ಕರ್ನಾಟಕ

karnataka

ETV Bharat / bharat

ಕೊರೊನಾ ಮಧ್ಯೆ 'ಬಣ್ಣಗಳ ಆಟ': 'ಈಟಿವಿ ಭಾರತ' ಸಾರುತ್ತಿದೆ ಜಾಗೃತಿ ಸಂದೇಶ

ಭಾರತದ ಅನೇಕ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಹೋಳಿಯ ವರ್ಣರಂಜಿತ ಹಬ್ಬವನ್ನು ಆಚರಿಸಲು ಜನರಲ್ಲಿ ಉತ್ಸಾಹವನ್ನು ಕಡಿಮೆ ಮಾಡಿದೆ. ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿರುವುದರಿಂದ, ಸಾಧ್ಯವಾದಷ್ಟು ಈ ವರ್ಷ ಹೋಳಿ ಆಡುವುದನ್ನು ತಪ್ಪಿಸಲು ಪ್ರಯತ್ನಿಸಿ. 'ಈಟಿವಿ ಭಾರತ' ಸುಖೀಭವ ತಂಡ ತನ್ನ ಓದುಗರೊಂದಿಗೆ ಹೋಳಿಯ ಹಿನ್ನೆಲೆಯನ್ನು ಹಂಚಿಕೊಳ್ಳಲಿದೆ. ಈ ಹಬ್ಬವು ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ಪರಿಸರದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುತ್ತಿದೆ.

Holi
ಹೋಳಿ

By

Published : Mar 29, 2021, 12:20 PM IST

ಹೋಳಿಯನ್ನು ನಮ್ಮ ದೇಶದಲ್ಲಿ ಎಲ್ಲಾ ವಯಸ್ಸಿನ ಮತ್ತು ವರ್ಗದ ಜನರು ಉತ್ಸಾಹದಿಂದ ಆಚರಿಸುತ್ತಾರೆ. ಪ್ರಕಾಶಮಾನವಾದ ವರ್ಣರಂಜಿತ ಬಣ್ಣ, ಬಣ್ಣದ ನೀರು ತುಂಬಿದ ಗನ್​ (ವಾಟರ್ ಗನ್), ಆಕಾಶಬುಟ್ಟಿಗಳು ಮತ್ತು ವಿವಿಧ ಖಾದ್ಯಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ನಿಜವಾದ “ರಂಗ್ ವಾಲಿ ಹೋಳಿ”ಗೆ ಒಂದು ದಿನ ಮೊದಲು “ಚೌತಿ ಹೋಳಿ” ಆಚರಿಸಲಾಗುತ್ತದೆ. ಹೋಳಿ ದಿನವು ಬಣ್ಣಗಳಿಂದ ತುಂಬಿದ್ದರೆ, ಚೌತಿ ಹೋಳಿಯಲ್ಲಿ ಸಣ್ಣ ಪ್ರಾರ್ಥನಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಎರಡೂ ದಿನಗಳಿಗೆ ಸಂಬಂಧಿಸಿದ ವಿಭಿನ್ನ ಕಥೆಗಳಿವೆ. ಅದನ್ನು ಆಚರಿಸುವ ವಿಧಾನದ ಹಿಂದಿನ ಕಾರಣವನ್ನು ವಿವರಿಸುತ್ತದೆ.

ಇಂದು, 'ಈಟಿವಿ ಭಾರತ' ಸುಖೀಭವ ತಂಡ ತನ್ನ ಓದುಗರೊಂದಿಗೆ ಈ ಕಥೆಗಳನ್ನು ಹಂಚಿಕೊಳ್ಳಲಿದೆ. ಈ ಹಬ್ಬವು ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ಪರಿಸರದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುತ್ತದೆ.

