ಕರ್ನಾಟಕ

karnataka

ETV Bharat / bharat

ಪರೀಕ್ಷಾರ್ಥಿಗಳ ಗಮನಕ್ಕೆ.. ನಿಗದಿತ ವೇಳಾಪಟ್ಟಿಯಂತೆ UPSC ಮುಖ್ಯ ಪರೀಕ್ಷೆ

UPSC clarifies on Civil Services (Main) examination-2021: ಕೊರೊನಾ, ಒಮಿಕ್ರಾನ್​ ಭೀತಿಯಿಂದ ಶಾಲಾ- ಕಾಲೇಜು ಪರೀಕ್ಷೆಗಳು ಮುಂದೂಡಿಕೆ ಆಗುತ್ತಿವೆ. ಆದ್ರೆ ಯುಪಿಎಸ್​ ಮುಖ್ಯ ಪರೀಕ್ಷೆಗಳನ್ನು ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲಾಗುವುದು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

UPSC
ಯುಪಿಎಸ್​ಸಿ

By

Published : Jan 5, 2022, 6:44 PM IST

ನವದೆಹಲಿ:ಕೇಂದ್ರ ಲೋಕಸೇವಾ ಆಯೋಗದ 2021 ನೇ ಸಾಲಿನ ಮುಖ್ಯ ಪರೀಕ್ಷೆಯು ನಿಗದಿತ ವೇಳಾಪಟ್ಟಿಯಂತೆ ಇದೇ ಶುಕ್ರವಾರದಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮುಂದೂಡಿಕೆ ಮಾಡಲಾಗುತ್ತದೆ ಎಂಬ ವದಂತಿಗಳಿಗೆ UPSC ತೆರೆ ಎಳೆದಿದೆ.

ಕೊರೊನಾ, ಒಮಿಕ್ರಾನ್​ ಭೀತಿಯಿಂದ ಶಾಲಾ-ಕಾಲೇಜು ಪರೀಕ್ಷೆಗಳ ಮುಂದೂಡಲಾಗುತ್ತಿದೆ. ಆದ್ರೆ ಯುಪಿಎಸ್​ ಪರೀಕ್ಷೆಗಳು ಯಾವುದೇ ಕಾರಣಕ್ಕೂ ಮುಂದೂಡಿಕೆ ಆಗಲ್ಲ, ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.

ಅಭ್ಯರ್ಥಿಗಳು ಮತ್ತು ಪರೀಕ್ಷಾ ಮೇಲ್ವಿಚಾರಕರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಆಯೋಗ ಸೂಚಿಸಿದೆ. ಅಲ್ಲದೇ, ಅಭ್ಯರ್ಥಿಗಳ ಇ-ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ಕಾರ್ಯನಿರ್ವಾಹಕರ ಪಾಸ್​ಗಳನ್ನು ಕರ್ಫ್ಯೂ ಜಾರಿಯಾದ ರಾಜ್ಯಗಳಲ್ಲಿ ಸಂಚಾರಕ್ಕೆ ಅನುಮತಿಸಬೇಕು ಎಂದು ಕೋರಿದೆ.

ಕೊರೊನಾ ಸಾಂಕ್ರಾಮಿಕ ಮತ್ತು ಒಮಿಕ್ರಾನ್​ ಹಾವಳಿಯಿಂದ ಪರೀಕ್ಷೆ ರದ್ದಾಗುವ ಆತಂಕದಲ್ಲಿದ್ದ ಅಭ್ಯರ್ಥಿಗಳಿಗೆ ಆಯೋಗ ಮುನ್ನೆಚ್ಚರಿಕೆಯಾಗಿಯೇ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದ್ದು, ಜನವರಿ 7, 8, 9, 15, 16 ರಂದು ವಿವಿಧೆಡೆ ಮುಖ್ಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:9 ದಿನಗಳಲ್ಲಿ 6 ಪಟ್ಟು ಏರಿಕೆಯಾದ ಕೋವಿಡ್‌: ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

For All Latest Updates

ABOUT THE AUTHOR

...view details