಗಾಗಿ ಸೂರ್ಯದೇವನ ಉತ್ತರಾಯಣದಂದು ಖಿಚಡಿಯನ್ನು ಅರ್ಪಿಸುವ ವಿಶಿಷ್ಟ ಸಂಪ್ರದಾಯ ಇದಾಗಿದೆ.

CM Yogi Adityanath
ಸಿಎಂ ಯೋಗಿ ಆದಿತ್ಯನಾಥ್

By

Published : Jan 15, 2022, 9:14 AM IST

ಗೋರಖ್‌ಪುರ(ಉತ್ತರ ಪ್ರದೇಶ):ಮಕರ ಸಂಕ್ರಾಂತಿಯಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಬಾ ಗೋರಖನಾಥನಿಗೆ ನಸುಕಿನ ಜಾವ 4:00 ಗಂಟೆಗೆ ಖಿಚಡಿ ಅರ್ಪಿಸಿದರು. ಇದರೊಂದಿಗೆ ಗೋರಖನಾಥ ದೇಗುಲದ ಬಾಗಿಲು ತೆರೆದು ನೇಪಾಳದ ಜನತೆ ಸೇರಿದಂತೆ ದೂರದೂರುಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಬಾಬಾ ಗೋರಖನಾಥನಿಗೆ ಖಿಚಡಿ ಅರ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಬಾಬಾ ಗೋರಖ್‌ನಾಥ್‌ ದೇವಾಲಯದಲ್ಲಿ ಖಿಚಡಿ ಅರ್ಪಿಸಿದ ಸಿಎಂ ಯೋಗಿ ಆದಿತ್ಯನಾಥ್

ನಾಡಿನ ಸಮೃದ್ಧಿಗಾಗಿ ಸೂರ್ಯದೇವನ ಉತ್ತರಾಯಣದಂದು ಖಿಚಡಿ ಅರ್ಪಿಸುವ ವಿಶಿಷ್ಟ ಸಂಪ್ರದಾಯ ಇದಾಗಿದೆ. ಗೋರಖನಾಥ ದೇವಾಲಯದಲ್ಲಿ ಖಿಚಡಿ ರೂಪದಲ್ಲಿ ನೀಡಲಾಗುವ ಆಹಾರವನ್ನು ವರ್ಷವಿಡೀ ನಿರ್ಗತಿಕರಿಗೆ ವಿತರಿಸಲಾಗುತ್ತದೆ.

ಶುಕ್ರವಾರ ರಾತ್ರಿ 8:49 ಕ್ಕೆ ಧನು ರಾಶಿಯಿಂದ ಸೂರ್ಯದೇವನು ಮಕರ ರಾಶಿ ಪ್ರವೇಶಿಸಿದ ತಕ್ಷಣ ಮಕರ ಸಂಕ್ರಾಂತಿ ಪ್ರಾರಂಭವಾಯಿತು. ಈ ವೇಳೆ, ಅಂದರೆ ಶನಿವಾರ (ಇಂದು) ಅರುಣೋದಯ ಕಾಲದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು, ಉತ್ತರ ಪ್ರದೇಶ, ಬಿಹಾರ ಮತ್ತು ದೇಶದ ವಿವಿಧ ಭಾಗಗಳಿಂದ ಮತ್ತು ನೆರೆಯ ರಾಷ್ಟ್ರ ನೇಪಾಳದಿಂದ ಒಟ್ಟು ಲಕ್ಷಾಂತರ ಭಕ್ತರು ಶಿವ್ವತಾರಿ ಬಾಬಾ ಗೋರಖನಾಥರಿಗೆ ಖಿಚಡಿಯನ್ನು ಅರ್ಪಿಸುತ್ತಾರೆ.

ಇದೇ ವೇಳೆ, ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಿಧ್ಯುಕ್ತ ಕಾರ್ಯಕ್ರಮಗಳ ಶಂಖನಾದ ಆರಂಭಗೊಂಡಿತು. ಬೆಳಗಿನ ಜಾವ ನಾಲ್ಕು ಗಂಟೆಗೆ ಗೋರಕ್ಷಪೀಠದ ಪರವಾಗಿ ಪೀಠಾಧೀಶ್ವರ ಯೋಗಿ ಆದಿತ್ಯನಾಥ ಅವರು ಬಾಬಾರಿಗೆ ಖಿಚಡಿ ಅರ್ಪಿಸಿದರು. ಇದಾದ ನಂತರ ನೇಪಾಳ ರಾಜಮನೆತನದಿಂದ ಬಂದ ಖಿಚಡಿಯನ್ನು ಬಾಬಾಗೆ ಸಮರ್ಪಣೆ ಮಾಡಲಾಯಿತು.