ಪುರಾಣದಲ್ಲಿ ಹೋಳಿ ಆಚರಣೆ:

ಹೋಳಿ ಹಬ್ಬವು ಹೋಲಿಕಾ ಎಂಬ ದುಷ್ಟ ರಾಕ್ಷಸನನ್ನು ಕೊಲ್ಲುವ ಪ್ರಸಿದ್ಧ ಕಥೆಗಳಲ್ಲಿ ಒಂದನ್ನು ಆಧರಿಸಿದೆ. ಇನ್ನೊಂದು ಕಥೆ ರಾಧಾ-ಕೃಷ್ಣನ ಕುರಿತಾಗಿದೆ. ಚೌತಿ ಹೋಳಿಯ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿದ್ದಾರೆ. ಕಥೆಯ ಪ್ರಕಾರ, ಪ್ರಹ್ಲಾದ ಚಿಕ್ಕಮ್ಮ (ಬುವಾ) ಹೋಲಿಕಾ, ಅವನನ್ನು ಕೊಲ್ಲುವ ಉದ್ದೇಶದಿಂದ ಪುಟ್ಟ ಪ್ರಹ್ಲಾದ‌ನೊಂದಿಗೆ ಬೆಂಕಿಗೆ ಹಾರುತ್ತಾಳೆ. ಪ್ರಹ್ಲಾದ ವಿಷ್ಣುವಿನ ಭಕ್ತ. ಹೋಲಿಕಾ ಮಾತ್ರ ನಿರ್ದಿಷ್ಟ ‘ಚುನಾರಿ’(ದುಪ್ಪಟ್ಟ) ಧರಿಸಿ ಬೆಂಕಿಯಲ್ಲಿ ಹೆಜ್ಜೆ ಹಾಕುತ್ತಾಳೆ. ಆಕೆ ಈ ಹಿಂದೆ ಚುನಾರಿ ಮೂಲಕ ಬೆಂಕಿಯಲ್ಲಿ ನಡೆದರೆ, ಬೆಂಕಿಯು ಅವಳಿಗೆ ಯಾವುದೇ ಹಾನಿ ಮಾಡಲಾರದು ಎಂಬ ಆಶೀರ್ವಾದವನ್ನು ಪಡೆದಿದ್ದಳು. ಚೌತಿ ಹೋಳಿ ದಿನದಂದು, ಅದೇ ಚುನಾರಿ ಧರಿಸಿ ಹೋಲಿಕಾ ಬೆಂಕಿಯಲ್ಲಿ ಹೆಜ್ಜೆ ಹಾಕಿದಾಗ, ಪ್ರಹ್ಲಾದನ ಮೇಲೆ ಆ ಚುನಾರಿ ಬಿದ್ದು, ಆತನನ್ನು ಭಗವಾನ್​ ವಿಷ್ಣು ಕಾಪಾಡುತ್ತಾನೆ. ಆದರೆ ಹೋಲಿಕಾ ಸುಟ್ಟು ಹೋಗುತ್ತಾಳೆ. ಆದ್ದರಿಂದ, ಪ್ರತಿವರ್ಷ ದುಷ್ಟರ ವಿರುದ್ಧದ ವಿಜಯವನ್ನು ಗುರುತಿಸಲು, ಚೌತಿ ಹೋಳಿ ದಿನದಂದು “ಹೋಲಿಕಾ ದಹನ್” ಸಮಾರಂಭವನ್ನು ಆಚರಿಸಲಾಗುತ್ತದೆ.

