ಕರ್ನಾಟಕ

karnataka

ETV Bharat / bharat

ನಕ್ಸಲ್​ಪೀಡಿತ ಪ್ರದೇಶದಲ್ಲಿ 4ಜಿ ನೆಟ್​ವರ್ಕ್​ ಸೇವೆ ವಿಸ್ತರಣೆಗೆ ಕೇಂದ್ರ ಒಪ್ಪಿಗೆ

ನಕ್ಸಲ್ ​ಪೀಡಿತ ಪ್ರದೇಶಗಳಲ್ಲೂ ಕೂಡ ನೆಟ್​ವರ್ಕ್​ ಸೇವೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, 2ಜಿ ಯಿಂದ 4ಜಿ ಸೇವೆ ನೀಡಲು ಯೋಜನೆ ರೂಪಿಸಿದೆ. ಇದಕ್ಕೆ ಸಂಪುಟ ಕೂಡ ಒಪ್ಪಿಗೆ ಸೂಚಿಸಿದೆ.

4g-network-service
ನಕ್ಸಲ್​ಪೀಡಿತ ಪ್ರದೇಶದಲ್ಲಿ 4ಜಿ ನೆಟ್​ವರ್ಕ್​ ಸೇವೆ

By

Published : Apr 27, 2022, 10:05 PM IST

Updated : Apr 27, 2022, 10:23 PM IST

ನವದೆಹಲಿ:ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 2ಜಿ ಮೊಬೈಲ್ ಸೇವೆಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡುವ ಸಾರ್ವತ್ರಿಕ ಸೇವಾ ಹೊಣೆಗಾರಿಕೆ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಯು 2,343 ಎಡಪಂಥೀಯ ಉಗ್ರವಾದದ ತಾಣಗಳಲ್ಲಿ ಹಂತ-1ರ ಭಾಗವಾಗಿ 2ಜಿ ಯಿಂದ 4 ಜಿ ಮೊಬೈಲ್ ಸೇವೆ ಆರಂಭಕ್ಕೆ 1,884 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ (ತೆರಿಗೆಗಳು ಮತ್ತು ತೆರಿಗೆ ಹೊರತುಪಡಿಸಿ) ನವೀಕರಿಸಲು ಯೋಜಿಸಲಾಗಿದೆ. ಇದು 5 ವರ್ಷಗಳ ಅವಧಿಯ ಯೋಜನೆಯಾಗಿದೆ. ಇದನ್ನು ಸರ್ಕಾರಿ ಸ್ವಾಮ್ಯದಲ್ಲಿರುವ ಬಿಎಸ್​ಎನ್​ಎಲ್​ ಟೆಲಿಕಾಂಗೆ ನೀಡಲು ಉದ್ದೇಶಿಸಲಾಗಿದೆ.

BSNL ತನ್ನ ಸ್ವಂತ ವೆಚ್ಚದಲ್ಲಿ ಈ ಪ್ರದೇಶಗಳನ್ನು 5 ವರ್ಷಗಳವರೆಗೆ ನಿರ್ವಹಿಸುತ್ತದೆ. ಅಲ್ಲದೇ, ಈ ಭಾಗಗಳು ಬಿಎಸ್‌ಎನ್‌ಎಲ್‌ ನೆಟ್​ವರ್ಕ್​ನಲ್ಲಿ ಬರುವುದರಿಂದ ಇದನ್ನು ಅದೇ ಸಂಸ್ಥೆಗೆ ನೀಡಲಾಗುವುದು. 541.80 ಕೋಟಿ ರೂ. ಅಂದಾಜು ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಕ್ಯಾಬಿನೆಟ್ ಅನುಮೋದಿಸಿದೆ.

ಓದಿ:ಗ್ರಾಹಕರ ಸೆಳೆಯಲು ವಾಟ್ಸಾಪ್​ನಿಂದ ಹಣ ಪಾವತಿಗೆ ಕ್ಯಾಶ್​ಬ್ಯಾಕ್​ ಆಫರ್​

Last Updated : Apr 27, 2022, 10:23 PM IST

For All Latest Updates

ABOUT THE AUTHOR

...view details