ಚಂದ್ರಾಪುರ(ಮಹಾರಾಷ್ಟ್ರ): ಚಂದ್ರಾಪುರದ ಹೊರವಲಯದಲ್ಲಿ ಡೀಸೆಲ್ ತುಂಬಿದ ಟ್ಯಾಂಕರ್ ಹಾಗೂ ಮರ ಸಾಗಿಸುತ್ತಿದ್ದ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂಬತ್ತು ಜನರು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತವು ನಿನ್ನೆ ರಾತ್ರಿ 10.30 ರ ಸುಮಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ. ಡಿಕ್ಕಿ ಹೊಡೆದ ತಕ್ಷಣವೇ ವಾಹನಗಳು ಹೊತ್ತಿ ಉರಿದಿವೆ ಎಂದು ತಿಳಿದು ಬಂದಿದೆ. ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಭೀಕರ ಅಪಘಾತ: ಡೀಸೆಲ್ ಟ್ಯಾಂಕರ್, ಟ್ರಕ್ ನಡುವೆ ಡಿಕ್ಕಿಯಾಗಿ 9 ಜನರ ಸಜೀವ ದಹನ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಆರು ಕಾರ್ಮಿಕರು ಮತ್ತು ಒಬ್ಬ ಚಾಲಕ ಇದ್ದ. ಟ್ರಕ್‌ನಲ್ಲಿ ಮೃತಪಟ್ಟವರನ್ನು ಅಜಯ್ ಸುಧಾಕರ ಡೋಂಗ್ರೆ (30), ಪ್ರಶಾಂತ್ ಮನೋಹರ ನಾಗರಾಳೆ (33), ಮಂಗೇಶ್ ಪ್ರಲ್ಹಾದ್ ತಿಪ್ಲೆ (30), ಮಹಿಪಾಲ್ ಪರ್ಚಾಕೆ (25), ಬಾಲಕೃಷ್ಣ ತುಕಾರಾಂ ತೆಲಂಗ್ (46), ಸಾಯಿನಾಥ್ ಬಾಪೂಜಿ ಕೊಡಪೆ (40) ಮತ್ತು ಸಂದೀಪ್ ರವೀಂದ್ರ ಅತ್ರಮ್ (22) ಎಂದು ಗುರುತಿಸಲಾಗಿದೆ. ಈ ಎಲ್ಲ ಕಾರ್ಮಿಕರು ಮರವನ್ನು ಇಳಿಸಲು ತೊಹೊಗಾಂವ್ ಕೊಠಾರಿಯಿಂದ ಚಂದ್ರಾಪುರಕ್ಕೆ ಪ್ರಯಾಣಿಸುತ್ತಿದ್ದರು.
ಡೀಸೆಲ್ ಟ್ಯಾಂಕರ್ ಚಾಲಕ ಹನೀಫ್ ಖಾನ್ (35) ಮತ್ತು ಕಂಡಕ್ಟರ್ ಅಜಯ್ ಪಾಟೀಲ್ (35) ಕೂಡ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ:ಕೊರೊನಾ ಹೊಡೆತ, ಪ್ರೇಕ್ಷಕರ ಕೊರತೆ.. ಇತಿಹಾಸದ ಪುಟ ಸೇರಿದ ಮೈಸೂರಿನ 'ಒಲಂಪಿಯಾ'!