ಇನ್ನೊಂದು ಕಥೆ ಶ್ರೀಕೃಷ್ಣ ಮತ್ತು ಅವನ ಪ್ರೀತಿಯ ರಾಧಾಗೆ ಸಂಬಂಧಿಸಿದ್ದಾಗಿದೆ. ರಾಧಾ ಹೆಚ್ಚು ಸುಂದರವಾಗಿದ್ದಾಳೆಂದು ಶ್ರೀಕೃಷ್ಣನು ತಾಯಿ ಯಶೋಧನಿಗೆ ದೂರು ನೀಡಿದನು. ಇದಕ್ಕೆ ತಾಯಿ ಯಶೋಧೆ, ಕೃಷ್ಣನು ತನ್ನ ಆಯ್ಕೆಯ ಬಣ್ಣದಲ್ಲಿ ರಾಧಾಳನ್ನು ಬಣ್ಣಮಯ ಮಾಡಬೇಕೆಂದು ಸೂಚಿಸಿದಳು. ಚೇಷ್ಟೆಯ ಕೃಷ್ಣನು ತನ್ನ ಪ್ರಿಯತಮೆಯನ್ನು ನಂತರ ಬಣ್ಣಗಳಿಂದ ವರ್ಣಮಯ ಮಾಡಿದನಂತೆ. ಆದ್ದರಿಂದ, ಚೌತಿ ಹೋಳಿಯನ್ನು ಅನುಸರಿಸುವ ದಿನವನ್ನು ಬಣ್ಣಗಳು ಅಥವಾ ಗುಲಾಲ್​ಗಳಿಂದ ಆಚರಿಸಲಾಗುತ್ತದೆ. ಇದನ್ನು ಹೋಳಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಮಥುರಾ ವೃಂದಾವನದ ಸುತ್ತಮುತ್ತಲಿನ ನಗರಗಳು ಈ ಉತ್ಸವವನ್ನು ಪೂರ್ಣ ಉತ್ಸಾಹದಿಂದ ಆಚರಿಸುವ ವಿಧಾನಕ್ಕೆ ಹೆಸರುವಾಸಿಯಾಗಿದೆ.

ಬಣ್ಣಗಳು-ಮನಸ್ಸು:ಹೋಳಿಯ ರೋಮಾಂಚಕ ಬಣ್ಣಗಳಲ್ಲಿ ಮುಳುಗಿರುವಾಗ, ನಮ್ಮ ಮನಸ್ಸು ಮತ್ತು ದೇಹವು ಅಸಂಖ್ಯಾತ ಪ್ರಯೋಜನಗಳನ್ನು ಅನುಭವಿಸುತ್ತದೆ. ಕೆಂಪು ಬಣ್ಣಗಳಂತಹ ಗಾಢ ಬಣ್ಣಗಳು ಹೃದಯ ಬಡಿತ ಮತ್ತು ಉಸಿರಾಟವನ್ನು ಉತ್ತೇಜಿಸುತ್ತವೆ. ಹಳದಿ ಮತ್ತು ನೀಲಿ ಬಣ್ಣಗಳು ನಮ್ಮ ಇಂದ್ರಿಯಗಳ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ತರುವುದಲ್ಲದೆ, ಸಂತೋಷದ ಭಾವದಿಂದ ನಮ್ಮನ್ನು ಸುತ್ತುವರೆಯುತ್ತದೆ.

ಹೋಲಿಕಾ ದಹನದ ಅನುಕೂಲಗಳು:

ಹೋಳಿ ಇತರ ಅನೇಕ ಹಬ್ಬಗಳಂತೆ ಚಳಿಗಾಲ ಮತ್ತು ವಸಂತಕಾಲದ ಮಧ್ಯದಲ್ಲಿ ಬರುತ್ತದೆ. ಈ ಋತುವಿನಲ್ಲಿ ನಮ್ಮ ಸುತ್ತಲಿನ ಗಾಳಿಯಲ್ಲಿ ಹಲವಾರು ಬ್ಯಾಕ್ಟೀರಿಯಾ ಮತ್ತು ಮಾಲಿನ್ಯಕ್ಕೂ ಒಡ್ಡಿಕೊಳ್ಳುತ್ತದೆ. ಚಳಿಗಾಲ ಮತ್ತು ವಸಂತಕಾಲದ ರೂಪಾಂತರದ ಅವಧಿಯು ವಾತಾವರಣದಲ್ಲಿ ಮತ್ತು ದೇಹದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಆದರೆ ಬೆಂಕಿಯ ಸುತ್ತಲೂ ನಡೆದರೆ ನಮ್ಮ ಪರಿಸರವನ್ನು ಡಿಯೋಡರೈಸ್ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾದಿಂದ ದೇಹವನ್ನು ಶುದ್ಧೀಕರಿಸುತ್ತದೆ.

