ಪಾಟ್ನಾ(ಬಿಹಾರ): ರಾಷ್ಟ್ರೀಯ ಜನತಾದಳ ಪಕ್ಷ (LJP)ದಲ್ಲಿ ಬಿರುಕು ಮುಂದುವರಿದಿದ್ದು, ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ಇದೀಗ ಕೈಬಿಡಲಾಗಿದೆ. ಬಂಡಾಯ ಸಂಸದರ ತುರ್ತು ಸಭೆಯ ಬಳಿಕ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
‘ಒನ್ ಮ್ಯಾನ್, ಒನ್ ಪೋಸ್ಟ್’ ಎಂಬ ತತ್ವದ ಮೇಲೆ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಲಾಗಿದೆ ಎಂದು ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ನೇತೃತ್ವದ ಬಂಡಾಯ ಸದಸ್ಯರು ಹೇಳಿದ್ದಾರೆ. ಇದಕ್ಕೂ ಮೊದಲು ಪಾಸ್ವಾನ್ ಅವರನ್ನು ನಿನ್ನೆ ಸಂಜೆ ಎಜೆಪಿ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಲಿದ್ದಾರೆ ಎನ್ನಲಾಗಿದೆ.
ಇತ್ತ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಸೂರಜ್ ಭನ್ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ನಿನ್ನೆ 6 ಎಲ್ಜೆಪಿ ಸಂಸದರಲ್ಲಿ ಐವರು ದಂಗೆ ಎದ್ದಿದ್ದರು.
ನವೆಂಬರ್ನಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ದೂರವಿರಲು ನಿರ್ಧರಿಸಿದಾಗ ಮತ್ತು ಮಿತ್ರಪಕ್ಷ ನಿತೀಶ್ ಕುಮಾರ್ ಅವರನ್ನು ಸೋಲಿಸುವಲ್ಲಿ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಿದಾಗ ಪಾಸ್ವಾನ್ ವಿರುದ್ಧದ ಬಂಡಾಯದ ಹುಟ್ಟಿಕೊಂಡಿತ್ತು.