ಕರ್ನಾಟಕ

karnataka

ETV Bharat / bharat

ಪ್ರತ್ಯೇಕ ಘಟನೆ: ಕೇವಲ 100 ರೂ., 200 ರೂ.ಗೆ ಇಬ್ಬರ ದುರಂತ ಅಂತ್ಯ! - ಗುಂಟೂರಿನಲ್ಲಿ ಇಬ್ಬರು ಸಾವು

ಆಂಧ್ರಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅದು ಕೇವಲ 100 ಮತ್ತು 200 ರೂಪಾಯಿಗಳಿಗಾಗಿ ನಡೆದ ವಾಗ್ವಾದದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

Two killed in two incidents in Andhra pradesh, Two person died in Guntur, Guntur crime news, ಆಂಧ್ರಪ್ರದೇಶದಲ್ಲಿ ಎರಡು ಘಟನೆಗಳಲ್ಲಿ ಇಬ್ಬರ ಸಾವು, ಗುಂಟೂರಿನಲ್ಲಿ ಇಬ್ಬರು ಸಾವು, ಗುಂಟೂರು ಅಪರಾಧ ಸುದ್ದಿ,
ಪ್ರಾಣ ಕಳೆದುಕೊಂಡ ದುರ್ದೈವಿಗಳು

By

Published : May 21, 2022, 12:43 PM IST

ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅದು ಕೇವಲ 100 ಮತ್ತು 200 ರೂಪಾಯಿಗಾಗಿ ನಡೆದ ಗಲಾಟೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

200 ರೂ.ಗೆ ಹಾರಿ ಹೋದ ಪ್ರಾಣ: ತೆನಾಲಿಯ ಆರ್​.ಆರ್ ನಗರದಲ್ಲಿ 200 ರೂ.ಗಾಗಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮೂರನೇ ಪಟ್ಟಣ ಪೊಲೀಸ್ ಠಾಣೆಯ ಸಿಐ ಶ್ರೀನಿವಾಸನ್ ಪ್ರಕಾರ, ಪಟ್ಟಣದಲ್ಲಿ ವಾರ್ಡ್ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದ ತಾಡಿಬೋನ ಸಂದೀಪ್ (23) ವಾರದ ಹಿಂದೆ ತನ್ನ ಸ್ನೇಹಿತ ಜಶ್ವಂತ್ ಮೂಲಕ ರೋಹಿತ್ ಎಂಬುವವರಿಗೆ 2 ಸಾವಿರ ರೂಪಾಯಿ ನೀಡಿದ್ದಾನೆ. ಈ ಹಣವನ್ನು ದಿನಕ್ಕೆ 200 ರೂಪಾಯಿಯಂತೆ ವಾಪಸ್ ಕೊಡಲು ರೋಹಿತ್​ ಒಪ್ಪಿಕೊಂಡಿದ್ದನು.

ಮೃತ ಯುವಕ ಸಂದೀಪ್​

ರೋಹಿತ್ ಸತತ 5 ದಿನ ಹಣವನ್ನು ಮರು ಪಾವತಿಸಿದ್ದಾನೆ. ಆರನೇ ದಿನಕ್ಕೆ ಹಣವನ್ನು ಜಶ್ವಂತ್‌ ಎಂಬಾತನ ಕೈಗೆ ನೀಡಿ ಸಂದೀಪ್‌ಗೆ ಕೊಡುವಂತೆ ಹೇಳಿದ್ದಾನೆ. ಆದರೆ, ಜಶ್ವಂತ್ ಸಂದೀಪ್​ಗೆ ಹಣ ನೀಡಲಿಲ್ಲ. ಹೀಗಾಗಿ ಸಂದೀಪ್ ಗುರುವಾರ ರಾತ್ರಿ 11 ಗಂಟೆಗೆ ರೋಹಿತ್ ಮನೆಗೆ ಬಂದು ಆ ದಿನದ ಹಣ ನೀಡುವಂತೆ ಕೇಳಿದ್ದಾನೆ. ಜಶ್ವಂತ್​ಗೆ ಕೈಯಲ್ಲಿ ಕೊಟ್ಟಿರುವುದಾಗಿ ರೋಹಿತ್ ಹೇಳಿದ್ದಾನೆ. ಆದ್ರೆ ಜಶ್ವಂತ್​ ಹಣ ಪಡೆದಿಲ್ಲ ಎಂದು ರೋಹಿತ್​ಗೆ ಸಂದೀಪ್ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.

ಓದಿ:ಕೌಟುಂಬಿಕ ಕಲಹ.. ಸಿದ್ದಾಪುರದಲ್ಲಿ ಹೆಂಡತಿಯನ್ನೇ ಕೊಲೆ ಮಾಡಿ ಗಂಡ ಪರಾರಿ!

ಆಗ ಸಂದೀಪ್​ನನ್ನು ರೋಹಿತ್ ಹಠಾತ್ತನೆ ತಳ್ಳಿದ್ದಾನೆ. ಸಂದೀಪ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಸಂದೀಪ್​ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಸಂದೀಪ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂದೀಪ್​ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ರೋಹಿತ್ ಹಾಗೂ ಆತನ ತಂದೆ ವೆಂಕಟೇಶ್ವರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

100 ರೂ.ಗೆ ಮಹಿಳೆಯ ಕೊಲೆ:ಗುಂಟೂರು ಉಪನಗರದ ನಾಯ್ಡುಪೇಟಾ ಜಿಂದಾಲ್ ಬಳಿ ದಾರುಣ ಘಟನೆ ನಡೆದಿದೆ. ರಮಣ (40) ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಕಸ ಎತ್ತಲು ಚಿಲಕಲೂರಿಪೇಟೆಯಿಂದ ಲಾರಿಯಲ್ಲಿ ಗುಂಟೂರಿಗೆ ಬಂದಿದ್ದರು.

ಗುಂಟೂರಿನ ಉಪನಗರ ನಾಯ್ಡುಪೇಟೆಯಲ್ಲಿ ಲಾರಿ ಇಳಿದು ರಮಣಮ್ಮ ಚಾಲಕನಿಗೆ 100 ರೂಪಾಯಿ ನೀಡಿದ್ದಾರೆ. ಆದ್ರೆ ಚಾಲಕ 300 ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ. ಹೀಗಾಗಿ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದೆ. ಕೋಪಗೊಂಡ ಚಾಲಕ ರಮಣಮ್ಮನ ಮಕ್ಕಳು ಕೆಳಗಿಳಿಯುವ ಮೊದಲೇ ಸಿಟ್ಟಿನಿಂದ ಟ್ರಕ್ ಅನ್ನು ಮುಂದಕ್ಕೆ ಓಡಿಸಿದ್ದಾರೆ.

ಮೃತ ಮಹಿಳೆ ರಮಣಮ್ಮ

ಮಕ್ಕಳಿಗಾಗಿ ರಮಣಮ್ಮ ಲಾರಿ ಹಿಡಿದುಕೊಂಡು ಸ್ವಲ್ಪ ದೂರ ಹೋಗುತ್ತಿದ್ದಂತೆ ಲಾರಿಯಡಿ ಬಿದ್ದು ಸಾವನ್ನಪ್ಪಿದ್ದಾರೆ. ಮಹಿಳೆ ಸಾವಪ್ಪುತ್ತಿದ್ದಂತೆ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ತಾಯಿ ಸಾವು ಕಂಡು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ABOUT THE AUTHOR

...view details