ನೈಸರ್ಗಿಕ ಮತ್ತು ಸಾವಯವ ಬಣ್ಣಗಳು

ಸಾಂಪ್ರದಾಯಿಕವಾಗಿ ಹೋಳಿ ಬಣ್ಣಗಳನ್ನು ದಾಸವಾಳದ ಹೂವುಗಳು, ಗೋರಂಟಿ ಎಲೆಗಳು, ಸೀಸರ್, ಶ್ರೀಗಂಧದ ಮರಗಳಿಂದ ತಯಾರಿಸಲಾಗುತ್ತದೆ. ಈ ನೈಸರ್ಗಿಕ ಬಣ್ಣಗಳು ನಿಮ್ಮ ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಮಾತ್ರವಲ್ಲ, ಚರ್ಮವನ್ನು ಶುದ್ಧೀಕರಿಸುತ್ತದೆ. ಈ ಪದಾರ್ಥಗಳು ಸಹ ದೇಹವನ್ನು ಪುನರ್​ಯೌವನಗೊಳಿಸಲು ಮತ್ತು ಆರೋಗ್ಯಕರ ಹೊಳಪನ್ನು ನೀಡಲು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಈ ಎಲ್ಲಾ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಬಣ್ಣಗಳು ನಮ್ಮ ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ಕೆಂಪು ಬಣ್ಣವು ಶಕ್ತಿಯನ್ನು ತುಂಬುತ್ತದೆ ಮತ್ತು ಹೃದಯದ ಕಾರ್ಯಗಳನ್ನು- ಉಸಿರಾಟವನ್ನು ಉತ್ತೇಜಿಸುತ್ತದೆ. ಹಳದಿ ಅಂಗಗಳ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ ಮತ್ತು ವಿಶೇಷವಾಗಿ ಕರುಳುಗಳಿಗೆ. ನೀಲಿ ಬಣ್ಣವು ನಮ್ಮ ದೇಹ ಮತ್ತು ಇಂದ್ರಿಯಗಳ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಇಂದು, ಕೃತಕವಾಗಿ ತಯಾರಿಸಿದ ಅನೇಕ ಬಣ್ಣಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಚರ್ಮದ ಮೇಲೆ ತುಂಬಾ ಹಾನಿಕಾರಕವಾಗಬಹುದು ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತವೆ. ಆದ್ದರಿಂದ, ಯಾವಾಗಲೂ ನೈಸರ್ಗಿಕವಾಗಿ ತಯಾರಿಸಿದ ಸಾವಯವ ಬಣ್ಣಗಳನ್ನು ಅಥವಾ ಗುಲಾಲ್ ಅನ್ನು ಮಾತ್ರ ಆರಿಸಿ.

ಕೂಲ್ ಡ್ರಿಂಕ್ಸ್ ಮತ್ತು ಇತರ ಭಕ್ಷ್ಯಗಳು:ಪ್ರಸಿದ್ಧ ಹೋಳಿ ಪಾನೀಯಗಳಾದ ಥಂಡೈ ಮತ್ತು ಕಾನ್ಜಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಥಂಡೈ, ರುಚಿಕರವಾದ ಹಾಲಿನ ಪರಿಮಳವನ್ನು ಹೊಂದಿರುತ್ತದೆ. ಬಾದಾಮಿ, ಕಲ್ಲಂಗಡಿ ಬೀಜಗಳು, ಫೆನ್ನೆಲ್ ಬೀಜಗಳು ಮತ್ತು ಗುಲಾಬಿ ದಳಗಳ ಒಳ್ಳೆಯತನವನ್ನು ಹೊಂದಿದೆ. ಕಾನ್ಜಿ, ಉತ್ತರ ಭಾರತದ ಸಾಂಪ್ರದಾಯಿಕ ಪಾನೀಯವನ್ನು ಹುದುಗಿಸಿ ಸಮೃದ್ಧ ಪೋಷಕಾಂಶಗಳು ಮತ್ತು ನಾರಿನಂಶವನ್ನು ಹೊಂದಿರುತ್ತದೆ. ಇದಲ್ಲದೆ, "ಗುಜಿಯಾ" ಎಂಬ ವಿಶೇಷ ಸಿಹಿ ಖಾದ್ಯವನ್ನು ಸಹ ತಯಾರಿಸಲಾಗುತ್ತದೆ. ಇದು ಮಾವಾ ಅಥವಾ ಒಣಗಿದ ಹಾಲನ್ನು ಒಳಗೊಂಡಿರುತ್ತದೆ. ಜೊತೆಗೆ ಒಣ ಹಣ್ಣುಗಳು, ತುರಿದ ತೆಂಗಿನಕಾಯಿ ಮತ್ತು ಇನ್ನೂ ಹೆಚ್ಚಿನದನ್ನು ಹೊಂದಿರುತ್ತದೆ.

