ಸುರ್ಗುಜಾ (ಛತ್ತೀಸ್‌ಗಢ):ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಅತ್ಯಂತ ಅಮಾನವೀಯ 'ನಿರ್ಭಯಾ' ರೀತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಇಲ್ಲಿನ ಸುರ್ಗುಜಾ ಜಿಲ್ಲೆಯಲ್ಲೂ ವರದಿಯಾಗಿದೆ. ಈ ಪ್ರಕರಣದಲ್ಲಿ ನಾಲ್ವರು ದುರುಳರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪೈಕಿ ಒಬ್ಬ ಅಪ್ರಾಪ್ತನೂ ಸೇರಿದ್ದಾನೆ. ಸಂತ್ರಸ್ತೆಯ ಸ್ನೇಹಿತನ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆದು ಎರಡೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಓದಿ:ಮರೆಯಾದ ದೇವಸ್ಥಾನಗಳ ಬಗ್ಗೆ ಈಗ ಮಾತು ಅನರ್ಥ, ಇತಿಹಾಸ ಮರಳಿ ಬರೆಯಲಾಗಲ್ಲ: ಸದ್ಗುರು
ತನಿಖೆಯ ವೇಳೆ ಶಂಕಿತನೊಬ್ಬ ಪೊಲೀಸರನ್ನು ನೋಡಿ ಗಾಬರಿಯಾಗತೊಡಗಿದಾಗ ಸಂತ್ರಸ್ತೆ ಆ ಆರೋಪಿಯನ್ನು ಗುರುತಿಸಿದ್ದಾಳೆ. ಇದು ಪೊಲೀಸರಿಗೆ ಉಳಿದ ಮೂವರು ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಆರೋಪಿಗಳಲ್ಲೋರ್ವ ಅಪ್ರಾಪ್ತನೂ ಇರುವುದು ಕಂಡು ಬಂದಿದೆ. ಪ್ರಮುಖ ಆರೋಪಿ ಭೋಲಾ ಅಲಿಯಾಸ್ ಸಂತೋಷ್ ಯಾದವ್ ಪೊಲೀಸರ ವಿಚಾರಣೆಯಲ್ಲಿ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.
ಮೇ 20 ರಂದು ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಇದ್ದಳು. ಅವಳನ್ನು ನೋಡಿದ ನಂತರ ಭೋಲಾ ತನ್ನ ಇತರ ಮೂವರು ಸಹಚರರಾದ ಅಭಿಷೇಕ್ ಯಾದವ್, ನಾಗೇಂದ್ರ ಯಾದವ್ ಮತ್ತು ಬಾಲಕನನ್ನು ಸ್ಥಳಕ್ಕೆ ಕರೆಸಿದ್ದಾರೆ. ಎಲ್ಲಾ ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಹತ್ತಿರದ ಕಾಡಿಗೆ ಕರೆತಂದು ಅತ್ಯಾಚಾರ ಎಸಗಿದರು. ಇದೇ ವೇಳೆ ಆಕೆಯ ಸ್ನೇಹಿತನನ್ನು ಪ್ರತ್ಯೇಕವಾಗಿಟ್ಟು ಥಳಿಸುತ್ತಿದ್ದರು. ಒಬ್ಬರ ಬಳಿಕ ಮತ್ತೊಬ್ಬರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಸಂತ್ರಸ್ತೆಯ ಬ್ಯಾಗ್‌ನಲ್ಲಿದ್ದ ಹಣದೊಂದಿಗೆ ಪರಾರಿಯಾದರು ಎಂದು ಥಳಿತಕ್ಕೊಳಗಾದ ಸಂತ್ರಸ್ತೆಯ ಸ್ನೇಹಿತ ತಿಳಿಸಿದ್ದಾನೆ.