ಕರ್ನಾಟಕ

karnataka

ETV Bharat / bharat

ಗಾಳಿಪಟಕ್ಕೆ ಚೈನೀಸ್ ದಾರ ಬಳಕೆಗೆ ಕಡಿವಾಣ ಹಾಕಲು ಡ್ರೋನ್ ನಿಗಾ: ಪೊಲೀಸರಿಂದ ನೂತನ ಪ್ರಯೋಗ

ಗಾಳಿಪಟಕ್ಕೆ ಬಳಕೆ ಮಾಡುವ ಚೈನೀಸ್ ದಾರವು ಜನರ ಜೀವಕ್ಕೆ ಕುತ್ತು ತರುತ್ತಿದ್ದು, ಇದರ ಮಾರಾಟ ಹಾಗೂ ಬಳಕೆಗೆ ನಿಷೇಧವಿದ್ದರೂ ಪಂಜಾಬ್​ನಲ್ಲಿ ಇದರ ಬಳಕೆ ಮುಂದುವರಿದೆ. ಆದ್ದರಿಂದ ಪೊಲೀಸರು ಚೀನಾದ ಮಂಜಾ ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

china-door-monitored-through-drone-in-punjab
ಗಾಳಿಪಟಕ್ಕೆ ಚೈನೀಸ್ ದಾರ ಬಳಕೆಗೆ ಕಡಿವಾಣ ಹಾಕಲು ಡ್ರೋನ್ ನಿಗಾ: ಪೊಲೀಸರಿಂದ ನೂತನ ಪ್ರಯೋಗ

By

Published : Jan 25, 2023, 5:34 PM IST

ಗಾಳಿಪಟಕ್ಕೆ ಚೈನೀಸ್ ದಾರ ಬಳಕೆಗೆ ಕಡಿವಾಣ ಹಾಕಲು ಡ್ರೋನ್ ನಿಗಾ: ಪೊಲೀಸರಿಂದ ನೂತನ ಪ್ರಯೋಗ

ಫಿರೋಜ್‌ಪುರ (ಪಂಜಾಬ್‌): ಗಾಳಿಪಟ ಹಾರಿಸಲು ಬಳಸಲಾಗುವ ಚೀನಾದ ದಾರವು ಇತ್ತೀಚೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಗಾಜು ಲೇಪಿತ, ನೈಲಾನ್ ಅಥವಾ ಇತರ ಕೃತಕ ವಸ್ತುಗಳಿಂದ ತಯಾರಿಸಲ್ಪಟ್ಟ ಮಂಜಾದಿಂದ ದೇಶದಲ್ಲಿ ಅನೇಕ ದುರ್ಘಟನೆಗಳು ಸಂಭವಿಸಿವೆ. ಚೀನಾ ದಾರದ ಮೇಲೆ ನಿಷೇಧವನ್ನೂ ಹೇರಲಾಗಿದೆ. ಆದರೂ, ಇದರ ಬಳಕೆ ಮಾತ್ರ ನಿಂತಿಲ್ಲ. ಈ ದಾರದ ಬಳಕೆ ಪರಿಣಾಮ ಸಾವು-ನೋವುಗಳು ಸಹ ಉಂಟಾಗಿವೆ. ಚೈನೀಸ್ ದಾರ ಬಳಕೆಗೆ ಕಡಿವಾಣ ಹಾಕಲು ಪಂಜಾಬ್‌ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ದೇಶದಲ್ಲಿ ಸಾಂಕ್ರಾಂತಿ ಹಬ್ಬದ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗಾಳಿಪಟ ಹಾರಿಸುವ ರೂಢಿ ಇದೆ. ಆದರೆ, ಈ ಗಾಳಿಪಟಗಳಿಗೆ ಚೈನೀಸ್ ದಾರ ಬಳಕೆ ಮಾಡುತ್ತಿರುವುದು ಸಾರ್ವಜನಿಕರು ಮಾತ್ರವಲ್ಲದೇ, ಪಕ್ಷಗಳ ಜೀವಕ್ಕೂ ಕಂಟಕವಾಗಿದೆ. ಆದ್ದರಿಂದ ಪಂಜಾಬ್​ನ ಫಿರೋಜ್‌ಪುರ ಮತ್ತು ಲೂಧಿಯಾನದಲ್ಲಿ ಪೊಲೀಸರು ಹೊಸ ತಂತ್ರಜ್ಞಾನದ ಮೂಲಕ ಈ ದಾರ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಭಿಯಾನ ಆರಂಭಿಸಿದ್ದಾರೆ.

