ಹೈದರಾಬಾದ್(ತೆಲಂಗಾಣ):ಮೆಹಬೂಬಾಬಾದ್ನ ಸರ್ಕಾರಿ ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್ನ ಸೀಲಿಂಗ್ ಕುಸಿದು ಬಿದ್ದಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ICU ವಾರ್ಡ್ನಲ್ಲಿನ ರೋಗಿ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿದೆ.
ಆದರೆ, ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಯನ್ನ ಐಸಿಯುನಿಂದ ಆಸ್ಪತ್ರೆಯ ಇತರೆ ವಾರ್ಡ್ಗೆ ಸ್ಥಳಾಂತರ ಮಾಡಿದ್ದಾರೆ.
ಸ್ಪತ್ರೆ ICU ವಾರ್ಡ್ನಲ್ಲಿ ರೋಗಿ ಮೇಲೆ ಕಳಚಿ ಬಿದ್ದ ಚಾವಣಿ! 'ಗುಲಾಬ್' ಚಂಡಮಾರುತದ ಪರಿಣಾಮ ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3-4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಈಗಾಗಲೇ ಅನೇಕ ಅನಾಹುತ ಸಂಭವಿಸಿವೆ.
ಇದನ್ನೂ ಓದಿರಿ:ಭಾರತ್ ಬಂದ್ : ದೆಹಲಿ ಟಿಕ್ರಿ ಗಡಿ ಬಳಿ ಮೆಟ್ರೋ ಬಂದ್, ರೈಲ್ವೆ ಇಲಾಖೆಯಿಂದ ರೈಲು ಬಂದ್!
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಕೆಲಸ ನಡೆಯುತ್ತಿತ್ತು. ಇದರ ಮಧ್ಯೆ ಕೂಡ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ಮುಂದುವರೆದಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಮಳೆಯಾಗಿರುವ ಕಾರಣ ಮೆಲ್ಛಾವಣಿ ಕುಸಿದು ಬಿದ್ದಿದೆ. ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ವ್ಯಕ್ತಿಯೋರ್ವ ರಸ್ತೆ ದಾಟುತ್ತಿದ್ದಾಗ ಚರಂಡಿಯೊಳಗೆ ಕೊಚ್ಚಿ ಹೋಗಿರುವ ಘಟನೆ ನಡೆದಿತ್ತು.