ಖಿಚಡಿ ಉತ್ಸವಕ್ಕೆ ಸಿದ್ಧತೆ:

ಇಡೀ ದೇವಾಲಯದ ಬಣ್ಣಬಣ್ಣದ ದೀಪಗಳಿಂದ ಅಲಂಕೃತವಾಗಿದೆ. ಗುರುವಾರ ಸಂಜೆಯಿಂದಲೇ ಇಲ್ಲಿಗೆ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ ಖಿಚಡಿ ಜಾತ್ರೆ:

ಗೋರಖನಾಥ ದೇವಸ್ಥಾನವು ಸಾಮಾಜಿಕ ಸಾಮರಸ್ಯದ ಕೇಂದ್ರವಾಗಿದೆ. ಅಲ್ಲಿ ಯಾವುದೇ ಜಾತಿ, ಧರ್ಮದ ಸಂಕೋಲೆಗಳಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಖಿಚಡಿ ಜಾತ್ರೆ ಜಾತಿ, ಧರ್ಮದ ಭೇದವಿಲ್ಲದೆ ಸಾವಿರಾರು ಜನರಿಗೆ ಜೀವನಾಧಾರವಾಗಿದೆ.

ತ್ರೇತಾಯುಗಿನ್ ಬಾಬಾ ಗೋರಖನಾಥರಿಗೆ ಖಿಚಡಿ ಅರ್ಪಿಸುವ ಸಂಪ್ರದಾಯ:

ಗೋರಖನಾಥ ದೇವಾಲಯದಲ್ಲಿ ಖಿಚಡಿ ಅರ್ಪಿಸುವ ಸಂಪ್ರದಾಯವನ್ನು ತ್ರೇತಾಯುಗಿನ್ ಎಂದು ಪರಿಗಣಿಸಲಾಗಿದೆ. ಆ ಸಮಯದಲ್ಲಿ ಆದಿ ಯೋಗಿ ಗುರು ಗೋರಖನಾಥ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ತಾಯಿ ಜ್ವಾಲಾ ದೇವಿಯ ಆಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದ್ದರು ಎಂದು ನಂಬಲಾಗಿದೆ. ತಾಯಿ ಅವರಿಗೆ ಊಟಕ್ಕೆ ವ್ಯವಸ್ಥೆ ಮಾಡಿದರು. ವಿವಿಧ ಭಕ್ಷ್ಯಗಳನ್ನು ನೋಡಿದ ಬಾಬಾ ಅವರು ಭಿಕ್ಷೆಯಲ್ಲಿ ಪಡೆದ ವಸ್ತುಗಳನ್ನು ಮಾತ್ರ ಆಹಾರವಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಜತೆಗೆ ಅವರು ತಾಯಿ ಜ್ವಾಲಾ ದೇವಿ ಅವರಿಗೆ ನೀರನ್ನು ಕಾಯಿಸಲು ಹೇಳಿ ಸ್ವತಃ ಭಿಕ್ಷೆಗೆ ಹೋದರು. ಭಿಕ್ಷೆ ಕೇಳುತ್ತಾ ಗೋರಖಪುರ ತಲುಪಿದ ನಂತರ ಧ್ಯಾನದಲ್ಲಿ ಮಗ್ನನಾದರು. ಅವರ ತೇಜಸ್ಸನ್ನು ಕಂಡು ಜನರು ಅವರ ಖಪ್ಪದಲ್ಲಿ ಅನ್ನ (ಅಕ್ಕಿ, ಉದ್ದು) ದಾನ ಮಾಡುತ್ತಲೇ ಇದ್ದರು.

ಈ ಸಮಯದಲ್ಲಿ, ಮಕರ ಸಂಕ್ರಾಂತಿಯ ಆಗಮನವಾಯಿತು. ಈ ವೇಳೆ ಎಲ್ಲರಿಗೆ ಆಹಾರ ತಯಾರಿಸಿ ನೀಡಲಾಗಿತ್ತು. ಇದೇ ಸಂಪ್ರದಾಯವಾಗಿ ಮುಂದುವರಿದು ಖಿಚಡಿ ಹಬ್ಬವಾಗಿ ಪರಿವರ್ತನೆಯಾಯಿತು. ಅಂದಿನಿಂದ, ಪ್ರತಿ ಮಕರ ಸಂಕ್ರಾಂತಿಯಂದು ಬಾಬಾ ಗೋರಖನಾಥರಿಗೆ ಖಿಚಡಿ ಅರ್ಪಿಸುವ ಕ್ರಮ ಮುಂದುವರಿಯುತ್ತಿದೆ. ಇಂದಿಗೂ ಜ್ವಾಲಾ ದೇವಿಯ ಆಸ್ಥಾನದಲ್ಲಿ ಬಾಬಾನ ಕಿಚಡಿ ಬೇಯಿಸಲು ನೀರು ಕುದಿಯುತ್ತಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘಿಸಿ ಬೃಹತ್​ ಕಾರ್ಯಕ್ರಮ: ಸಮಾಜವಾದಿ ಪಕ್ಷದ ವಿರುದ್ಧ ಎಫ್​ಐಆರ್

ABOUT THE AUTHOR

...view details