ಕೊರೊನಾ ಮಧ್ಯೆ ಹೋಳಿ:

ಮತ್ತೊಮ್ಮೆ, ಭಾರತದ ಅನೇಕ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಹೋಳಿಯ ವರ್ಣರಂಜಿತ ಹಬ್ಬವನ್ನು ಆಚರಿಸಲು ಜನರಲ್ಲಿ ಉತ್ಸಾಹವನ್ನು ಕಡಿಮೆ ಮಾಡಿದೆ. ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿರುವುದರಿಂದ, ಸಾಧ್ಯವಾದಷ್ಟು ಈ ವರ್ಷ ಹೋಳಿ ಆಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಆದಾಗ್ಯೂ, ನೀವು ಆಚರಿಸುತ್ತಿದ್ದರೂ ಸಹ, ಬಹಳ ಸಣ್ಣ ಗುಂಪುಗಳಲ್ಲಿ ಒಟ್ಟುಗೂಡಿಸಿ ಮತ್ತು ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಡಿ:

  • ಹಸ್ತಲಾಘವ, ಅಪ್ಪಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಿ
  • ಹತ್ತಿರದಲ್ಲಿ ನಿಂತು ಮುಖದ ಮೇಲೆ ಬಣ್ಣ ಹಚ್ಚುವ ಬದಲು ದೂರದಿಂದ ಪರಸ್ಪರ ಗುಲಾಲ್ ಎಸೆಯಿರಿ
  • ಅನಾರೋಗ್ಯ ಅಥವಾ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಜನರಿಂದ ದೂರವಿರಿ
  • ಕೈಗಳನ್ನು ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯಿಂದ ದೂರವಿರಿಸಲು ಪ್ರಯತ್ನಿಸಿ
  • ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಲು ಪ್ರಯತ್ನಿಸಿ

ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ. ಆರೋಗ್ಯವೂ ಹೌದು. ಹೋಳಿ ಹಬ್ಬವು ಭಾರತದ ದಕ್ಷಿಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ. ಹೋಲಿಕಾವನ್ನು ಸುಟ್ಟ ನಂತರ ಬೆಳಗ್ಗೆ ಜನರು ಹಣೆಯ ಮೇಲೆ ಬೂದಿ (ವಿಭೂತಿ) ಹಾಕುತ್ತಾರೆ. ಅದರೊಂದಿಗೆ ಅವರು ಮಾವಿನ ಮರದ ಎಲೆಗಳು ಮತ್ತು ಹೂವುಗಳೊಂದಿಗೆ ಚಂದನ್ (ಶ್ರೀಗಂಧದ ಪೇಸ್ಟ್) ಅನ್ನು ಬೆರೆಸಿ ತಿನ್ನುತ್ತಾರೆ.

'ಈಟಿವಿ ಭಾರತ' ಸುಖೀಭವ ತಂಡವು ತನ್ನ ಓದುಗರಿಗೆ ಹೋಳಿ ಹಬ್ಬವು ಸಂತೋಷ ಮತ್ತು ಸುರಕ್ಷಿತ ಹೋಳಿಯನ್ನು ಕರುಣಿಸಲಿ ಎಂದು ಶುಭ ಹಾರೈಸುತ್ತದೆ. ಕೊರೊನಾ ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲವಾದ್ದರಿಂದ, ಮನೆಯಲ್ಲಿಯೇ ಇರಲು ಮತ್ತು ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ABOUT THE AUTHOR

...view details