ಬಸಂತ್ ಪಂಚಮಿ ಹಿನ್ನೆಲೆಯಲ್ಲಿ ನೂತನ ಪ್ರಯೋಗ: ಪಂಜಾಬ್​ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜನವರಿ 26ರಂದು ಬಸಂತ್ ಪಂಚಮಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನತೆ ಗಾಳಿಪಟಗಳನ್ನೂ ಹಾರಿಸುತ್ತಾರೆ. ಗಾಳಿಪಟ ಹಾರಿಸಲು ಬಳಸಲಾಗುವ ಚೀನಾದ ದಾರ ಬಳಕೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಫಿರೋಜ್‌ಪುರ ಪೊಲೀಸರು ನೂತನ ಪ್ರಯೋಗಕ್ಕೆ ಸಜ್ಜಾಗಿದ್ದಾರೆ.

ಡ್ರೋನ್ ಮೂಲಕ ನಿಗಾ: ಪಂಜಾಬ್‌ನಲ್ಲಿ ಚೈನೀಸ್ ದಾರದ ಅವಘಡಗಳು ಹೆಚ್ಚಲೇ ಇವೆ. ಹೀಗಾಗಿ ಫಿರೋಜ್‌ಪುರದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ಈಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಚೀನಾದ ಮಂಜಾ ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇಷ್ಟೇ ಅಲ್ಲ, ಚೈನೀಸ್ ದಾರ ಬಳಕೆ ಮಾಡಿ ಗಾಳಿಪಟ ಹಾರಿಸುವವರ ಮೇಲೆ ಡ್ರೋನ್ ಮೂಲಕ ನಿಗಾ ಇಡಲು ಸಹ ಪೊಲೀಸರು ನಿರ್ಧರಿಸಿದ್ದಾರೆ. ಈಗಾಗಲೇ, ಸಮ್ರಾಲಾ ಮತ್ತು ಮಚಿವಾರ ಸಾಹಿಬ್‌ ಪ್ರದೇಶದಲ್ಲಿ ಡ್ರೋನ್​ ಮೂಲಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಪೂರ್ವಯೋಜಿತ ಕೊಲೆ ಪ್ರಕರಣದ ಎಚ್ಚರಿಕೆ: ಪ್ರಮುಖವಾಗಿ ಚೈನೀಸ್ ದಾರ ಮಾರಾಟ ತಡೆಯಲು ಪೊಲೀಸರು ಹೆಚ್ಚಿನ ಗಮನ ಹರಿಸಿದ್ದಾರೆ. ಈ ಪ್ರಾಣ ಕಂಟಕ ದಾರವನ್ನು ಮಾರಾಟ ಮಾಡುವವರ ವಿರುದ್ಧ ಪೂರ್ವಯೋಜಿತ ಕೊಲೆಯ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕೂಡ ಪೊಲೀಸರು ತೀರ್ಮಾನಿಸಿದ್ದಾರೆ. ಈ ಕುರಿತಾಗಿ ಕರಪತ್ರಗಳನ್ನೂ ಪೊಲೀಸರು ವಿತರಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.

ಚೈನೀಸ್ ದಾರ ಬಳಕೆಯಿಂದ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿವೆ. ಆದರೂ ಜನತೆ ಅದರ ಬಳಕೆಯಲ್ಲಿ ನಿಲ್ಲಿಸುತ್ತಿಲ್ಲ. ಹೀಗಾಗಿ ಬಸಂತ್ ಪಂಚಮಿ ದಿನದಂದು ಡ್ರೋನ್ ಮೂಲಕ ನಿಗಾ ವಹಿಸಲಾಗುತ್ತಿದೆ. ಪೊಲೀಸ್​ ಸಿಬ್ಬಂದಿ ಡ್ರೋನ್‌ಗಳನ್ನು ಬಳಸಿ ಗಾಳಿಪಟ ಹಾರಿಸುವ ಜನರ ಮೇಲೆ ಕಣ್ಣಿಡುತ್ತಾರೆ. ಇದನ್ನು ಮೀರಿ ಯಾರಾದರೂ ಚೈನೀಸ್ ದಾರ ಬಳಕೆ ಮಾಡುವುದು ಕಂಡು ಬಂದಲ್ಲಿ, ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಫಿರೋಜ್‌ಪುರ ಎಸ್‌ಎಚ್‌ಒ ಮೋಹಿತ್ ಧವನ್ ತಿಳಿಸಿದ್ದಾರೆ.

ಇದನ್ನೂ ಓದಿ:ಗಾಳಿಪಟಕ್ಕೆ ಚೀನಾದ ದಾರ ಬಳಕೆ, ಅಪಾಯದಿಂದ ಪಾರಾಗಲೂ ರಾಡ್ ಅಳವಡಿಸಿದ ಬೈಕ್ ಸವಾರರು..

ABOUT THE AUTHOR

...view details