ಬಿಜಾಪುರ(ಛತ್ತೀಸ್ಗಢ): ಏಪ್ರಿಲ್ 3ರಂದು ನಡೆದಿದ್ದ ನಕ್ಸಲ್ ಕಾರ್ಯಾಚರಣೆಯಲ್ಲಿ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಾಕೇಶ್ವರ್ ಸಿಂಗ್ ಮನ್ಹಾಸ್ ಇಂದು ಸುರಕ್ಷಿತವಾಗಿ ರಿಲೀಸ್ ಆಗಿದ್ದಾರೆ.
ನಕ್ಸಲ್ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್ ಛತ್ತೀಸ್ಗಢದ ಬಿಜಾಪುರ - ಸುಕ್ಮಾ ಗಡಿ ಪ್ರದೇಶದಲ್ಲಿ ನಕ್ಸಲರು - ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ದಾಳಿ ನಡೆದಿತ್ತು. ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಓರ್ವ ಯೋಧನನ್ನು ಅಪಹರಣ ಮಾಡಿದ್ದರು. ಇದೀಗ ಅವರನ್ನ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.
ನಕ್ಸಲ್ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ಇದರ ಬಗ್ಗೆ ಮಾತನಾಡಿರುವ ಬಿಜಾಪುರ ಎಸ್ಪಿ ಸುರಕ್ಷಿತವಾಗಿ ಕೋಬ್ರಾ ಯೋಧನನ್ನ ಕರೆತರಲಾಗಿದ್ದು, ಸದ್ಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಕೋವಿಡ್ ಪಾಸಿಟಿವ್ ದೃಢ
ರಾಕೇಶ್ವರ್ ಸಿಂಗ್ ಪತ್ನಿ ಸಂತಸ:ಇದೇ ವಿಚಾರವಾಗಿ ಮಾತನಾಡಿರುವ ರಾಕೇಶ್ವರ್ ಸಿಂಗ್ ಪತ್ನಿ ಮೀನು, ನನ್ನ ಜೀವನದಲ್ಲಿ ಇದು ಅತಿ ಸಂತೋಷದ ದಿನವಾಗಿದ್ದು, ಅವರು ಖಂಡಿತವಾಗಿ ವಾಪಸ್ ಬರುತ್ತಾರೆ ಎಂಬ ಭರವಸೆ ನನ್ನಲ್ಲಿ ಇತ್ತು ಎಂದಿದ್ದಾರೆ. ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಕೋಬ್ರಾ ಯೋಧನ ಬಿಡುಗಡೆ ವಿಚಾರವಾಗಿ ಮಧ್ಯವರ್ತಿ ನಿಯೋಜನೆ ಮಾಡುವಂತೆ ನಕ್ಸಲರು ಮಾಧ್ಯಮ ಹೇಳಿಕೆ ರಿಲೀಸ್ ಮಾಡಿತ್ತು. ಆದರೆ ಮಧ್ಯವರ್ತಿ ನಿಯೋಜನೆ ಮಾಡಿದ್ದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರ ಬೆನ್ನಲ್ಲೇ ಅವರನ್ನ ರಿಲೀಸ್ ಮಾಡಲಾಗಿದೆ.