ಕಟಕ್(ಒಡಿಶಾ):ಗಾಳಿಪಟಕ್ಕೆ ಬಳಸುವ ಮಾಂಜಾ ದಾರ ಯುವಕನೊಬ್ಬನ ಕುತ್ತಿಗೆಯನ್ನು ಸೀಳಿ, ಸಾವಿಗೆ ಕಾರಣವಾದ ದಾರುಣ ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದೆ. ಈ ಮಾಂಜಾವನ್ನು ಚೀನಾ ತಯಾರಿಸಿದ್ದು ಎಂದು ತಿಳಿದುಬಂದಿದೆ.
ಜಗತ್ಪುರದ ಪಿರ್ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಯಾರ್ಪುರ ಪ್ರದೇಶದ ಜಯಂತ್ ಸಮಾಲ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಜಯಂತ್ ಸಮಾಲ್ ಭಾನುವಾರ ಸಂಜೆ 4 ಗಂಟೆಗೆ ತನ್ನ ಪತ್ನಿಯೊಂದಿಗೆ ಮಾವನ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.