ಕರ್ನಾಟಕ

karnataka

ಬೌದ್ಧ ಗುರು ದಲೈ ಲಾಮಾ ಹುಟ್ಟುಹಬ್ಬದಂದು ಚೀನಾ ಸೇನೆ ಪ್ರತಿಭಟನೆ

By

Published : Jul 13, 2021, 8:42 PM IST

ಈ ಘಟನೆ ತುಂಬಾ ಬೇಸರದ ಸಂಗತಿ. ಚೀನಾ ಸೈನಿಕರು ಮತ್ತು ಪ್ರಜೆಗಳು ಇಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡುತ್ತಾರೆ. ಇದು ಚೀನಾದ ಅತಿರೇಖ ವರ್ತನೆ ಎಂದು ಚುನ್ಶುಲ್ ಕೌನ್ಸಿಲರ್ ಅಭಿಪ್ರಾಯಪಟ್ಟಿದ್ದಾರೆ.

China protests Dalai Lama birthday celebration in Ladakh
ಬೌದ್ಧ ಗುರು ದಲೈ ಲಾಮಾ ಹುಟ್ಟುಹಬ್ಬದಂದು ಚೀನಾ ಸೇನೆ ಪ್ರತಿಭಟನೆ

ಶ್ರೀನಗರ, ಜಮ್ಮು ಕಾಶ್ಮೀರ: ಚೀನಾ, ಭಾರತ ಗಡಿಯಾದ ಎಲ್​ಎಸಿ ( ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​) ಬಳಿ ಸ್ಥಳೀಯರು ಟಿಬೆಟ್ ಧರ್ಮಗುರು ದಲೈ ಲಾಮಾ ಅವರ 86ನೇ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವಾಗ ಚೀನಾದ ಸೈನಿಕರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಬ್ಯಾನರ್​ಗಳನ್ನು, ಚೀನಾ ಬಾವುಟಗಳನ್ನು ಪ್ರದರ್ಶಿಸಿದ ಘಟನೆ ನಡೆದಿದೆ.

ಕುಯೌಲ್ ಪ್ರದೇಶದಲ್ಲಿ ಡೋಲೆಯಲ್ಲಿರುವ ಸಿಂಧೂ ನದಿ ದಡದಲ್ಲಿ ಈ ಘಟನೆ ನಡೆದಿದ್ದು, ಸಿಂಧೂ ನದಿಯ ದಡದಲ್ಲಿರುವ ಭಾರತೀಯ ಗ್ರಾಮಗಳ ಜನತೆ ದಲೈ ಲಾಮಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಮತ್ತೊಂದು ದಡದಲ್ಲಿದ್ದ ಚೀನಾದ ಸೈನಿಕರು ಮತ್ತು ಚೀನೀ ಪ್ರಜೆಗಳು ಬ್ಯಾನರ್ ಮತ್ತು ಚೀನಾ ಬಾವುಟ ಪ್ರದರ್ಶಿಸಿದ್ದಾರೆ ಎಂದು ಚುನ್ಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾನ್​ಜೆನ್ ಹೇಳಿದ್ದಾರೆ.

ಈ ಘಟನೆ ತುಂಬಾ ಬೇಸರದ ಸಂಗತಿ. ಚೀನಾ ಸೈನಿಕರು ಮತ್ತು ಪ್ರಜೆಗಳು ಇಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡುತ್ತಾರೆ. ಇದು ಚೀನಾದ ಅತಿರೇಖ ವರ್ತನೆ ಎಂದು ಕೊಂಚೋಕ್ ಸ್ಟಾನ್​ಜೆನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಇತ್ತೀಚೆಗೆ 8 ಕೋಟಿ ಮೌಲ್ಯದ ಕಾರು ಕೊಂಡಿದ್ದ ಬಿಲ್ಡರ್ ವಿರುದ್ಧ ದಾಖಲಾಯ್ತು ವಿದ್ಯುತ್ ಕಳವು ಕೇಸ್

ಜುಲೈ 6ರಂದು ಈ ಘಟನೆ ನಡೆದಿದ್ದು, ಚೀನಾದವರು ಪ್ರದರ್ಶಿಸಿದ ಬ್ಯಾನರ್ ಮೇಲೆ ಮ್ಯಾಂಡರಿನ್ ಭಾಷೆಯಲ್ಲಿ ಏನೋ ಬರೆಯಲಾಗಿತ್ತು. ಆದರೆ ಓದಲು ಸಾಧ್ಯವಾಗಲಿಲ್ಲ. ಅವರು ಭಾರತದ ಭೂಮಿಯಲ್ಲೇ ನಿಂತು ಪ್ರತಿಭಟನೆ ನಡೆಸುತ್ತಿದ್ದರು. ಜೊತೆಗೆ ಇಂಥಹ ಘಟನೆ ಇದೇ ಮೊದಲಲ್ಲ ಎಂದು ಕೊಂಚೋಕ್ ಸ್ಟಾನ್​ಜೆನ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details